ಬೇಗೂರಿನಲ್ಲಿ ಸಹೋದರನಿಂದಲೇ ತಮ್ಮನಿಗೆ ಗುಂಡು| ಸ್ಥಳದಲ್ಲಿ ಮೃತಪಟ್ಟ ಮಲ್ಲಂಡ ಪ್ರಕಾಶ್

ಸಮಗ್ರ ನ್ಯೂಸ್: ಸಹೋದರನಿಂದಲೇ ತಮ್ಮನಿಗೆ ಗುಂಡು ಹೊಡೆದು ಕೊಲೆ ಮಾಡಿದ ಪ್ರಕರಣ ಪೊನ್ನಂಪೇಟೆ ತಾಲೂಕು ಬೇಗೂರಿನಲ್ಲಿ ಮಾ.30 ರಂದು ನಡೆದಿದೆ.

Ad Widget ... ..

ಕಾಂಗ್ರೆಸ್ ಪಕ್ಷದ ಮುಖಂಡ ಅರ್ವತೋಕ್ಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಂಡ ಪ್ರಕಾಶ್(57) ಎಂಬವರಿಗೆ ಅವರ ಸಹೋದರ ಸುಬ್ರಮಣಿ ಇದೀಗ ಬೇಗೂರು ತೋಟದಲ್ಲಿ ಗುಂಡು ಹೊಡೆದ ಪರಿಣಾಮ ಪ್ರಕಾಶ್ ಮೃತಪಟ್ಟಿದ್ದಾರೆ. ಪ್ರಕಾಶ್ ಪುತ್ರನಿಗೂ ಗುಂಡು ತಗಲಿದ್ದು ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ ಪೊನ್ನಂಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಘಟನೆ ಬಗ್ಗೆ ವಿವರ ಪಡೆದುಕೊಳ್ಳುತ್ತಿದ್ದಾರೆ.

Ad Widget

Leave a Comment

Your email address will not be published. Required fields are marked *