March 2024

ನಂಬರ್ ಸೇವ್ ಮಾಡದೇ ವಿಡಿಯೋ ಕಾಲಿಂಗ್, ಫೋನ್ ಕಾಲ್ ಮಾಡಬಹುದು!

ಸಮಗ್ರ ನ್ಯೂಸ್: ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ “ಎಕ್ಸ್ (ಹಿಂದೆ ಟ್ವಿಟರ್)” ನಲ್ಲಿ ಮತ್ತೊಂದು ಅದ್ಭುತ ವೈಶಿಷ್ಟ್ಯವು ಬಂದಿದೆ. X ಅಥವಾ Twitter ಬಳಕೆದಾರರು ಈಗ ತಮ್ಮ ಫೋನ್ ಸಂಖ್ಯೆಯನ್ನು ನಮೂದಿಸದೆಯೇ Twitter ಮೂಲಕ ವೀಡಿಯೊ ಕರೆಗಳು, ಫೋನ್ ಕರೆಗಳನ್ನು ಮಾಡಬಹುದು. ವಿಶೇಷವೆಂದರೆ ಇದಕ್ಕಾಗಿ ಯಾವುದೇ ಪ್ರೀಮಿಯಂ ಚಂದಾದಾರಿಕೆಯನ್ನು ಖರೀದಿಸುವ ಅಗತ್ಯವಿಲ್ಲ. ಮಾಜಿ ಇಂಜಿನಿಯರ್ ಆಗಿರುವ ಎನ್ರಿಕ್ ಬರಗಾನ್ ಇದನ್ನು ‘X’ ನಲ್ಲಿ ವಿವರಿಸುತ್ತಾರೆ..” ನಾವು ಪ್ರೀಮಿಯಂ ಚಂದಾದಾರಿಕೆ ಇಲ್ಲದೆ ಬಳಕೆದಾರರಿಗೆ ಆಡಿಯೋ ಮತ್ತು ವೀಡಿಯೊ ಕರೆಯನ್ನು ಕ್ರಮೇಣ […]

ನಂಬರ್ ಸೇವ್ ಮಾಡದೇ ವಿಡಿಯೋ ಕಾಲಿಂಗ್, ಫೋನ್ ಕಾಲ್ ಮಾಡಬಹುದು! Read More »

ಇಸ್ರೋದಲ್ಲಿದೆ ಕೆಲಸ ಮಾಡೋದು ನಿಮ್ಮ ಕನಸಾ? ಇಲ್ಲಿದೆ ನೋಡಿ ನನಸಾಗಿಸುವ ಅವಕಾಶ?

ಸಮಗ್ರ ಉದ್ಯೋಗ: Indian Space Research Organization-ISRO ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 224 ಡ್ರಾಟ್ಸ್​ಮ್ಯಾನ್​, ಟೆಕ್ನಿಷಿಯನ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮಾರ್ಚ್​ 2, 2024 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಎಂಜಿನಿಯರಿಂಗ್ ಹಾಗೂ ಡಿಪ್ಲೊಮಾ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಹುದ್ದೆಯ ಮಾಹಿತಿ:ವಿಜ್ಞಾನಿ/ಇಂಜಿನಿಯರ್ (001-002) -3ವಿಜ್ಞಾನಿ/ಇಂಜಿನಿಯರ್ (003-004)- 2ತಾಂತ್ರಿಕ ಸಹಾಯಕ- 55ವೈಜ್ಞಾನಿಕ ಸಹಾಯಕ -6ಗ್ರಂಥಾಲಯ ಸಹಾಯಕ- 1ತಂತ್ರಜ್ಞ-ಬಿ -142ಡ್ರಾಫ್ಟ್‌ಮನ್-ಬಿಅಗ್ನಿಶಾಮಕ-ಎ

ಇಸ್ರೋದಲ್ಲಿದೆ ಕೆಲಸ ಮಾಡೋದು ನಿಮ್ಮ ಕನಸಾ? ಇಲ್ಲಿದೆ ನೋಡಿ ನನಸಾಗಿಸುವ ಅವಕಾಶ? Read More »

ಮುಖವಾಡದ ಬದುಕು ಸರಿಯಲ್ಲ; ಶ್ರೀ. ಭಾಸ್ಕರ್ ಕೋಡಿಂಬಾಳ|ಕಸಾಪ ಪುತ್ತೂರು ಸರ್ವರನ್ನು ಒಗ್ಗೂಡಿಸುತ್ತಿದೆ;ದೆಹಲಿ ವಸಂತ ಶೆಟ್ಟಿ ಬೆಳ್ಳಾರೆ

ಸಮಗ್ರ ನ್ಯೂಸ್: ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ, ರೋಟರಿ ಕ್ಲಬ್ ಪುತ್ತೂರು ಸ್ವರ್ಣ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ಫೆ. 25ರಂದು ಪುತ್ತೂರಿನ ಮನಿಷಾ ಸಭಾಂಗಣದಲ್ಲಿ ಯುವ ಕವಯತ್ರಿ ಪ್ರಿಯಾ ಸುಳ್ಯರವರ ಬಾಳಿಗೆ ಬೆಳಕು ಕೃತಿ ಬಿಡುಗಡೆ ಸಮಾರಂಭವನ್ನು ದೀಪ ಪ್ರಜ್ವಲಿಸಿ ಮಾತನಾಡಿದ ನ್ಯಾಯವಾದಿ ಭಾಸ್ಕರ್ ಕೋಡಿಂಬಾಳ ಅವರು “ಸಾಹಿತ್ಯ ಎನ್ನುವುದು ನಮ್ಮನ್ನ ಬೆಸೆಯುವಂತದ್ದು, ಸಾಹಿತಿಗಳು ಬರೆದಂತೆ ನಡೆಯುವ ಗುಣ ಹೊಂದಿರುವವರಾಗಿದ್ದಲ್ಲಿ ಸ್ವಚ್ಛ ಸಮಾಜದ ನಿರ್ಮಾಣ ಸಾಧ್ಯ ಎಂದು ಕೃತಿಕಾರರಿಗೆ

ಮುಖವಾಡದ ಬದುಕು ಸರಿಯಲ್ಲ; ಶ್ರೀ. ಭಾಸ್ಕರ್ ಕೋಡಿಂಬಾಳ|ಕಸಾಪ ಪುತ್ತೂರು ಸರ್ವರನ್ನು ಒಗ್ಗೂಡಿಸುತ್ತಿದೆ;ದೆಹಲಿ ವಸಂತ ಶೆಟ್ಟಿ ಬೆಳ್ಳಾರೆ Read More »

ಮಂಗಳೂರು: ಹಿರಿಯ ಪತ್ರಕರ್ತ‌ ಮನೋಹರ ಪ್ರಸಾದ್ ಇನ್ನಿಲ್ಲ

ಸಮಗ್ರ ನ್ಯೂಸ್: ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಅವರು ಶುಕ್ರವಾರ ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೂಲತಃ ಕಾರ್ಕಳ ತಾಲೂಕಿನ ಕರ್ವಾಲು ಗ್ರಾಮದ ಮನೋಹರ ಪ್ರಸಾದ್ ಮಂಗಳೂರಿನಲ್ಲಿ ಪದವಿ ಶಿಕ್ಷಣ ಮುಗಿಸಿ “ನವ ಭಾರತ’ ಪತ್ರಿಕೆಯಲ್ಲಿ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ ಉದಯವಾಣಿ ಪತ್ರಿಕೆಯಲ್ಲಿ ವರದಿಗಾರರಾಗಿ ಸೇರ್ಪಡೆಗೊಂಡ ಅವರು ಸುದೀರ್ಘ ಕಾಲ ಮುಖ್ಯ ವರದಿಗಾರರಾಗಿ, ಸಹಾಯಕ ಸಂಪಾದಕರಾಗಿ, ಮಂಗಳೂರು ಬ್ಯೂರೋ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಓರ್ವ ಸಾಹಿತಿಯೂ ಆಗಿದ್ದ ಮನೋಹರ ಪ್ರಸಾದ್ ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ

ಮಂಗಳೂರು: ಹಿರಿಯ ಪತ್ರಕರ್ತ‌ ಮನೋಹರ ಪ್ರಸಾದ್ ಇನ್ನಿಲ್ಲ Read More »

ಝೀರೊ‌ ಟ್ರಾಫಿಕ್ ಮಾಡಿ ರೋಗಿಯ ಹೃದಯ ಕಸಿಗೆ ನೆರವಾದ ಬೆಂಗಳೂರು ಟ್ರಾಫಿಕ್ ಪೊಲೀಸರು

ಸಮಗ್ರ ನ್ಯೂಸ್: ಬೆಂಗಳೂರಲಿಂದು ಟ್ರಾಫಿಕ್ ಪೊಲೀಸರು ರೋಗಿಯೊಬ್ಬರ ಹೃದಯ ಕಸಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಝೀರೊ‌ ಟ್ರಾಫಿಕ್ ವ್ಯವಸ್ಥೆ ಮಾಡುವ ಮೂಲಕ ರೋಗಿಯ ಬಾಳಿಗೆ ಬೆಳಕಾಗಿದ್ದಾರೆ. ಹೆಬ್ಬಾಳದ ಆಸ್ಟರ್ ಆಸ್ಪತ್ರೆಯಲ್ಲಿ ಬ್ರೈನ್ ಡೆಡ್ ಆಗಿ ಮೃತಪಟ್ಟವನ ಹೃದಯವನ್ನು ಚೆನ್ನೈನಲ್ಲಿರುವ ರೋಗಿಯ ಹೃದಯ ಕಸಿಗೆ ರವಾನೆ ಮಾಡಬೇಕಾಗಿತ್ತು. ಈ ಹಿನ್ನಲೆ ಬೆಂಗಳೂರು ಉತ್ತರ ವಿಭಾಗ ಸಂಚಾರ ಪೊಲೀಸರು, ಗ್ರೀನ್ ಕಾರಿಡಾರ್ ಮೂಲಕ ಏರ್ಪೋರ್ಟ್​ವರೆಗೂ ತಲುಪಿಸಲು ಆ್ಯಂಬುಲೆನ್ಸ್​ಗೆ ಝೀರೊ‌ ಟ್ರಾಫಿಕ್ ಮಾಡಿಕೊಟ್ಟಿದ್ದಾರೆ. ಪೊಲೀಸರ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಝೀರೊ‌ ಟ್ರಾಫಿಕ್ ಮಾಡಿ ರೋಗಿಯ ಹೃದಯ ಕಸಿಗೆ ನೆರವಾದ ಬೆಂಗಳೂರು ಟ್ರಾಫಿಕ್ ಪೊಲೀಸರು Read More »

ಬೆಂಗಳೂರು ಮಹಾನಗರ ಪಾಲಿಕೆಯ ಬಜೆಟ್ ಘೋಷಣೆ|ಏನೆಲ್ಲ ಅನುದಾನವಿದೆ?ಇಲ್ಲಿದೆ ಮಾಹಿತಿ

ಸಮಗ್ರ ನ್ಯೂಸ್: 2024-25ನೇ ಸಾಲಿನ ಬೆಂಗಳೂರು ಮಹಾನಗರ ಪಾಲಿಕೆಯ ಬಜೆಟ್​​(BBMP Budget) ಘೋಷಣೆ ಮಾಡಲಾಗಿದೆ. ಇದರಲ್ಲಿ ಬೆಂಗಳೂರಿನ ನೂರು ಕಡೆಗಳಲ್ಲಿ ಮಹಿಳೆಯರಿಗಾಗಿ ‘ಶಿ ಟಾಯ್ಲೆಟ್ ಗಳ ನಿರ್ಮಾಣ, ಪೌರಕಾರ್ಮಿಕರ ವಿಶ್ರಾಂತಿ ತಾಣಕ್ಕೆ 10 ಕೋಟಿ ರೂ. ಅನುದಾನ ಸೇರಿದಂತೆ ಹಲವು ಹೊಸ ಯೋಜನೆಗಳನ್ನು ಬಿಬಿಎಂಪಿ ವಿಶೇಷ ಅಯುಕ್ತ ಶಿವಾನಂದ ಕಲ್ಕೆರಿ ಬೆಂಗಳೂರಿನ ಟೌನ್ ಹಾಲ್​ನಲ್ಲಿ ಬಜೆಟ್ ಮಂಡನೆ ಮಾಡಿದರು. ಪೌರಕಾರ್ಮಿಕರಿಗೆ ‘ಶರಣೆ ಸತ್ಯಕ್ಕ’ ಪ್ರಶಸ್ತಿ ನೀಡಲು ಹಾಗೂ ಪ್ರಶಸ್ತಿ ಜೊತೆಗೆ 50 ಸಾವಿರ ರೂ. ಬಹುಮಾನ ನೀಡುವ

ಬೆಂಗಳೂರು ಮಹಾನಗರ ಪಾಲಿಕೆಯ ಬಜೆಟ್ ಘೋಷಣೆ|ಏನೆಲ್ಲ ಅನುದಾನವಿದೆ?ಇಲ್ಲಿದೆ ಮಾಹಿತಿ Read More »

ಪಕ್ಷೇತರರಾಗಿ ಸ್ಪರ್ಧಿಸಲಿದ್ದಾರೆ ಅರುಣ್ ಕುಮಾರ್ ಪುತ್ತಿಲ| ಸ್ಪರ್ಧೆ ಸ್ಪಷ್ಟಪಡಿಸಿದ ಪುತ್ತಿಲ‌ ಪರಿವಾರ

ಸಮಗ್ರ ನ್ಯೂಸ್: ಬಿಜೆಪಿ ಮತ್ತು ಪುತ್ತಿಲ ಪರಿವಾರ ಸಂಘಟನೆಯ ನಡುವಿನ ಮಾತುಕತೆ ಫಲಪ್ರದ ಆಗದೇ ಇರುವುದರಿಂದ ಲೋಕಸಭಾ ಚುನಾವಣೆಯಲ್ಲಿ ಅರುಣ್‌ಕುಮಾರ್ ಪುತ್ತಿಲ, ಪಕ್ಷೇತರರಾಗಿ ಕಣಕ್ಕಿಳಿಯಲಿದ್ದಾರೆ ಎಂದು ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನಕುಮಾರ್ ಮಾರ್ತ ತಿಳಿಸಿದ್ದಾರೆ. ಗುರುವಾರ ಪುತ್ತೂರಿನಲ್ಲಿ ಮಾತನಾಡಿದ ಅವರು, ‘ಮುಂದಿನ ಎಲ್ಲ ಚುನಾವಣೆಗಳಲ್ಲಿ ಪುತ್ತಿಲ ಪರಿವಾರ ಸಂಘಟನೆ ಜಿಲ್ಲೆಯಲ್ಲಿ ಸ್ಪರ್ಧಿಸುತ್ತದೆ. ಮಾತೃಪಕ್ಷವಾದ ಬಿಜೆಪಿ ಜತೆ ‌ಪುತ್ತಿಲ ಪರಿವಾರ ವಿಲೀನ ಮಾಡಲು ನಮ್ಮದು ಅಭ್ಯಂತರ ಇರಲಿಲ್ಲ. ಕಾರ್ಯಕರ್ತರ ಭಾವನೆಗೆ ಬೆಲೆಕೊಟ್ಟು ಅರುಣ್ ಕುಮಾರ್ ಪುತ್ತಿಲ ಅವರಿಗೆ ಪುತ್ತೂರು

ಪಕ್ಷೇತರರಾಗಿ ಸ್ಪರ್ಧಿಸಲಿದ್ದಾರೆ ಅರುಣ್ ಕುಮಾರ್ ಪುತ್ತಿಲ| ಸ್ಪರ್ಧೆ ಸ್ಪಷ್ಟಪಡಿಸಿದ ಪುತ್ತಿಲ‌ ಪರಿವಾರ Read More »

ನಟ ಶಿವರಾಂ ಬದುಕಿದ್ದಾರೆ, ವದಂತಿಗಳಿಗೆ ಕಿವಿಗೊಡಬೇಡಿ| ಅಳಿಯ, ನಟ ಪ್ರದೀಪ್ ಸ್ಪಷ್ಟನೆ

ಸಮಗ್ರ ನ್ಯೂಸ್: ಮಾಜಿ ಎಐಎಸ್​ ಅಧಿಕಾರಿ, ಬಿಜೆಪಿ ಮುಖಂಡ, ಹಿರಿಯ ನಟ ಕೆ. ಶಿವರಾಂ ಅವರಿಗೆ ಹೃದಯಾಘಾತವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸದ್ಯ ಚಿಂತಾಜನಕವಾಗಿದ್ದು, ಅವರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಶಿವರಾಂ ಅವರ ಅಳಿಯ, ನಟ ಪ್ರದೀಪ್​ ಮಾಹಿತಿ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ನಟ ಪ್ರದೀಪ್​, ನನ್ನ ಮಾವ ಕೆ. ಶಿವರಾಂ ರವರು ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯುತ್ತಿದ್ದಾರೆ. ದಯವಿಟ್ಟು ಯಾರೂ ಅಪಪ್ರಚಾರ ಮಾಡಬೇಡಿ ಎಂದು

ನಟ ಶಿವರಾಂ ಬದುಕಿದ್ದಾರೆ, ವದಂತಿಗಳಿಗೆ ಕಿವಿಗೊಡಬೇಡಿ| ಅಳಿಯ, ನಟ ಪ್ರದೀಪ್ ಸ್ಪಷ್ಟನೆ Read More »