March 2024

ಕಾಟೇರ ಸಕ್ಸಸ್ ಪಾರ್ಟಿ ವಿಚಾರ| ದರ್ಶನ್ ಸೇರಿ 8 ಮಂದಿಗೂ ಬಿಗ್ ರಿಲೀಫ್

ಸಮಗ್ರ ನ್ಯೂಸ್: ಕಾಟೇರ ಸಿನಿಮಾದ ಯಶಸ್ಸಿನ ಹಿನ್ನೆಲೆ ಜೆಟ್ ಲ್ಯಾಗ್ ಪಬ್ ನಲ್ಲಿ ಅವಧಿಮೀರಿ ಪಾರ್ಟಿ ನಡೆದ ವಿಚಾರವಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಎಲ್ಲಾ 8 ಮಂದಿಗೂ ಬಿಗ್ ರಿಲೀಫ್ ಸಿಕ್ಕಿದೆ. ರಾಜಾಜಿನಗರದ ಜೆಟ್‌ಲ್ಯಾಗ್‌ ಪಬ್‌ನಲ್ಲಿ ಅವಧಿ ಮೀರಿ ಪಾರ್ಟಿ ಮಾಡಲಾಗಿದೆ ಎಂದು ಆರೋಪಿಸಿ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಈಗ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದೆ. ತಡ ರಾತ್ರಿ ಪಾರ್ಟಿ ಮಾಡಿಲ್ಲ. ಆರೋಪಿಗಳು ಊಟದ […]

ಕಾಟೇರ ಸಕ್ಸಸ್ ಪಾರ್ಟಿ ವಿಚಾರ| ದರ್ಶನ್ ಸೇರಿ 8 ಮಂದಿಗೂ ಬಿಗ್ ರಿಲೀಫ್ Read More »

ಸ್ವಿಸ್ ಬ್ಯಾಂಕ್ ನಿಂದ ಭಾರತದ ಕಪ್ಪು ಹಣ ತರುತ್ತೇವೆ ಎಂದ ಮೋದಿ ಸರ್ಕಾರ ತಂದ್ರ ಹೇಳಿ: ಯತೀಂದ್ರ ಸಿದ್ದರಾಮಯ್ಯ

ಸಮಗ್ರ ನ್ಯೂಸ್‌ : ಮೋದಿ ಸರ್ಕಾರ ಆಡಳಿತಕ್ಕೆ ಬಂದು 10 ವರ್ಷ ಕಳೆದಿವೆ ಇಡೀ ದೇಶದ ಆರ್ಥಿಕ ಪರಿಸ್ಥಿತಿ ಹಿಂದೆ ಸರಿದಿದೆ. ಕಪ್ಪು ಹಣ ತರುತ್ತೇವೆ ಸುಖದ ಜೀವಮಾನ ನಿಮ್ಮದಾಗಬಹುದು ಎಂದ ಮೋದಿ ಕಪ್ಪು ಹಣ ತರಲೇ ಇಲ್ಲ, ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು. ಅವರು ವಿರಾಜಪೇಟೆಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಟೀಕಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೊಡಗು ಮೈಸೂರು ಕ್ಷೇತ್ರದಿಂದ ಸರಳ ವ್ಯಕ್ತಿತ್ವ ಇರುವ ಜನರೊಂದಿಗೆ ಸದಾ ಬೆರೆಯುವ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ

ಸ್ವಿಸ್ ಬ್ಯಾಂಕ್ ನಿಂದ ಭಾರತದ ಕಪ್ಪು ಹಣ ತರುತ್ತೇವೆ ಎಂದ ಮೋದಿ ಸರ್ಕಾರ ತಂದ್ರ ಹೇಳಿ: ಯತೀಂದ್ರ ಸಿದ್ದರಾಮಯ್ಯ Read More »

ಶಿವಮೊಗ್ಗ: ಕೆಎಸ್ ಈಶ್ವರಪ್ಪ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲು

ಸಮಗ್ರ ನ್ಯೂಸ್ : ಬಿಜೆಪಿ ಬಂಡಾಯ ನಾಯಕ ಕೆಎಸ್ ಈಶ್ವರಪ್ಪ ವಿರುದ್ಧ ಧಾರ್ಮಿಕ ಕೇಂದ್ರದಲ್ಲಿ ಚುನಾವಣಾ ಪ್ರಚಾರ ಆರೋಪದಡಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಗೋಪಾಳದ ರಂಗನಾಥಸ್ವಾಮಿ ದೇವಾಲಯಕ್ಕೆ ಈಶ್ವರಪ್ಪ ತೆರಳಿದ್ದ ವೇಳೆ ಮತಪ್ರಚಾರ ಮಾಡಿದ್ದರು. ಧಾರ್ಮಿಕ ಕೇಂದ್ರದಲ್ಲಿ ಪ್ರಚಾರ ಮಾಡಿದ್ದಕ್ಕೆ ಈಶ್ವರಪ್ಪರ ವಿರುದ್ಧ ಚುನಾವಣಾ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಈಶ್ವರಪ್ಪ ವಿರುದ್ಧ ತುಂಗಾನಗರ ಠಾಣೆಗೆ ಚುನಾವಣಾಧಿಕಾರಿ ದೂರು ಸಲ್ಲಿಸಿದ್ದಾರೆ. ಈ ಕುರಿತು ತುಂಗಾನಗರ ಠಾಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ.

ಶಿವಮೊಗ್ಗ: ಕೆಎಸ್ ಈಶ್ವರಪ್ಪ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲು Read More »

ತಿಂಗಳಿಗೆ 1 ವರೆ ಲಕ್ಷ ಸಂಬಳ! ನಾಳೆಯೇ ಇಂಟರ್ವ್ಯೂ, ಅಟೆಂಡ್ ಮಾಡಿ

ಸಮಗ್ರ ಉದ್ಯೋಗ: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 12 ಸೀನಿಯರ್ ರೆಸಿಡೆಂಟ್, ಜೂನಿಯರ್ ರೆಸಿಡೆಂಟ್​ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಏಪ್ರಿಲ್ 1, 2024 ಅಂದರೆ ನಾಳೆ ಬೆಳಗ್ಗೆ 9 ಗಂಟೆಗೆ ಬೆಂಗಳೂರಿನಲ್ಲಿ ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಿ. ಹುದ್ದೆಯ ಮಾಹಿತಿ:ಸೀನಿಯರ್ -11ಜೂನಿಯರ್ ರೆಸಿಡೆಂಟ್​-1 ವಿದ್ಯಾರ್ಹತೆ:ಸೀನಿಯರ್ – ಎಂ.ಡಿ, ಅರಿವಳಿಕೆ/ಸೂಕ್ಷ್ಮಜೀವಶಾಸ್ತ್ರ/ಆಯುರ್ವೇದ

ತಿಂಗಳಿಗೆ 1 ವರೆ ಲಕ್ಷ ಸಂಬಳ! ನಾಳೆಯೇ ಇಂಟರ್ವ್ಯೂ, ಅಟೆಂಡ್ ಮಾಡಿ Read More »

ಬಿಜೆಪಿ ದೂರಿನಿಂದ ವಾರ್ತಾ ಮತ್ತು ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್ ವರ್ಗಾವಣೆ

ಸಮಗ್ರ ನ್ಯೂಸ್: ಉತ್ತರ ಕನ್ನಡ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿಯಾಗಿರುವ ಪತ್ನಿ ಅಂಜಲಿ ನಿಂಬಾಳ್ಕರ್ ಪರವಾಗಿ ತಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪದಡಿ ವಾರ್ತಾ ಮತ್ತು ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾಗಿದ್ದ ಸೂರಳ್ಕರ್ ವಿಕಾಸ್ ಕಿಶೋರ್ ಅವರನ್ನು ವಾರ್ತಾ ಇಲಾಖೆ ಆಯುಕ್ತರನ್ನಾಗಿ ನೇಮಿಸಲಾಗಿದೆ. ಹೇಮಂತ್ ನಿಂಬಾಳ್ಕರ್ ತಮ್ಮ ಕಚೇರಿಯಲ್ಲಿ ಪತ್ನಿ ಅಂಜಲಿ ನಿಂಬಾಳ್ಕರ್ ಪರ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹೇಮಂತ್ ನಿಂಬಾಳ್ಕರ್ ವಿರುದ್ಧ

ಬಿಜೆಪಿ ದೂರಿನಿಂದ ವಾರ್ತಾ ಮತ್ತು ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್ ವರ್ಗಾವಣೆ Read More »

ಕಸದ ಬುಟ್ಟಿ ಸೇರುತ್ತಿದೆ 100 ಕೋಟಿ ಮಂದಿಯ ಆಹಾರ/ ಗಾಬರಿ ಹುಟ್ಟಿಸಿದ ವಿಶ್ವಸಂಸ್ಥೆಯ ಪರಿಸರ ಏಜೆನ್ಸಿ ವರದಿ

ಸಮಗ್ರ ನ್ಯೂಸ್: 100 ಕೋಟಿ ಮಂದಿಯ ಹೊಟ್ಟೆ ತಣಿಸಬಲ್ಲಷ್ಟು ಆಹಾರ, ಪ್ರತಿನಿತ್ಯ ಜಗತ್ತಿನಲ್ಲಿ ವ್ಯರ್ಥವಾಗಿ ಕಸದ ಬುಟ್ಟಿ ಸೇರುತ್ತಿದೆ ಎಂದು ವಿಶ್ವಸಂಸ್ಥೆಯ ಪರಿಸರ ಏಜೆನ್ಸಿ (ಯುನ್‍ಇಪಿ)ಯ 2024ನೇ ಸಾಲಿನ ಆಹಾರ ವ್ಯರ್ಥ ಸೂಚ್ಯಂಕ ವರದಿ ಬಹಿರಂಗಪಡಿಸಿದೆ. ಈ ಪೈಕಿ ಅತ್ಯಧಿಕ ಪ್ರಮಾಣದಲ್ಲಿ ಆಹಾರ ಮನೆಗಳಲ್ಲಿಯೇ ವ್ಯರ್ಥವಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಇವುಗಳ ಪ್ರಮಾಣ 631 ದಶಲಕ್ಷ ಟನ್‍ಗಳಾಗಿವೆ ಎಂದು ಸೂಚ್ಯಂಕ ಹೇಳಿದೆ. ಆಹಾರ ವ್ಯರ್ಥವು ಕೇವಲ ಶ್ರೀಮಂತ ರಾಷ್ಟ್ರಗಳಿಗಷ್ಟೇ ಸೀಮಿತವಾಗಿಲ್ಲ. ಅಧಿಕ, ಮೇಲ್ಮಧ್ಯಮ, ಕಳಮಧ್ಯಮ ಆದಾಯದ ದೇಶಗಳ ಮನೆಗಳಲ್ಲಿ

ಕಸದ ಬುಟ್ಟಿ ಸೇರುತ್ತಿದೆ 100 ಕೋಟಿ ಮಂದಿಯ ಆಹಾರ/ ಗಾಬರಿ ಹುಟ್ಟಿಸಿದ ವಿಶ್ವಸಂಸ್ಥೆಯ ಪರಿಸರ ಏಜೆನ್ಸಿ ವರದಿ Read More »

‘ವಾಯ್ಸ್ ಕ್ಲೋನ್’/ ಧ್ವನಿ ಪಡಿಯುಚ್ಚು ತಂತ್ರಜ್ಞಾನ ಸಿದ್ಧಗೊಳಿಸಿದ Open AI

ಸಮಗ್ರ ನ್ಯೂಸ್: ಚಾಟ್ ಜಿಪಿಟಿ ತಂತ್ರಜ್ಞಾನದ (ಎಐ) ಮೂಲಕ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದ Open AI, ಈಗ ಧ್ವನಿ ಪಡಿಯಚ್ಚು (ವಾಯ್ಸ್ ಕ್ಲೋನ್) ಮಾಡುವ ತಂತ್ರಜ್ಞಾನವನ್ನು ತಯಾರಿಸಿದೆ ಎಂದು ಹೇಳಿಕೊಂಡಿದೆ. ಈ ನೂತನ ತಂತ್ರಜ್ಞಾನದ ಮೂಲಕ ಕ್ಲೋನ್ ಮಾಡಬೇಕಾದ ಧ್ವನಿಯ ಮಾಲೀಕರು ಧ್ವನಿಯನ್ನು 15 ಸೆಕೆಂಡುಗಳ ಕಾಲ ರೆಕಾರ್ಡ್ ಮಾಡಿದರೆ ಸಾಕು, ಅವರ ಪಡಿಯಚ್ಚನಂತಾ ಧ್ವನಿ ಸಿದ್ಧವಾಗುತ್ತದೆ. ಆದರೆ ತಂತ್ರಜ್ಞಾನದ ದುರುಪಯೋಗದ ಸಾಧ್ಯತೆಯ ಕಾರಣ ಈ ಧ್ವನಿ ಕ್ಲೋನ್ ತಂತ್ರಜ್ಞಾನವನ್ನು ಸದ್ಯ ಸಾರ್ವಜನಿಕವಾಗಿಸುತ್ತಿಲ್ಲ. ಮಾಲಿಕರಿಗೆ ಅರಿವಿಲ್ಲದೆ ಅವರ

‘ವಾಯ್ಸ್ ಕ್ಲೋನ್’/ ಧ್ವನಿ ಪಡಿಯುಚ್ಚು ತಂತ್ರಜ್ಞಾನ ಸಿದ್ಧಗೊಳಿಸಿದ Open AI Read More »

ಕಡಬ: ಅಕ್ರಮ ಗೋಸಾಗಾಟದ ಕಾರು ಡಿಕ್ಕಿಯಾಗಿ ವ್ಯಕ್ತಿ ಸಾವು| ಶಾಸಕದ್ವಯರ ನೇತ್ರತ್ವದಲ್ಲಿ ರಾತ್ರೋರಾತ್ರಿ ಪ್ರತಿಭಟನೆ| ಸ್ಥಳಕ್ಕೆ‌ ಎಸ್ಪಿ ಭೇಟಿ; ಆರೋಪಿಗಳ ಬಂಧಿಸುವ ಭರವಸೆ

ಸಮಗ್ರ ನ್ಯೂಸ್: ಕಡಬ ಸಮೀಪದ ಮರ್ದಾಳ ಜಂಕ್ಷನ್ ನಲ್ಲಿ ಅಕ್ರಮ ಗೋ ಸಾಗಾಟದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಮಾ.30 ರ ಸಂಜೆ ನಡೆದಿತ್ತು. ನೆಕ್ಕಿತ್ತಡ್ಕದ ಅಚ್ಚಿಲ ಪಟ್ಟೆ ನಿವಾಸಿ ವಿಠಲ ರೈ ಮೃತ ದುರ್ದೈವಿ.‌ ಸುಬ್ರಹ್ಮಣ್ಯ ಕಡೆಯಿಂದ ಕಡಬ ಕಡೆಗೆ ತೆರಳುತ್ತಿದ್ದ ಮಾರುತಿ 800 ಕಾರು ಡಿಕ್ಕಿಯಾಗಿದ್ದು, ಕಾರನ್ನು ಚಾಲಕ ನಿಲ್ಲಿಸದೆ ಪರಾರಿಯಾಗಿದ್ದ. ಆರೋಪಿಗಳು ಕಾರನ್ನು ಮರ್ಧಾಳ ಸಮೀಪದ ನೆಕ್ಕಿತ್ತಡ್ಕ ಎಂಬಲ್ಲಿನ ದಿ| ರಶೀದ್ ಎಂಬವರ ಮನೆಯ ಮುಂಭಾಗದಲ್ಲಿ

ಕಡಬ: ಅಕ್ರಮ ಗೋಸಾಗಾಟದ ಕಾರು ಡಿಕ್ಕಿಯಾಗಿ ವ್ಯಕ್ತಿ ಸಾವು| ಶಾಸಕದ್ವಯರ ನೇತ್ರತ್ವದಲ್ಲಿ ರಾತ್ರೋರಾತ್ರಿ ಪ್ರತಿಭಟನೆ| ಸ್ಥಳಕ್ಕೆ‌ ಎಸ್ಪಿ ಭೇಟಿ; ಆರೋಪಿಗಳ ಬಂಧಿಸುವ ಭರವಸೆ Read More »

ರಾತ್ರಿ ಚೆನ್ನಾಗಿ ನಿದ್ದೆ ಮಾಡಿದರೂ, ಹಗಲು ವೇಳೆ ಆಕಳಿಕೆ, ನಿದ್ರಾಲಸ್ಯವಾ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ

ಸಮಗ್ರ ನ್ಯೂಸ್: ರಾತ್ರಿ ಚೆನ್ನಾಗಿ ನಿದ್ದೆ ಮಾಡಿದರೂ, ಪ್ರತಿದಿನ ಬೆಳಗ್ಗೆ ಒತ್ತಡದ ಭಾವನೆಯಿಂದ ಎಚ್ಚರಗೊಳ್ಳುತ್ತೀರಾ? ಹಾಗಾದ್ರೆ ಈ ಟಿಪ್ಸ್ ಫ್ರೆಶ್ ಆಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ.

ರಾತ್ರಿ ಚೆನ್ನಾಗಿ ನಿದ್ದೆ ಮಾಡಿದರೂ, ಹಗಲು ವೇಳೆ ಆಕಳಿಕೆ, ನಿದ್ರಾಲಸ್ಯವಾ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ Read More »

ಲೋಕಸಭೆ ಹಾಗೂ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ/ ಚುನಾವಣೋತ್ತರ ಸಮೀಕ್ಷೆ ಬ್ರೇಕ್ ಹಾಕಿದ ಆಯೋಗ

ಸಮಗ್ರ ನ್ಯೂಸ್: ಲೋಕಸಭೆ ಹಾಗೂ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಏ.19ರ ಬೆಳಿಗ್ಗೆ 7 ರಿಂದ ಜೂ.1ರ ಸಂಜೆ 6.30ರವರೆಗೆ ಯಾವುದೇ ಚುನಾವಣೋತ್ತರ ಸಮೀಕ್ಷೆ ನಡೆಸುವುದಾಗಲಿ, ಪ್ರಕಟಿಸುವುದಾಗಲಿ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗ ಆದೇಶ ನೀಡಿದೆ. ಅಭಿಪ್ರಾಯ ಸಂಗ್ರಹಗಳು, ಚುನಾವಣಾ ಸಮೀಕ್ಷೆ ಫಲಿತಾಂಶ ಸೇರಿದಂತೆ ಯಾವುದೇ ಚುನಾವಣೆ ಸಂಬಂಧಿ ಮಾಹಿತಿಗಳನ್ನು ಚುನಾವಣೆ ಮುಗಿಯುವವರೆಗೆ ವಿದ್ಯುನ್ಮಾನ ಮಾಧ್ಯಮಗಳಲ್ಲಿನ ಪ್ರಸಾರಕ್ಕೆ ಜನಪ್ರತಿನಿಧಿಗಳ ಕಾಯ್ದೆ ಅನುಸಾರ ನಿಬರ್ಂಧಿಸಲಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.

ಲೋಕಸಭೆ ಹಾಗೂ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ/ ಚುನಾವಣೋತ್ತರ ಸಮೀಕ್ಷೆ ಬ್ರೇಕ್ ಹಾಕಿದ ಆಯೋಗ Read More »