March 2024

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಬೆಂಕಿ

ಸಮಗ್ರ ನ್ಯೂಸ್‌ : ಚಾಮರಾಜನಗರ ಜಿಲ್ಲೆಯ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವಲಯ ವ್ಯಾಪ್ತಿಯ ಕೆ.ಕೆ.ಡ್ಯಾಂ ಬಳಿ ಅರಣ್ಯಕ್ಕೆ ಬೆಂಕಿ ಬಿದ್ದು ಅಪಾರ ಪ್ರಮಾಣದ ಅರಣ್ಯ ನಾಶವಾಗಿದೆ. ಶನಿವಾರ ಬೆಳಗ್ಗೆ ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೆ ಬೈಲೂರು ವಲಯದ ಕೆ.ಕೆ.ಡ್ಯಾಂ ಬಳಿ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಈ ವೇಳೆ ಮತ್ತೊಂದು ಕಡೆ ಬೆಂಕಿ ಕಾಣಿಸಿಕೊಂಡಿದ್ದು 60ಕ್ಕೂ ಹೆಚ್ಚು ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಗಾಳಿ ಇರುವುದರಿಂದ ಬೆಂಕಿಯ […]

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಬೆಂಕಿ Read More »

ಚುನಾವಣಾ ವೆಚ್ಚ ನಿಯಂತ್ರಣ/ ಪ್ರಚಾರಕ್ಕೆ ಬಳಸುವ ಸರಕು-ಸೇವೆಗಳಿಗೆ ದರ ನಿಗದಿಪಡಿಸಿದ ಆಯೋಗ

ಸಮಗ್ರ ನ್ಯೂಸ್: ಅಭ್ಯರ್ಥಿಗಳು ಲೋಕಸಭಾ ಚುನಾವಣೆಯಲ್ಲಿ ಪ್ರಚಾರಕ್ಕೆ ಬಳಸುವ ಸರಕು-ಸೇವೆಗಳಿಗೆ ದರಗಳನ್ನು ಜಿಲ್ಲಾ ಚುನಾವಣಾ ಸಮಿತಿಗಳು ನಿಗದಿಗೊಳಿಸಿದ್ದು ಬಹುತೇಕ ಕಡೆ ದರಗಳನ್ನು ಕಳೆದ ಬಾರಿಗಿಂತ ಕಡಿಮೆ ಮಾಡಿರುವುದು ಕಂಡಿಬಂದಿದೆ. ಕಾಫಿ-ಟೀ ದರಗಳನ್ನು ದೇಶದ ಬಹುತೇಕ ಕಡೆ ಇಳಿಕೆ ಮಾಡಲ್ಪಟ್ಟಿದ್ದರೆ ಅಚ್ಚರಿ ಎಂಬಂತೆ ಚೆನ್ನೈನಲ್ಲಿ ಏರಿಕೆ ಮಾಡಿ ಒಂದು ಕಪ್ ಕಾಫಿಗೆ 15 ರು. ಹಾಗೂ ಒಂದು ಸಮೋಸಾಗೆ 20 ರು. ನಿಗದಿ ಮಾಡಲಾಗಿದೆ. ಮಾಂಸಾಹಾರದ ದರಗಳೂ ಬಹುತೇಕ ಅದೇ ದರದಲ್ಲಿ ಮುಂದುವರೆದಿದ್ದು, ವ್ಯತಿರಿಕ್ತವೆಂಬಂತೆ ಚೆನ್ನೈನಲ್ಲಿ ಚಿಕನ್ ಬಿರಿಯಾನಿ

ಚುನಾವಣಾ ವೆಚ್ಚ ನಿಯಂತ್ರಣ/ ಪ್ರಚಾರಕ್ಕೆ ಬಳಸುವ ಸರಕು-ಸೇವೆಗಳಿಗೆ ದರ ನಿಗದಿಪಡಿಸಿದ ಆಯೋಗ Read More »

ಒಂದೇ ಕಾಲಲ್ಲಿ ಸಿಕ್ಕಿಂನ ಮೌಂಟ್ ರೆನಾಕ್ ಶಿಖರ ಏರಿ ಉದಯ್ ಕುಮಾರ್

ಸಮಗ್ರ ನ್ಯೂಸ್: 16,500 ಅಡಿ ಎತ್ತರದ ಸಿಕ್ಕಿಂನ ಮೌಂಟ್ ರೆನಾಕ್ ಶಿಖರವನ್ನು, ಕೋಲ್ಕತಾದ ಬೆಲ್ಫಾರಿಯಾ ನಿವಾಸಿಯಾದ ಉದಯ್ ಕುಮಾರ್ ಒಂದೇ ಕಾಲಲ್ಲಿ ಏರಿ ಸಾಧನೆ ಮಾಡಿದ್ದಾರೆ. ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗ ಮಾಡುತ್ತಿರುವ ಉದಯ್ ಕುಮಾರ್, 2015ರ ರೈಲು ಅಪಘಾತದಲ್ಲಿ ತಮ್ಮ ಎಡಗಾಲು ಮೊಣಕಾಲಿನವರೆಗೂ ಹಾಗೂ ಬಲಗಾಲಿನ ನಾಲ್ಕು ಬೆರಳಗಳನ್ನು ಕಳೆದುಕೊಂಡಿದ್ದರು. ಇದರಿಂದ ಕುಮಾರ್ ಶೇ.91 ರಷ್ಟು ಅಂಗವಿಕಲತೆಯನ್ನು ಎದುರಿಸುತ್ತಿದ್ದರು. ಇದರ ಹೊರತಾಗಿಯೂ ಒಂದೇ ಕಾಲಿನಲ್ಲಿ ಶಿಖರವನ್ನು ಏರಿ ಸಾಧನೆ ಮಾಡಿದ್ದಾರೆ. ಪ್ರಸ್ತುತ ವಿಶ್ವದ ಅತಿ ಎತ್ತರದ ಶಿಖರವಾದ

ಒಂದೇ ಕಾಲಲ್ಲಿ ಸಿಕ್ಕಿಂನ ಮೌಂಟ್ ರೆನಾಕ್ ಶಿಖರ ಏರಿ ಉದಯ್ ಕುಮಾರ್ Read More »

ಹಣಕಾಸಿನ ವರ್ಷ ಅಂತ್ಯ ಹಿನ್ನೆಲೆ/ ನಾಳೆಯು ಬಾಗಿಲು ತೆರೆಯಲಿದೆ ಜೀವ ವಿಮಾ ನಿಗಮ (ಎಲ್‍ಐಸಿ)

ಸಮಗ್ರ ನ್ಯೂಸ್: ದೇಶದಾದ್ಯಂತ ವಾರಾಂತ್ಯದ ದಿನಗಳಾದ ಮಾ.31 ಭಾನುವಾರ ಗ್ರಾಹಕರಿಗೆ ಸೇವೆಗಾಗಿ ತನ್ನ ಕಚೇರಿಗಳನ್ನು ತೆರೆಯಲು ಜೀವ ವಿಮಾ ನಿಗಮ (ಎಲ್‍ಐಸಿ) ಸಂಸ್ಥೆಯು ತೀರ್ಮಾನಿಸಿದೆ. ಪ್ರಸಕ್ತ ಹಣಕಾಸಿನ ವರ್ಷ ಅಂತ್ಯ ಹಿನ್ನೆಲೆ ತೆರಿಗೆ ಉಳಿಕೆ ಚಟುವಟಿಕೆಗಳನ್ನು ಪೂರ್ಣಗೊಳಿಸಿಕೊಳ್ಳಲು ತೆರಿಗೆದಾರರಿಗೆ ಅನುಕೂಲ ಕಲ್ಪಿಸಲು ಎಲ್‍ಐಸಿ ಸಂಸ್ಥೆ ಈ ನಿರ್ಧಾರ ಕೈಗೊಂಡಿದೆ. ಯಾವುದೇ ಆರ್ಥಿಕ ವಹಿವಾಟಿನ ತೊಂದರೆಯಾಗದಂತೆ, ಹಣಕಾಸಿನ ವಷಾರ್ಂತ್ಯದಲ್ಲಿ ವಿಮಾದಾರರಿಗೆ ತನ್ನ ವಲಯ ಮತ್ತು ವ್ಯಾಪ್ತಿಯ ಎಲ್ಲ ಕಚೇರಿಗಳು ಮಾ. 31 ರಂದು ಸಾಮಾನ್ಯ ಔದ್ಯೋಗಿಕ ಕೆಲಸದ ಅವಧಿಯಂತೆ

ಹಣಕಾಸಿನ ವರ್ಷ ಅಂತ್ಯ ಹಿನ್ನೆಲೆ/ ನಾಳೆಯು ಬಾಗಿಲು ತೆರೆಯಲಿದೆ ಜೀವ ವಿಮಾ ನಿಗಮ (ಎಲ್‍ಐಸಿ) Read More »

ಕೊನೆಗೂ ಕೋಲಾರ ಟಿಕೆಟ್ ಘೋಷಣೆ ಕಾಂಗ್ರೆಸ್/ ಕೆ.ವಿ.ಗೌತಮ್ ಕಣಕ್ಕಿಳಿಸಲು ಹೈಕಮಾಂಡ್ ನಿರ್ಧಾರ

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆಗೆ ಕೋಲಾರದಿಂದ ಕೆ.ವಿ.ಗೌತಮ್ ಅವರನ್ನು ಚುನಾವಣಾ ಕಣಕ್ಕಿಳಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದ್ದು, ಟಿಕೆಟ್ ಘೋಷಣೆ ಮಾಡಿದೆ. ಕಾಂಗ್ರೆಸ್ ಗೆ ತಲೆನೋವಾಗಿದ್ದ ಏಕೈಕ ಕ್ಷೇತ್ರವಾಗಿದ್ದ ಕೋಲಾರದ ಸಮಸ್ಯೆ ಬಗೆಹರಿದಂತಾಗಿದೆ. ಈ ಕ್ಷೇತ್ರದ ಟಿಕೆಟ್‍ಗಾಗಿ ಹಾಲಿ ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ಮಾಜಿ ಸಚಿವ ರಮೇಶ್ ಕುಮಾರ್ ಸ್ಪರ್ಧಿಸಿದ್ದರು. ಅಳಿಯನಿಗೆ ಟಿಕೆಟ್ ನೀಡುವಂತೆ ಮುನಿಯಪ್ಪ ತೀವ್ರ ಲಾಬಿ ನಡೆಸಿದ್ದರು. ಮುನಿಯಪ್ಪ ಅವರ ಒತ್ತಡಕ್ಕೆ ಮಣಿದು ರಮೇಶ್ ಕುಮಾರ್ ಬೆಂಬಲಿಗ ಶಾಸಕರು, ಸಚಿವರು ರಾಜೀನಾಮೆ ನೀಡಲು ಸಿದ್ಧರಾಗಿದ್ದರು. ಇದೀಗ

ಕೊನೆಗೂ ಕೋಲಾರ ಟಿಕೆಟ್ ಘೋಷಣೆ ಕಾಂಗ್ರೆಸ್/ ಕೆ.ವಿ.ಗೌತಮ್ ಕಣಕ್ಕಿಳಿಸಲು ಹೈಕಮಾಂಡ್ ನಿರ್ಧಾರ Read More »

ಗೆದ್ದರೂ-ಸೋತರೂ ಮಂಡ್ಯ ಬಿಡಲ್ಲ/ ಮಂಡ್ಯದಲ್ಲೇ ನನ್ನ ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ; ಸುಮಲತಾ

ಸಮಗ್ರ ನ್ಯೂಸ್: ನಾನು ಇದ್ದರೂ-ಬಿದ್ದರೂ, ಗೆದ್ದರೂ-ಸೋತರೂ ಮಂಡ್ಯ ಬಿಡಲ್ಲ. ಮಂಡ್ಯದಲ್ಲೇ ನನ್ನ ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ ಎಂದು ಸಂಸದೆ ಸುಮಲತಾ ಹೇಳಿದ್ದಾರೆ.ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಜೆಡಿಎಸ್ ಪಾಲಾಗಿದ್ದಕ್ಕೆ ಸಂಸದೆ ಸುಮಲತಾ ಬೇಸರಗೊಂಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸುಮಲತಾರನ್ನು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಕೂಡ ಮಾಡಲಾಗಿತ್ತು. ಆದರೆ ಇದ್ಯಾವದಕ್ಕೂ ತಮ್ಮ ನಡೆ ತಿಳಿದಿದ್ದಾಗ ಜೆಪಿ ನಗರದ ನಿವಾಸದ ಮುಂದೆ ಅಭಿಮಾನಿಗಳು ಜಮಾವಣೆಗೊಂಡಿದ್ದರು. ಬಳಿಕ ಬೆಂಬಲಿಗರ ಜೊತೆ ಸಭೆ ಮಾಡಿದ್ದು, ಏಪ್ರಿಲ್ 3ರಂದು ಮಂಡ್ಯದಲ್ಲಿ ಸಭೆ

ಗೆದ್ದರೂ-ಸೋತರೂ ಮಂಡ್ಯ ಬಿಡಲ್ಲ/ ಮಂಡ್ಯದಲ್ಲೇ ನನ್ನ ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ; ಸುಮಲತಾ Read More »

ನಾಗಾಲ್ಯಾಂಡ್‍ನಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ/ ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಷನ್ ಗುಪ್ತ ಸಭೆ

ಸಮಗ್ರ ನ್ಯೂಸ್: ನಾಗಾಲ್ಯಾಂಡ್‍ನಲ್ಲಿ ಚುನಾವಣೆ ಹೊಸ್ತಿಲಿನಲ್ಲಿಯೇ ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಷನ್ (ಇಎನ್‍ಪಿಒ) ತುಯೆನ್ಸಾಂಗ್‍ನಲ್ಲಿ ತಮ್ಮ ಪ್ರಾಂತ್ಯದ 20 ಶಾಸಕರು ಹಾಗೂ ಏಕೈಕ ಸಂಸದರ ಜೊತೆ ಇಎನ್‍ಪಿಒ ಗುಪ್ತ ಸಭೆ ನಡೆಸಿದ್ದು, ನಮ್ಮ ಪ್ರತ್ಯೇಕ ರಾಜ್ಯ ಬೇಡಿಕೆ ಈಡೇರುವ ತನಕ ಚುನಾವಣೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ನಿರ್ಧಾರಕ್ಕೆ ತಾವು ಬದ್ಧವಾಗಿದ್ದೇವೆ ಎಂದು ಸ್ಪಷ್ಟಪಡಿಸಿದೆ. ಇಎನ್‍ಪಿಒ ಉಪಾಧ್ಯಕ್ಷ ಡಬ್ಲ್ಯು. ಬೆಂಡಾಂಗ್ ಚಾಂಗ್, ಕೇಂದ್ರ ಸರ್ಕಾರವು ನಮ್ಮ ಬೇಡಿಕೆ ಈಡೇರಿಸುವ ತನಕ ಲೋಕಸಭಾ ಚುನಾವಣೆಯಿಂದ ದೂರ ಉಳಿಯಲಿದ್ದೇವೆ, ಅಲ್ಲದೆ ಚುನಾವಣಾ ಪ್ರಚಾರ

ನಾಗಾಲ್ಯಾಂಡ್‍ನಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ/ ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಷನ್ ಗುಪ್ತ ಸಭೆ Read More »

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ| ರಾಜ್ಯ ಸರ್ಕಾರದಿಂದ ಆದೇಶ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರದಿಂದ ಲೋಕಸಭಾ ಚುನಾವಣೆಯ ಮತದಾನದಂದು ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಿ ಅಧಿಕೃತ ಆದೇಶ ಹೊರಡಿಸಲಾಗಿದೆ. ಈ ಕುರಿತಂತೆ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ. ಅದರಲ್ಲಿ ಭಾರತ ಚುನಾವಣಾ ಆಯೋಗವು ಲೋಕಸಭೆಗೆ ಸಾರ್ವತ್ರಿಕ ಚುನಾವಣೆ 2024ನ್ನು ಘೋಷಿಸಿದ್ದು, ಕರ್ನಾಟಕದಲ್ಲಿ ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ದಿನಾಂಕ:26.04.2024ರ ಶುಕ್ರವಾರದಂದು ಹಾಗೂ ಇನ್ನುಳಿದ 14 ಲೋಕಸಭಾ ಕ್ಷೇತ್ರಗಳಿಗೆ ಎರಡನೇ ಹಂತ ಹಾಗೂ ಶೋರಾಪುರ-36 ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯನ್ನು ದಿನಾಂಕ:07.05.2024ರ ಮಂಗಳವಾರದಂದು ನಡೆಸುತ್ತಿದೆ

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ| ರಾಜ್ಯ ಸರ್ಕಾರದಿಂದ ಆದೇಶ Read More »

ಮೈತ್ರಿ ಬಿಕ್ಕಟ್ಟು ಹಿನ್ನಲೆ| ಜೆಡಿಎಸ್ ತೊರೆದು ‘ಕೈ’ ಹಿಡಿದ ನಜ್ಮಾ ನಜೀರ್

ಸಮಗ್ರ ನ್ಯೂಸ್: ಬಿಜೆಪಿ- ಜೆಡಿಎಸ್ ಮೈತ್ರಿ ಅಸಮಾಧಾನದಿಂದ ಸಾಮಾಜಿಕ ಹೋರಾಟಗಾರ್ತಿ ನಜ್ಮಾ ನಜೀರ್ ಅವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್‌ನ ಶಾಲನ್ನು ಹಾಕುವ ಮೂಲಕ ನಜ್ಮಾ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸಿದರು. ನಜ್ಮಾ ಅವರು 2020ರಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಸಮ್ಮುಖದಲ್ಲಿ ತುಮಕೂರು ಜಿಲ್ಲೆ ಶಿರಾ ಪಟ್ಟಣದಲ್ಲಿ ಅವರು ಜಾತ್ಯತೀತ ಜನತಾ ದಳ ಪಕ್ಷವನ್ನು ಅವರು ಸೇರ್ಪಡೆಗೊಂಡಿದ್ದರು. ನಜ್ಮಾ ನಜೀರ್ ಅವರು ಕಳೆದ

ಮೈತ್ರಿ ಬಿಕ್ಕಟ್ಟು ಹಿನ್ನಲೆ| ಜೆಡಿಎಸ್ ತೊರೆದು ‘ಕೈ’ ಹಿಡಿದ ನಜ್ಮಾ ನಜೀರ್ Read More »

‘ನನ್ನ ಮನೆಗೆ ವಾಪಾಸ್ ಬಂದಿದ್ದೇನೆ’ | ಕಾಂಗ್ರೆಸ್ ಸೇರಿದ ಬಳಿಕ ತೇಜಸ್ವಿನಿ ಗೌಡ ಪ್ರತಿಕ್ರಿಯೆ

ಸಮಗ್ರ ನ್ಯೂಸ್: ದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವ ಜೈರಾಮ್‌ ರಮೇಶ್‌ ನೇತೃತ್ವದಲ್ಲಿ ತೇಜಸ್ವಿನಿ ಗೌಡ ಕಾಂಗ್ರೆಸ್‌ ಸೇರ್ಪಡೆಯಾದರು. ಬಳಿಕ ಮಾತನಾಡಿದ ತೇಜಸ್ವಿನಿ ಗೌಡ, ಕಾಂಗ್ರೆಸ್‌ ಪಕ್ಷವು ಬಿಜೆಪಿಗಿಂತ 95 ವರ್ಷ ಹಳೆಯ ಪಕ್ಷವಾಗಿದೆ. ನಾನು ವಾಪಸ್‌ ನನ್ನ ಮನೆಗೆ ಸೇರುತ್ತಿದ್ದೇನೆ ಎಂದು ನುಡಿದರು. ಜೊತೆಗೆ, ದೇಶದಲ್ಲಿ ಎಲ್ಲೆಡೆ ಪ್ರಧಾನಿ ಮೋದಿ ಅವರದ್ದು ಅಷ್ಟೊಂದು ಹವಾ ಇದೆ ಎನ್ನುವುದು ನಿಜವಾಗಿದ್ದರೆ ಏಕೆ ಹಾಲಿ ಕೇಂದ್ರ ಮಂತ್ರಿಗಳನ್ನು ಬದಲಾಯಿಸಿದ್ದಾರೆ. ಎ. ನಾರಾಯಣಸ್ವಾಮಿ, ಶೋಭಾ ಕರಂದ್ಲಾಜೆ ಅವರ

‘ನನ್ನ ಮನೆಗೆ ವಾಪಾಸ್ ಬಂದಿದ್ದೇನೆ’ | ಕಾಂಗ್ರೆಸ್ ಸೇರಿದ ಬಳಿಕ ತೇಜಸ್ವಿನಿ ಗೌಡ ಪ್ರತಿಕ್ರಿಯೆ Read More »