Ad Widget .

ಸ್ವಿಸ್ ಬ್ಯಾಂಕ್ ನಿಂದ ಭಾರತದ ಕಪ್ಪು ಹಣ ತರುತ್ತೇವೆ ಎಂದ ಮೋದಿ ಸರ್ಕಾರ ತಂದ್ರ ಹೇಳಿ: ಯತೀಂದ್ರ ಸಿದ್ದರಾಮಯ್ಯ

ಸಮಗ್ರ ನ್ಯೂಸ್‌ : ಮೋದಿ ಸರ್ಕಾರ ಆಡಳಿತಕ್ಕೆ ಬಂದು 10 ವರ್ಷ ಕಳೆದಿವೆ ಇಡೀ ದೇಶದ ಆರ್ಥಿಕ ಪರಿಸ್ಥಿತಿ ಹಿಂದೆ ಸರಿದಿದೆ. ಕಪ್ಪು ಹಣ ತರುತ್ತೇವೆ ಸುಖದ ಜೀವಮಾನ ನಿಮ್ಮದಾಗಬಹುದು ಎಂದ ಮೋದಿ ಕಪ್ಪು ಹಣ ತರಲೇ ಇಲ್ಲ, ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.

Ad Widget . Ad Widget .

ಅವರು ವಿರಾಜಪೇಟೆಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಟೀಕಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೊಡಗು ಮೈಸೂರು ಕ್ಷೇತ್ರದಿಂದ ಸರಳ ವ್ಯಕ್ತಿತ್ವ ಇರುವ ಜನರೊಂದಿಗೆ ಸದಾ ಬೆರೆಯುವ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ ಕೊಡಗು ಮೈಸೂರಿನ ಅಭಿವೃದ್ಧಿಗಾಗಿ ಈ ಬಾರಿ ಹೆಚ್ಚಿನ ಮತದೊಂದಿಗೆ ಲಕ್ಷ್ಮಣ್ ಅವರನ್ನು ಆಯ್ಕೆಗೊಳಿಸುವಂತೆ ಮನವಿ ಮಾಡಿಕೊಂಡರು.

Ad Widget . Ad Widget .

ವಿರಾಜಪೇಟೆಯ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಹಿಂದೆ ಪ್ರತಾಪ ಸಿಂಹ ಅವರ ಬಗ್ಗೆ ಹೆಚ್ಚು ಒಲವು ತೋರಿಸುತ್ತಿದ್ದ ಪ್ರತೀಕ್ ಪೊನ್ನಣ್ಣನವರು ಸೇರಿದಂತೆ ಅನೇಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಇದೇ ಸಂದರ್ಭ ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಮಹದೇವಪ್ಪ, ರೇಷ್ಮೆ ಸಚಿವರಾದ ವೆಂಕಟೇಶ್, ಕ್ರೀಡಾ ಪ್ರಾಧಿಕಾರದ ಅಧ್ಯಕ್ಷರಾದ ಪುಷ್ಪ, ಶಾಸಕ ಎ ಎಸ್ ಪೊನ್ನಣ್ಣ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಅಭ್ಯರ್ಥಿ ಲಕ್ಷ್ಮಣ್, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಸೇರಿದಂತೆ ಪಕ್ಷದ ಮುಖಂಡರುಗಳು, ವಿವಿಧ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇಂದಿನ ಸಮಾವೇಶದಲ್ಲಿ ಕೆ ಪಿ ಸಿ ಸಿ ವಕ್ತಾರ ಸಂಕೇತ್ ಪೊವಯ್ಯನವರು ಗೈರು ಹಾಜರಾಗಿದ್ದು ವಿಶೇಷವಾಗಿತ್ತು.

Leave a Comment

Your email address will not be published. Required fields are marked *