March 2024

ಪರೀಕ್ಷೆ ಮುಗಿದ ಮರುದಿನ ಫಲಿತಾಂಶ/ ದಾಖಲೆ ನಿರ್ಮಿಸಿದ ಕೊಡಗು ವಿಶ್ವವಿದ್ಯಾನಿಲಯ

ಸಮಗ್ರ ನ್ಯೂಸ್: ಕೊಡಗು ವಿಶ್ವವಿದ್ಯಾನಿಲಯ ಮತ್ತು ಸಂಯೋಜಿತ ಕಾಲೇಜುಗಳಲ್ಲಿ 2023-24ನೇ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಬಿಎ, ಬಿಕಾಂ, ಬಿಬಿಎ, ಬಿಸಿಎ ಮತ್ತು ಬಿಎಸ್‍ಸಿ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳ ಮೊದಲ ಸೆಮಿಸ್ಟರ್ ಪರೀಕ್ಷೆಯ ಪತ್ರಿಕೆಗಳ ಮೌಲ್ಯಮಾಪನ ಪೂರ್ಣಗೊಂಡಿದೆ. ಬಿಬಿಎ, ಬಿಸಿಎ ಮತ್ತು ಬಿಎಸ್‍ಸಿ ಫಲಿತಾಂಶವನ್ನು ಮಾರ್ಚ್ 5 ರಂದು ಘೋಷಿಸಲಾಯಿತು. ಬಿಎ ಪದವಿಯ ಫಲಿತಾಂಶವನ್ನು ಸಹ ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಕೊಡಗು ವಿವಿ ತಿಳಿಸಿದೆ. ಕೊಡಗು ವಿಶ್ವವಿದ್ಯಾನಿಲಯದ ನೂತನ ವಿದ್ಯಾರ್ಥಿಗಳ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳು ಜನವರಿ 25 […]

ಪರೀಕ್ಷೆ ಮುಗಿದ ಮರುದಿನ ಫಲಿತಾಂಶ/ ದಾಖಲೆ ನಿರ್ಮಿಸಿದ ಕೊಡಗು ವಿಶ್ವವಿದ್ಯಾನಿಲಯ Read More »

ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋ ರೈಲು/ ಇಂದು ಮೋದಿ ಉದ್ಘಾಟನೆ

ಸಮಗ್ರ ನ್ಯೂಸ್: ಪಶ್ಚಿಮ ಬಂಗಾಳದ ಅತೀ ದೊಡ್ಡ ನದಿ ಹೂಗ್ಲಿ ನದಿಯ ಅಡಿಯಿಂದ ಸಾಗುವ ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋ ರೈಲು ಉದ್ಘಾಟನೆಗೆ ಸಜ್ಜಾಗಿದ್ದು, ಇಂದು ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಒಟ್ಟು 6 ನಿಲ್ದಾಣಗಳನ್ನು ಹೊಂದಿರುವ ಕೋಲ್ಕತಾ ಹಾಗೂ ಹೌರಾ ನಗರವನ್ನು ಸಂಪರ್ಕಿಸುವ ಈ ಮೆಟ್ರೋ ರೈಲು ಪಶ್ಚಿಮ ಬಂಗಾಳದ ಜೀವನಾಡಿ ಎಂದೇ ಗುರುತಿಸಿಕೊಂಡಿದೆ. ಈ ಎರಡು ಅವಳಿ ನಗರಕ್ಕೆ ಸಂಪರ್ಕ ಕಲ್ಪಿಸುವ ಈ ಮೆಟ್ರೋ ರೈಲು ಹೂಗ್ಲಿ ನದಿಯ ನೀರಿನೊಳಗಿನಿಂದ ಸಾಗಲಿದೆ. ಒಟ್ಟು

ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋ ರೈಲು/ ಇಂದು ಮೋದಿ ಉದ್ಘಾಟನೆ Read More »

ಸಾಫ್ಟ್‌ವೇರ್ ನವೀಕರಣ/ ಹತ್ತು ದಿನಗಳ ಕಾಲ ಇಂಧನ ಇಲಾಖೆಯ ಆನ್‍ಲೈನ್ ಸೇವೆಗಳು ಅಲಭ್ಯ

ಸಮಗ್ರ ನ್ಯೂಸ್: ಸಾಫ್ಟ್‌ವೇರ್ ಅಪ್‍ಡೇಟ್ ಹಿನ್ನಲೆಯಲ್ಲಿ ಎಲ್ಲಾ ಆನ್‍ಲೈನ್ ಸೇವೆಗಳನ್ನು 10 ದಿನಗಳವರೆಗೆ ಸ್ಥಗಿತಗೊಳಿಸಲಾಗುವುದು ಎಂದು ಇಂಧನ ಇಲಾಖೆ ಪ್ರಕಟಿಸಿದೆ. ಹೀಗಾಗಿ ಬೆಸ್ಕಾಂ, ಜೆಸ್ಕಾಂ, ಸೆಸ್ಕ್, ಮೆಸ್ಕಾಂ ಮತ್ತು ಹೆಸ್ಕಾಂನಲ್ಲಿ ಆನ್‍ಲೈನ್ ಸೇವೆಗಳು ಲಭ್ಯವಿಲ್ಲ. ರಾಜ್ಯದ ಎಲ್ಲಾ ಎಸ್ಕಾಂ ಯುಟಿಲಿಟಿ ಬಿಲ್‍ಗಳನ್ನು ಪಾವತಿಸುವುದು ಮತ್ತು ಹೊಸ ಸಂಪರ್ಕ ಅರ್ಜಿಗಳನ್ನು ಕಳುಹಿಸುವುದು ಮುಂತಾದ ಆನ್‍ಲೈನ್ ಸೇವೆಗಳನ್ನು ಮಾರ್ಚ್ 10 ರಿಂದ 19 ರವರೆಗೆ ಸ್ಥಗಿತಗೊಳಿಸಲಿದೆ. ಆದಾಗ್ಯೂ, ವಿದ್ಯುತ್ ಪೂರೈಕೆಯ ವಿಷಯದಲ್ಲಿ ಏನೂ ಬದಲಾಗುವುದಿಲ್ಲ. ನಿಮ್ಮ ಸಾಫ್ಟ್‌ವೇರ್ ಅನ್ನು ನವೀಕರಿಸುವುದರಿಂದ

ಸಾಫ್ಟ್‌ವೇರ್ ನವೀಕರಣ/ ಹತ್ತು ದಿನಗಳ ಕಾಲ ಇಂಧನ ಇಲಾಖೆಯ ಆನ್‍ಲೈನ್ ಸೇವೆಗಳು ಅಲಭ್ಯ Read More »

ಎನ್ಐಎ ಶೋಧ ಕಾರ್ಯಾಚರಣೆ| ದ.ಕ ಜಿಲ್ಲೆಯ ಇಬ್ಬರು ಸೇರಿ ಮೂರು ಮಂದಿ ವಶಕ್ಕೆ

ಸಮಗ್ರ ನ್ಯೂಸ್: ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು (ಎನ್‌ಐಎ) ಮಂಗಳವಾರ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಸೇರಿ ಮೂವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ. ಬೆಂಗಳೂರು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಸೈಯದ್ ಖೈಲ್, ಮೂಲತಃ ಕೇರಳ ಇಡುಕ್ಕಿ ನಿವಾಸಿ ಪ್ರಸ್ತುತ ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದಲ್ಲಿರುವ ಬಿಜು ಅಬ್ರಹಾಂ ಹಾಗೂ ಮಂಗಳೂರಿನ ಅತ್ತಾವರದ ನಬೀದ್ ಎಂಬಾತನನ್ನು ವಶಕ್ಕೆ

ಎನ್ಐಎ ಶೋಧ ಕಾರ್ಯಾಚರಣೆ| ದ.ಕ ಜಿಲ್ಲೆಯ ಇಬ್ಬರು ಸೇರಿ ಮೂರು ಮಂದಿ ವಶಕ್ಕೆ Read More »

5,8,9 ಮತ್ತು 11ನೇ‌ ತರಗತಿಗಳ ಬೋರ್ಡ್ ಪರೀಕ್ಷೆ ರದ್ದುಗೊಳಿಸಿ ಹೈಕೋರ್ಟ್ ಆದೇಶ

ಸಮಗ್ರ ನ್ಯೂಸ್: ರುಪ್ಸಾ ಸಂಘಟನೆಯ ಮನವಿಯ ಮೇರೆಗೆ ಕರ್ನಾಟಕ ಹೈಕೋರ್ಟ್ 2023 ರ ಡಿಸೆಂಬರ್ ನಲ್ಲಿ ಹೊರಡಿಸಿದ ರಾಜ್ಯ ಸರ್ಕಾರದ ಸುತ್ತೋಲೆಯನ್ನು ರದ್ದುಗೊಳಿಸಲುಆದೇಶಿಸಿದೆ. ನ್ಯಾಯಮೂರ್ತಿ ರವಿ ಹೊಸಮಂಜ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ. ಈ ಹಿಂದೆ ರಾಜ್ಯ ಸರ್ಕಾರ ಆದೇಶದ ಸುತ್ತೋಲೆಯು 5, 8, 9 ಮತ್ತು 11 ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ಕಡ್ಡಾಯಗೊಳಿಸಿತ್ತು. ವಿವಾದವನ್ನು ಹುಟ್ಟುಹಾಕಿದ ಸುತ್ತೋಲೆಯು ರುಪ್ಸಾ ಸಂಸ್ಥೆ ಸೇರಿದಂತೆ ವಿವಿಧ ಭಾಗಗಳಿಂದ ಬಲವಾದ ವಿರೋಧವನ್ನು ಎದುರಿಸಿತು. ಅರ್ಜಿದಾರರನ್ನು ಪ್ರತಿನಿಧಿಸುವ

5,8,9 ಮತ್ತು 11ನೇ‌ ತರಗತಿಗಳ ಬೋರ್ಡ್ ಪರೀಕ್ಷೆ ರದ್ದುಗೊಳಿಸಿ ಹೈಕೋರ್ಟ್ ಆದೇಶ Read More »

ಮಂಗಳೂರು ವಿವಿ‌ ನೂತನ ಕುಲಪತಿಯಾಗಿ ಪ್ರೊ. ಪಿ.ಎಲ್ ಧರ್ಮ ಅಧಿಕಾರ ಸ್ವೀಕಾರ

ಸಮಗ್ರ ನ್ಯೂಸ್: ಮಂಗಳೂರು ವಿಶ್ವವಿದ್ಯಾನಿಲಯದ ನೂತನ ಕುಲಪತಿಯಾಗಿ ಪ್ರೊ.ಪಿ.ಎಲ್ ಧರ್ಮ ಅವರು ಮಂಗಳವಾರ ಅಧಿಕಾರ ವಹಿಸಿಕೊಂಡಿದ್ದಾರೆ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಮಂಗಳೂರು ವಿವಿಗೆ ನೂತನ ಕುಲಪತಿಯಾಗಿ ಪ್ರೊ.ಪಿ.ಎಲ್ ಧರ್ಮ ಅವರನ್ನು ಇಂದು ನೇಮಕಗೊಳಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಅಧಿಕಾರ ಸ್ವೀಕರಿಸಿದ್ದಾರೆ. ಮಂಗಳೂರು ವಿವಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಪ್ರೊ.ಪಿ.ಎಲ್. ಧರ್ಮ ಅವರು ಮಂಗಳೂರು ವಿವಿಯ 10ನೇ ಕುಲಪತಿಯಾಗಿದ್ದಾರೆ. ಮಂಗಳೂರು ವಿವಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಕುಲಪತಿ ಹುದ್ದೆಗೇರುವ ಅವಕಾಶ ಗಿಟ್ಟಿಸಿಕೊಂಡವರಲ್ಲಿ ಎರಡನೇಯವರು ಪ್ರೊ.ಧರ್ಮ. ಈ ಹಿಂದೆ

ಮಂಗಳೂರು ವಿವಿ‌ ನೂತನ ಕುಲಪತಿಯಾಗಿ ಪ್ರೊ. ಪಿ.ಎಲ್ ಧರ್ಮ ಅಧಿಕಾರ ಸ್ವೀಕಾರ Read More »

ಭಾರತ ಸೇರಿದಂತೆ ವಿಶ್ವದಾದ್ಯಂತ ಪೇಸ್ ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್

ಸಮಗ್ರ ನ್ಯೂಸ್: ವಿಶ್ವದ ಪ್ರಸಿದ್ಧ ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್​ ಹಾಗೂ ಇನ್​ಸ್ಟಾಗ್ರಾಂ ಬಳಕೆದಾರರಿಗೆ ಅಂಡ್ರಾಯ್ಡ್​​, ಐಒಎಸ್​ ಹಾಗೂ ಪಿಸಿಯಲ್ಲಿ ಬಳಸಲು ಸಮಸ್ಯೆ ಎದುರಾಗಿದೆ. ಜಗತ್ತಿನಾದ್ಯಂತ ರಾತ್ರಿ 9:00 ಗಂಟೆ ಸುಮಾರಿಗೆ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣ ಎಕ್ಸ್​ (ಈ ಹಿಂದೆ ಟ್ವಿಟರ್​)ನಲ್ಲಿ #Zuckerberg, #facebookDown, #InstagramDown ಎಂಬ ಹ್ಯಾಶ್​​ಟ್ಯಾಗ್ ಟ್ರೆಂಡ್​ ಆಗುತ್ತಿದೆ. ಜಗತಿನಾದ್ಯಂತ ಸುಮಾರು 200ಕೋಟಿಗೂ ಅಧಿಕ ಫೇಸ್​ಬುಕ್​ ಬಳಕೆದಾರರಿದ್ದು, ಇಷ್ಟು ಪ್ರಸಿದ್ಧಿ ಪಡೆದುಕೊಂಡಿರುವ ಆಯಪ್​ಗಳು ದಿಢೀರ್ ಸ್ಥಗಿತಗೊಳ್ಳಲು ಕಾರಣವೇನು ಎಂಬುದು ಈವರೆಗೆ ಬಹಿರಂಗವಾಗಿಲ್ಲ. ಏಕಾಏಕಿ

ಭಾರತ ಸೇರಿದಂತೆ ವಿಶ್ವದಾದ್ಯಂತ ಪೇಸ್ ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್ Read More »

ರೈಲ್ವೆ ಇಲಾಖೆಯಲ್ಲಿ ​ಈ ಹುದ್ದೆಗಳು ಖಾಲಿ ಇವೆ, ಬೇಗ ಅಪ್ಲೈ ಮಾಡಿ

ಸಮಗ್ರ ಉದ್ಯೋಗ: ರೈಲ್ ವ್ಹೀಲ್ ಫ್ಯಾಕ್ಟರಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 192 ಅಪ್ರೆಂಟಿಸ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇದೇ ಮಾರ್ಚ್​ 22, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಯ ಮಾಹಿತಿ:ಫಿಟ್ಟರ್- 85ಮೆಷಿನಿಸ್ಟ್- 31ಮೆಕ್ಯಾನಿಕ್ (ಮೋಟಾರ್ ವೆಹಿಕಲ್)- 8ಟರ್ನರ್-5CNC ಪ್ರೋಗ್ರಾಮಿಂಗ್ & ಆಪರೇಟರ್- 23ಎಲೆಕ್ಟ್ರಿಷಿಯನ್- 18ಎಲೆಕ್ಟ್ರಾನಿಕ್ ಮೆಕ್ಯಾನಿಕ್- 22 ವಿದ್ಯಾರ್ಹತೆ:ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ

ರೈಲ್ವೆ ಇಲಾಖೆಯಲ್ಲಿ ​ಈ ಹುದ್ದೆಗಳು ಖಾಲಿ ಇವೆ, ಬೇಗ ಅಪ್ಲೈ ಮಾಡಿ Read More »

ಬೆಂಗಳೂರು ಬ್ಲಾಸ್ಟ್ ಹಿನ್ನಲೆ| ದೇಶಾದ್ಯಂತ ಎನ್ಐಎ ದಾಳಿ; ಐವರು ಅರೆಸ್ಟ್

ಸಮಗ್ರ ನ್ಯೂಸ್: ಬೆಂಗಳೂರಿನ ಸುಪ್ರಸಿದ್ಧ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣ ದೇಶದಾದ್ಯಂತ ಸುದ್ದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತೀವ್ರ ತನಿಖೆ ಕೈಗೊಂಡಿದ್ದಾರೆ. ಇದರ ಬೆನ್ನಲ್ಲೇ ಈಗ ಎನ್‌ಐಎ ದೇಶದಾದ್ಯಂತ ಏಕಕಾಲದಲ್ಲಿ ದಾಳಿ ನಡೆಸಿದೆ. ಕರ್ನಾಟಕ ಸೇರಿ ಒಟ್ಟು 7 ರಾಜ್ಯಗಳಲ್ಲಿ 17 ಕಡೆ ದಾಳಿ ನಡೆಸಿರುವ ಎನ್‌ಐಎ ಅಧಿಕಾರಿಗಳು ಚೆನ್ನೈನಲ್ಲಿ ಐವರನ್ನು ವಶಕ್ಕೆ ಪಡೆದಿದ್ದು, ಹಲವೆಡೆ ಮಹತ್ವದ ದಾಖಲೆ ಕಲೆಹಾಕಿದ್ದಾರೆ ಎಂದು ತಿಳಿದುಬಂದಿದೆ. ಜೈಲಿನಲ್ಲಿ ಸಹ ಖೈದಿಗಳನ್ನು ಮನಪರಿವರ್ತನೆ ಪ್ರಕರಣ ಸಂಬಂಧ ದೇಶದಾದ್ಯಂತ ಪ್ರಮುಖ

ಬೆಂಗಳೂರು ಬ್ಲಾಸ್ಟ್ ಹಿನ್ನಲೆ| ದೇಶಾದ್ಯಂತ ಎನ್ಐಎ ದಾಳಿ; ಐವರು ಅರೆಸ್ಟ್ Read More »

ಮಂಡ್ಯ: ಪಾಕ್ ಪರ ಘೋಷಣೆ ಕೂಗಿದ್ದ ಬಿಜೆಪಿ ಕಾರ್ಯಕರ್ತ ಅರೆಸ್ಟ್| ದ್ವೇಷ ರಾಜಕೀಯಕ್ಕೆ ಮುಂದಾಯಿತೇ ಕಾಂಗ್ರೆಸ್!?

ಸಮಗ್ರ ನ್ಯೂಸ್: ವಿಧಾನಸೌಧದಲ್ಲಿ ಪಾಕ್​ ಪರ ಘೋಷಣೆ ಕೂಗಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದೆಡೆ 2022ರಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದಿದ್ದ ಬಿಜೆಪಿ ಕಾರ್ಯಕರ್ತ ರವಿಯನ್ನು ಮಂಡ್ಯದ ಪಶ್ಚಿಮ ಠಾಣೆ ಪೊಲೀಸರು ಬಂಧಿಸಿದ್ದಾರೆ. ತನ್ನ ತಪ್ಪು ಮುಚ್ಚಿಕೊಳ್ಳಲು ಕಾಂಗ್ರೆಸ್ ದ್ವೇಷದ ರಾಜಕೀಯಕ್ಕೆ ಮುಂದಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ರಾಜ್ಯಸಭೆ ಚುನಾವಣೆ ವೇಳೆ ವಿಧಾನಸೌಧದಲ್ಲೇ ಪಾಕ್​ ಪರ ಘೋಷಣೆ ಮೊಳಗಿಸಿದ್ದ ಪ್ರಕರಣ ದೇಶಾದ್ಯಂತ ದೊಡ್ಡ ಸದ್ದು ಮಾಡಿತ್ತು. ಅದು ಪಾಕ್​ ಪರ ಘೋಷಣೆ ಅಲ್ಲ, ಬದಲಿಗೆ

ಮಂಡ್ಯ: ಪಾಕ್ ಪರ ಘೋಷಣೆ ಕೂಗಿದ್ದ ಬಿಜೆಪಿ ಕಾರ್ಯಕರ್ತ ಅರೆಸ್ಟ್| ದ್ವೇಷ ರಾಜಕೀಯಕ್ಕೆ ಮುಂದಾಯಿತೇ ಕಾಂಗ್ರೆಸ್!? Read More »