ಮಲ್ಪೆ: ರಿಕ್ಷಾ ಚಾಲಕ ನಾಪತ್ತೆ

ಸಮಗ್ರ ನ್ಯೂಸ್:‌ ಬಾಡಿಗೆ ಇದೆ ಎಂದು ಮನೆಯಿಂದ ಹೋದ ಆಟೋರಿಕ್ಷಾ ಚಾಲಕ ಮೂಡುತೋನ್ಸೆ ಗ್ರಾಮದ ಮಹಮ್ಮದ್‌ ಫೈಜಲ್‌ (36) ಮಾ. 27ರ ರಾತ್ರಿಯಿಂದ ನಾಪತ್ತೆಯಾಗಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.

Ad Widget ... ..

ತಡರಾತ್ರಿಯಾದರೂ ಮನೆಗೆ ಬಾರದ್ದನ್ನು ಕಂಡು ಪತ್ನಿ ಫೈಜಲ್‌ ಅವರ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್‌ಆಫ್‌ ಬರುತ್ತಿತ್ತು. ಅವರ ಆಟೋರಿಕ್ಷಾ ಮನೆ ಬಳಿಯ ಮೈದಾನದ ಬಳಿ ನಿಲ್ಲಿಸಿರುವುದು ಪತ್ತೆಯಾಗಿದೆ.

Ad Widget

ಫೈಜಲ್‌ ಅವರು ಆಟೋರಿಕ್ಷಾ ಚಾಲಕ ವೃತ್ತಿಯ ಜತೆಗೆ ಟೈಲ್ಸ್‌ ಜೋಡಿಸುವ ಕೆಲಸವನ್ನೂ ಸಹ ಮಾಡಿಕೊಂಡಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ.

Leave a Comment

Your email address will not be published. Required fields are marked *