March 2024

ಕಡಬ: ಬೈಕ್- ಮಿನಿಗೂಡ್ಸ್ ವಾಹನ ನಡುವೆ ಡಿಕ್ಕಿ| ಕಾಲೇಜು ವಿದ್ಯಾರ್ಥಿ ದುರ್ಮರಣ

ಸಮಗ್ರ ನ್ಯೂಸ್: ಬೈಕ್ ಹಾಗೂ ಮಿನಿ ಗೂಡ್ಸ್ ವಾಹನವೊಂದರ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಗೋಳಿತ್ತಡಿ ಸಮೀಪ ನಡೆದಿದೆ. ಮೃತಪಟ್ಟ ವಿದ್ಯಾರ್ಥಿ ಪುತ್ತೂರು ವಿವೇಕಾನಂದ ಪದವಿ ಕಾಲೇಜಿನ ಅಂತಿಮ ಬಿ.ಎ.ವಿದ್ಯಾರ್ಥಿ, ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಅಜೀರ ನಿವಾಸಿ ಗುರುವಪ್ಪ ಅವರ ಪುತ್ರ ಶ್ರೀಜಿಸ್ (20) ಎಂದು ಗುರುತಿಸಲಾಗಿದೆ. ಶ್ರೀಜಿಸ್‌ರವರು ರಾಮಕುಂಜ ಶಾರದಾನಗರದಲ್ಲಿರುವ ಚಿಕ್ಕಮ್ಮನ ಮನೆಗೆ ಬಂದು ರಾತ್ರಿ ಅಲ್ಲಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ವೇಳೆ ಉಪ್ಪಿನಂಗಡಿಯಿಂದ […]

ಕಡಬ: ಬೈಕ್- ಮಿನಿಗೂಡ್ಸ್ ವಾಹನ ನಡುವೆ ಡಿಕ್ಕಿ| ಕಾಲೇಜು ವಿದ್ಯಾರ್ಥಿ ದುರ್ಮರಣ Read More »

ಸುಳ್ಯ: ಬೆಳ್ಳಂಬೆಳಗ್ಗೆ ಮನೆಮೇಲೆ ಎನ್ಐಎ ದಾಳಿ; ಪರಿಶೀಲನೆ

ಸಮಗ್ರ ನ್ಯೂಸ್: ಎನ್ಐಎ ಅಧಿಕಾರಿಗಳ ತಂಡವೊಂದು ಬೆಳ್ಳಂಬೆಳಗ್ಗೆ ಮನೆಯೊಂದರ ಮೇಲೆಲ ದಾಳಿ ನಡೆಸಿದ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಠಾಣಾ ವ್ಯಾಪ್ತಿಯ ಎಣ್ಮೂರು ಸಮೀಪದ ಕುಲಾಯಿತೋಡು ಎಂಬಲ್ಲಿ ಮಂಗಳವಾರದಂದು ಬೆಳ್ಳಂಬೆಳಗ್ಗೆ ನಡೆದಿದೆ. ಎನ್ಐಎ ಅಧಿಕಾರಿಗಳ ತಂಡವು ಇಲ್ಲಿನ ಮನೆಯೊಂದಕ್ಕೆ ದಿಢೀರ್ ದಾಳಿ ಮಾಡಿದ್ದು, ಮಾಹಿತಿ ಕಲೆ ಹಾಕಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿ ನಡೆದ ದಾಳಿ ಇದಾಗಿದೆ ಎನ್ನಲಾಗಿದ್ದು, ಅಧಿಕಾರಿಗಳನ್ನು ಸಂಪರ್ಕಿಸಿದಾಗ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಬೆಳ್ಳಾರೆ ಮಾತ್ರವಲ್ಲದೇ, ದೇಶದ 7 ಕಡೆ ಏಕಕಾಲದಲ್ಲಿ NIA

ಸುಳ್ಯ: ಬೆಳ್ಳಂಬೆಳಗ್ಗೆ ಮನೆಮೇಲೆ ಎನ್ಐಎ ದಾಳಿ; ಪರಿಶೀಲನೆ Read More »

ಸಾಲಕ್ಕೆ ಬೇಸತ್ತು ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಸಮಗ್ರ ನ್ಯೂಸ್: ಸಾಲದಿಂದ ಬೇಸತ್ತು ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಸಾಲಬಾಧೆಯಿಂದ ಮನನೊಂದ ಮಗ ಹಾಗೂ ತಾಯಿ ಯಲವಿಗೆ ರೈಲು ನಿಲ್ದಾಣದ ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ ತಾಯಿ-ಮಗ ಸಾವಿನ ಸುದ್ದಿ ಕೇಳಿ ಮತ್ತೋರ್ವ ಮಹಿಳೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಜುನಾಥ ತೇಲಿ (26) ಸಾವಕ್ಕ ತೇಲಿ (40) ರೇಣವ್ವ (39) ಆತ್ಮಹತ್ಯೆಗೆ ಶರಣಾದವರು. ಇವರೆಲ್ಲ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಗೋನಾಳ ಗ್ರಾಮದ

ಸಾಲಕ್ಕೆ ಬೇಸತ್ತು ಒಂದೇ ಕುಟುಂಬದ ಮೂವರು ಆತ್ಮಹತ್ಯೆ Read More »

ಪಾಕ್ ಜಿಂದಾಬಾದ್ ಕೂಗಿರುವುದು, ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಮಾಡಿದ್ದು ಸಿಲ್ಲಿ ಅಟೆಂಪ್ಟ್: ಸಚಿವ ಶರಣಪ್ರಕಾಶ್​ ಪಾಟೀಲ್

ಸಮಗ್ರ ನ್ಯೂಸ್: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ವಿಚಾರ ಮತ್ತು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಬಾಂಬ್​ ಸ್ಫೋಟ ಈ ಎರಡು ಪ್ರಕರಣಗಳ ಕುರಿತಾಗಿ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್​ ಪಾಟೀಲ್ ಮಾತನಾಡಿದ್ದಾರೆ. ರಾಜ್ಯದಲ್ಲಿನ ಶಾಂತಿ-ಸುವ್ಯವಸ್ಥೆ ಕದಡಲು ಈ ರೀತಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ನಮ್ಮ ಸರ್ಕಾರ ಸೊಪ್ಪು ಹಾಕಲ್ಲ, ಇಂತಹ ಸಿಲ್ಲಿ ಅಟೆಂಪ್ಟ್‌‌​​​​ಗಳಿಂದ ಸರ್ಕಾರ ವಿಚಲಿತವಾಗುವುದಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶರಣಪ್ರಕಾಶ ಪಾಟೀಲ್​ ಅವರ ಹೇಳಿಕೆಯನ್ನು ವಿರೋಧಿಸಿ ರಾಜ್ಯ ಬಿಜೆಪಿ ಘಟಕ ಟ್ವೀಟ್​

ಪಾಕ್ ಜಿಂದಾಬಾದ್ ಕೂಗಿರುವುದು, ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಮಾಡಿದ್ದು ಸಿಲ್ಲಿ ಅಟೆಂಪ್ಟ್: ಸಚಿವ ಶರಣಪ್ರಕಾಶ್​ ಪಾಟೀಲ್ Read More »

ಬೀದರ್ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಭೂಕಂಪ

ಸಮಗ್ರ ನ್ಯೂಸ್: ಇಂದು ಬೀದರ್ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಭೂಕಂಪ ಸಂಭವಿಸಿದೆ. ಬೀದರ್ ತಾಲೂಕಿನ ಇಸ್ಲಾಂಪುರ ಯರನಳ್ಳಿಯಲ್ಲಿ ತೀವ್ರತೆ 1.85, ಬಸವಕಲ್ಯಾಣ ತಾಲೂಕಿನ ರಾಜೇಶ್ವರದಲ್ಲಿ 2.6ರಷ್ಟು, ಬಸವಕಲ್ಯಾಣ ತಾಲೂಕಿನ ಯರಬಾಗನಲ್ಲಿ 3.2ರಷ್ಟು ಭೂಕಂಪನ ವಾಗಿದ್ದು, ಭೂಕಂಪನ ತೀವ್ರತೆ ರಿಕ್ಟರ್ ಮಾಪನದಲ್ಲಿ ದಾಖಲಾಗಿದೆ. ಇಂದು ಸಂಜೆ ಸುಮಾರು 7.40ರ ಹೊತ್ತಿಗೆ ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದ್ದು, ಜನ ಆತಂಕಗೊಂಡಿದ್ದಾರೆ.

ಬೀದರ್ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಭೂಕಂಪ Read More »

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಮೂವರು ಅರೆಸ್ಟ್

ಸಮಗ್ರ ನ್ಯೂಸ್: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ತಾಜ್, ಮುನಾವರ್, ಮೊಹಮ್ಮದ್ ನಾಶಿಪುಡಿ ಬಂಧಿತ ಆರೋಪಿಗಳು. ವಿಧಾನಸೌಧ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದುಕೊಂಡು ಹೋಗಿದ್ದಾರೆ. ಇತ್ತೀಚೆಗಷ್ಟೇ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಜಯಗಳಿಸಿದ ಸಂದರ್ಭದಲ್ಲಿ ಅವರ ಬೆಂಬಲಿಗರು ಸಂಭ್ರಮಾಚರಣೆ ವೇಳೆ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದು, ವಿವಾದಕ್ಕೆ ಕಾರಣವಾಗಿತ್ತು. ರಾಜಕೀಯ ಆರೋಪ ಪ್ರತ್ಯಾರೋಪಗಳ ನಡುವೆ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಮೂವರು ಅರೆಸ್ಟ್ Read More »

ಸುಳ್ಯ:ಎಲಿಮಲೆಯಲ್ಲಿ ಉಚಿತ ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ಶಿಬಿರ

ಸಮಗ್ರ ನ್ಯೂಸ್: ಸೇವಾ ಭಾರತೀ Helpline ಟ್ರಸ್ಟ್ ಸುಳ್ಯ (ರಿ) ಮತ್ತು ಅಮರ ಸಂಘಟನಾ ಸಮಿತಿ (ರಿ.) ಸುಳ್ಯ ಇದರ ಆಶ್ರಯದಲ್ಲಿ ಮಿತ್ರ ಬಳಗ ಎಲಿಮಲೆ ಹಾಗೂ ಎಜೆ ಆಸ್ಪತ್ರೆ ಮಂಗಳೂರು ಸಹಕಾರದೊಂದಿಗೆ ಮಾ. 03ರಂದು ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಬೆಳ್ಳಿಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಿತ್ರ ಬಳಗ (ರಿ) ಎಲಿಮಲೆ ಇದರ ಅಧ್ಯಕ್ಷ ಉದಯಕುಮಾರ್ ಚಳ್ಳ ವಹಿಸಿದರು. ಜ್ಞಾನದೀಪ ವಿದ್ಯಾ ಸಂಸ್ಥೆಯ ಸಂಚಾಲಕ

ಸುಳ್ಯ:ಎಲಿಮಲೆಯಲ್ಲಿ ಉಚಿತ ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ಶಿಬಿರ Read More »

ಕಡಬ: ಅಪಪ್ರಚಾರಕ್ಕೆ ನೊಂದು ಸಾವಿಗೆ ಶರಣಾದ ಯುವತಿ

ಸಮಗ್ರ ನ್ಯೂಸ್: ಅಪಪ್ರಚಾರಕ್ಕೆ ಮನನೊಂದ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕಾಣಿಯೂರಿನಲ್ಲಿ ನಡೆದಿದೆ. ಇಲ್ಲಿನ ಅನಿಲ ಮನೆ ಪದ್ಮಯ್ಯ ಗೌಡ ಅವರ ಪುತ್ರಿ ದಿವ್ಯಾ ಶ್ರೀ(26) ಜೀವಾಂತ್ಯ ಮಾಡಿಕೊಂಡ ದುರ್ದೈವಿ. ತಮ್ಮ ಮನೆಯ ಅಡುಗೆ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದು, ತಕ್ಷಣ ಗಮನಿಸಿದ ಮನೆಯವರು ಆಸ್ಪತ್ರೆಗೆ ದಾಖಲಿಸಿದರೂ ಅದಾಗಲೇ ದಿವ್ಯಾ ಶ್ರೀ ಮೃತಪಟ್ಟರೆನ್ನಲಾಗಿದೆ. ಅಪಪ್ರಚಾರಕ್ಕೆ ಮನನೊಂದು ದಿವ್ಯಾ ಜೀವಾಂತ್ಯ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಯುವತಿಯ ತಂದೆ ಪದ್ಮಯ್ಯ ಗೌಡ ಅನಿಲ

ಕಡಬ: ಅಪಪ್ರಚಾರಕ್ಕೆ ನೊಂದು ಸಾವಿಗೆ ಶರಣಾದ ಯುವತಿ Read More »

ಕಡಬ: ಆ್ಯಸಿಡ್ ದಾಳಿಗೆ ನಲುಗಿದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ| ಪ್ರೀತಿಯ ತಿರಸ್ಕಾರ ತಂದಿತೇ ಬಾಳಿಗೆ ಸಂಚಕಾರ!?

ಸಮಗ್ರ ನ್ಯೂಸ್: ಕಾಲೇಜು ಆವರಣದಲ್ಲಿ ದ್ವಿತೀಯ ಪಿಯು ಪರೀಕ್ಷೆ ಬರೆಯಲು ಸಿದ್ಧರಾಗುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಯುವಕನೋರ್ವ ಆಯಸಿಡ್ ದಾಳಿ ನಡೆಸಿರುವ ಘಟನೆ ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ(ಮಾ.4) ಬೆಳಿಗ್ಗೆ ನಡೆದಿದೆ. ಪ್ರಕರಣದ ಆರೋಪಿಯನ್ನು ಕೇರಳದ ಮಲಪ್ಪುರಂ ಜಿಲ್ಲೆಯ ನೆಲಂಬೂರು ನಿವಾಸಿ ಎಂಬಿಎ ವಿದ್ಯಾರ್ಥಿ ಅಬೀನ್ (23) ಎಂದು ಗುರುತಿಸಲಾಗಿದೆ. ಸಮವಸ್ತ್ರ ಧರಿಸಿದ್ದ ಆರೋಪಿ:ಆರೋಪಿಯು ಸೋಮವಾರದಂದು ಕಡಬ ಕಾಲೇಜಿನ ಸಮವಸ್ತ್ರವನ್ನು ಹೋಲುವ ಬಿಳಿ ಅಂಗಿ ಮತ್ತು ನೀಲಿ ಪ್ಯಾಂಟ್ ಧರಿಸಿ ಆಗಮಿಸಿದ್ದು, ಪರೀಕ್ಷೆಗೆ ಸಿದ್ಧರಾಗುತ್ತಿದ್ದ ಇತರ

ಕಡಬ: ಆ್ಯಸಿಡ್ ದಾಳಿಗೆ ನಲುಗಿದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ| ಪ್ರೀತಿಯ ತಿರಸ್ಕಾರ ತಂದಿತೇ ಬಾಳಿಗೆ ಸಂಚಕಾರ!? Read More »

ನಿಮ್ಮ ಡ್ರೀಮ್ ಜಾಬ್ ಹುಡುಕುತ್ತಿದ್ದರೆ ಇಲ್ಲಿದೆ ನೋಡಿ ಸೂಪರ್ ಅವಕಾಶ!

ಸಮಗ್ರ ಉದ್ಯೋಗ: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 7 ಪ್ರೋಗ್ರಾಮ್ ಮ್ಯಾನೇಜರ್, ಮ್ಯಾನೇಜರ್​​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ರಾಜ್ಯ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈಗಲೇ ಅರ್ಜಿ ಹಾಕಿ. ಆನ್​​ಲೈನ್​ ಮೂಲಕ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕರ್ನಾಟಕದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಮಾರ್ಚ್​ 18, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಹುದ್ದೆಯ ಮಾಹಿತಿ:ಪ್ರೋಗ್ರಾಮ್ ಮ್ಯಾನೇಜರ್- 1ಸೀನಿಯರ್

ನಿಮ್ಮ ಡ್ರೀಮ್ ಜಾಬ್ ಹುಡುಕುತ್ತಿದ್ದರೆ ಇಲ್ಲಿದೆ ನೋಡಿ ಸೂಪರ್ ಅವಕಾಶ! Read More »