Ad Widget .

ಒಂದೇ ಕಾಲಲ್ಲಿ ಸಿಕ್ಕಿಂನ ಮೌಂಟ್ ರೆನಾಕ್ ಶಿಖರ ಏರಿ ಉದಯ್ ಕುಮಾರ್

ಸಮಗ್ರ ನ್ಯೂಸ್: 16,500 ಅಡಿ ಎತ್ತರದ ಸಿಕ್ಕಿಂನ ಮೌಂಟ್ ರೆನಾಕ್ ಶಿಖರವನ್ನು, ಕೋಲ್ಕತಾದ ಬೆಲ್ಫಾರಿಯಾ ನಿವಾಸಿಯಾದ ಉದಯ್ ಕುಮಾರ್ ಒಂದೇ ಕಾಲಲ್ಲಿ ಏರಿ ಸಾಧನೆ ಮಾಡಿದ್ದಾರೆ.

Ad Widget . Ad Widget .

ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗ ಮಾಡುತ್ತಿರುವ ಉದಯ್ ಕುಮಾರ್, 2015ರ ರೈಲು ಅಪಘಾತದಲ್ಲಿ ತಮ್ಮ ಎಡಗಾಲು ಮೊಣಕಾಲಿನವರೆಗೂ ಹಾಗೂ ಬಲಗಾಲಿನ ನಾಲ್ಕು ಬೆರಳಗಳನ್ನು ಕಳೆದುಕೊಂಡಿದ್ದರು. ಇದರಿಂದ ಕುಮಾರ್ ಶೇ.91 ರಷ್ಟು ಅಂಗವಿಕಲತೆಯನ್ನು ಎದುರಿಸುತ್ತಿದ್ದರು. ಇದರ ಹೊರತಾಗಿಯೂ ಒಂದೇ ಕಾಲಿನಲ್ಲಿ ಶಿಖರವನ್ನು ಏರಿ ಸಾಧನೆ ಮಾಡಿದ್ದಾರೆ.

Ad Widget . Ad Widget .

ಪ್ರಸ್ತುತ ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಏರಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Leave a Comment

Your email address will not be published. Required fields are marked *