ಸಮಗ್ರ ನ್ಯೂಸ್: ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನ ಹಣ ಉಳಿಸಲು ನೂತನ ಪರಿಹಾರದ ಮೊರೆ ಹೋಗಿದ್ದು, ಯಾವುದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ರೆಡ್ ಕಾರ್ಪೆಟ್ ಬಳಸುವಂತಿಲ್ಲ ಎಂದು ಪ್ರಧಾನಿ ಶಹಬಾಜ್ ಷರೀಫ್ ಆದೇಶ ಹೊರಡಿಸಿದ್ದಾರೆ. ರೆಡ್ ಕಾರ್ಪೆಟ್ ಬಳಕೆ ನಿಷೇಧಿಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಹೊರೆ ಕಡಿಮೆ ಮಾಡುವುದು ಇದರ ಹಿಂದಿನ ಉದ್ದೇಶ ಎಂದು ವಿಶ್ಲೇಷಿಸಲಾಗಿದೆ.
ರಾಯಭಾರಿಗಳು, ರಾಜತಾಂತ್ರಿಕ ಅಧಿಕಾರಿಗಳು ಭಾಗವಹಿಸುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮಾತ್ರ ಶಿಷ್ಟಾಚಾರವಾಗಿ ರೆಡ್ ಕಾರ್ಪೆಟ್ ಬಳಕೆ ಅವಕಾಶ ನೀಡಲಾಗಿದೆ.
ಇತ್ತೀಚೆಗಷ್ಟೇ ಪ್ರಧಾನಿ ಷರೀಫ್, ದೇಶದಲ್ಲಿನ ಹಣಕಾಸು ಸಂಕಷ್ಟ ನಿವಾರಣೆಗೆ ಮಿತವ್ಯಯದ ಕ್ರಮ ತೆಗೆದುಕೊಳ್ಳುವುದು ಸರ್ಕಾರದ ಪ್ರಮುಖ ಆದ್ಯತೆ ಎಂದು ಹೇಳಿದ್ದಲ್ಲದೇ ಕಳೆದ ವಾರ, ಪ್ರಧಾನಿ ಷರೀಫ್ ಹಾಗೂ ಸಂಪುಟ ಸದಸ್ಯರು ತಮ್ಮ ವೇತನ ಹಾಗೂ ಸರ್ಕಾರಿ ಸವಲತ್ತುಗಳನ್ನು ಸ್ವಯಂ ಪ್ರೇರಣೆಯಿಂದ ತ್ಯಜಿಸಿದ್ದರು.