ಸಮಗ್ರ ನ್ಯೂಸ್ : ಚಾಮರಾಜನಗರ ಜಿಲ್ಲೆಯ ಸಂತೇಮರಳ್ಳಿ ತಾಲೂಕಿನ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಇಂತಿಷ್ಟು ಹಣವನ್ನ ನಿಗದಿಗೊಳಿಸಿ ಲಂಚದ ಸುಳಿಯಲ್ಲಿ ಸಿಲುಕಿದ್ದ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ.ರೇಣುಕಾದೇವಿ ಅವರನ್ನು ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.
ಲಂಚದ ಬಲೆಯಲ್ಲಿ ಸಿಲುಕಿ ಇತ್ತೀಚಿಗೆ ಬಾರಿ ಸುದ್ದಿಯಲ್ಲಿದ್ದ ಸಂತೇಮರಳ್ಳಿ ಸರ್ಕಾರಿ ಆಸ್ಪತ್ರೆ ವೈದ್ಯೆ ರೇಣುಕಾದೇವಿ ಅವರನ್ನ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.
ಲಂಚದ ಕೂಪದಲ್ಲಿ ಮಿಂದೆದ್ದಿದ್ದ ವೈದ್ಯೆಯ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳದೇ ಏಕಾಏಕಿ ಬೇಗೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆ ಮಾಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ನಾರ್ಮಲ್ ಡೆಲವರಿಗೆ ಮೂರು ಸಾವಿರ, ಶಸ್ತ್ರ ಚಿಕಿತ್ಸೆಗೆ 20 ರಿಂದ 25 ಸಾವಿರ, ಸಿಜೆರಿಯನ್ ಗೆ 30 ಸಾವಿರ ಹಣ ಪಿಕ್ಸ್ ಮಾಡಿದ್ದ ಆರೋಪ ಈ ವೈದ್ಯೆಯ ಮೇಲಿತ್ತು, ಇದಕ್ಕೆ ಪುಷ್ಟಿ ನೀಡುವಂತೆ ಆಶಾ ಕಾರ್ಯಕರ್ತೆಯರ ಬಳಿ ಹಣ ವಸೂಲಿ ಮಾಡಲಾಗ್ತಿದ್ದ ವಿಡಿಯೋ ಸಹ ಲಬ್ಯವಾಗಿತ್ತು. ಇಷ್ಟೆಲ್ಲಾ ಸಾಕ್ಷ್ಯದಾರ ಇದ್ರು ಸಹ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಇವರ ಮೇಲೆ ಮೃದು ಧೋರಣೆ ತಳೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.