Ad Widget .

ನಾಗಾಲ್ಯಾಂಡ್‍ನಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ/ ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಷನ್ ಗುಪ್ತ ಸಭೆ

ಸಮಗ್ರ ನ್ಯೂಸ್: ನಾಗಾಲ್ಯಾಂಡ್‍ನಲ್ಲಿ ಚುನಾವಣೆ ಹೊಸ್ತಿಲಿನಲ್ಲಿಯೇ ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಷನ್ (ಇಎನ್‍ಪಿಒ) ತುಯೆನ್ಸಾಂಗ್‍ನಲ್ಲಿ ತಮ್ಮ ಪ್ರಾಂತ್ಯದ 20 ಶಾಸಕರು ಹಾಗೂ ಏಕೈಕ ಸಂಸದರ ಜೊತೆ ಇಎನ್‍ಪಿಒ ಗುಪ್ತ ಸಭೆ ನಡೆಸಿದ್ದು, ನಮ್ಮ ಪ್ರತ್ಯೇಕ ರಾಜ್ಯ ಬೇಡಿಕೆ ಈಡೇರುವ ತನಕ ಚುನಾವಣೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ನಿರ್ಧಾರಕ್ಕೆ ತಾವು ಬದ್ಧವಾಗಿದ್ದೇವೆ ಎಂದು ಸ್ಪಷ್ಟಪಡಿಸಿದೆ.

Ad Widget . Ad Widget .

ಇಎನ್‍ಪಿಒ ಉಪಾಧ್ಯಕ್ಷ ಡಬ್ಲ್ಯು. ಬೆಂಡಾಂಗ್ ಚಾಂಗ್, ಕೇಂದ್ರ ಸರ್ಕಾರವು ನಮ್ಮ ಬೇಡಿಕೆ ಈಡೇರಿಸುವ ತನಕ ಲೋಕಸಭಾ ಚುನಾವಣೆಯಿಂದ ದೂರ ಉಳಿಯಲಿದ್ದೇವೆ, ಅಲ್ಲದೆ ಚುನಾವಣಾ ಪ್ರಚಾರ ಕಾರ್ಯಕ್ಕೂ ಇಲ್ಲಿ ಅವಕಾಶ ನೀಡದಿರಲು ತೀರ್ಮಾನಿಸಿದ್ದೇವೆ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

Ad Widget . Ad Widget .

ಏಳು ನಾಗಾ ಬುಡಕಟ್ಟುಗಳ ಸಂಘಟನೆಯಾಗಿರುವ ಈ ಇಎನ್‍ಪಿಒ, ಪೂರ್ವ ನಾಗಾಲ್ಯಾಂಡ್‍ನ ಆರು ಜಿಲ್ಲೆಗಳನ್ನು ಒಳಗೊಂಡ ಪ್ರತ್ಯೇಕ ರಾಜ್ಯ ಸ್ಥಾಪನೆಗಾಗಿ 2010ರಿಂದ ಹೋರಾಟ ನಡೆಸುತ್ತಿದೆ.

Leave a Comment

Your email address will not be published. Required fields are marked *