Ad Widget .

ಗ್ಯಾಸ್​ ಬಳಕೆದಾರರಿಗೆ ಗುಡ್​ನ್ಯೂಸ್​… ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್​​ ಬೆಲೆ ಇಳಿಕೆ

ಸಮಗ್ರ ನ್ಯೂಸ್: ಇಂದು ಗ್ಯಾಸ್​ ಬಳಕೆದಾರರಿಗೆ ಗುಡ್​ನ್ಯೂಸ್​ ಸಿಕ್ಕಿದೆ. ಹೌದು ಹಣಕಾಸು ವರ್ಷದ ಮೊದಲ ದಿನ ಎಲ್​​ಪಿಜಿ ದರವನ್ನು ಕಡಿಮೆ ಮಾಡಲಾಗಿದ್ದು, ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ 30.50 ರೂ. ಇಳಿಕೆಯಾಗಿದೆ. ಇನ್ನು 5ಕೆಜಿ ಎಫ್​ಟಿಎಲ್ ಸಿಲಿಂಡರ್​ ಬೆಲೆ 7.50 ರೂಪಾಯಿ ಇಳಿಕೆಯಾಗಿದೆ. ಈ ಪರಿಷ್ಕೃತ ದರ ಇಂದಿನಿಂದಲೇ ಅನ್ವಯವಾಗಲಿದೆ.

Ad Widget . Ad Widget .

ದೆಹಲಿಯಲ್ಲಿ 19 ಕೆಜಿ ಎಲ್​ಪಿಜಿ ಸಿಲಿಂಡರ್​ ಬೆಲೆ 30.50 ರೂ, ಮುಂಬೈನಲ್ಲಿ 31.50 ರೂ. ಚೆನ್ನೈನಲ್ಲಿ 30.50 ರೂ. ಮತ್ತು ಕೋಲ್ಕತ್ತಾದಲ್ಲಿ 32 ರೂ. ಕಡಿಮೆಯಾಗಿದೆ. ಬೆಲೆ ಇಳಿಕೆ ನಂತರ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್​ 1764.50 ರೂ. ಗಳಿಗೆ ಲಭ್ಯವಾಗಲಿದೆ. ಇನ್ನೂ ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್​ ಬೆಲೆ 1830 ರೂ.ಗೆ ದೊರೆಯಲಿದೆ.

Ad Widget . Ad Widget .

Leave a Comment

Your email address will not be published. Required fields are marked *