Ad Widget .

10 ಕೋಟಿ ರೂ. ಬಂಪರ್‌ ಲಾಟರಿ ಗೆದ್ದ ಆಟೋ ಚಾಲಕ

ಸಮಗ್ರ ನ್ಯೂಸ್‌ : ಕೇರಳದ ಬಂಪರ್‌ ಸಮ್ಮರ್‌ ಲಾಟರಿಯಲ್ಲಿ 10 ಕೋಟಿ ರೂ. ಬಂಪರ್‌ ಲಾಟರಿ ಹೊಡೆದ ಕೇರಳದ ಕಣ್ಣೂರಿನ ಕಾರ್ತಿಕಾಪುರಂನಲ್ಲಿ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದ ನಜರ್‌ ಅವರು ರಾತ್ರೋರಾತ್ರಿ ಕೋಟ್ಯಧೀಶರಾಗಿದ್ದಾರೆ.

Ad Widget . Ad Widget .

ನಜರ್‌ ಅವರು ಮಾಧ್ಯಮದ ಜೊತೆ ಮಾತನಾಡಿ, “ನನಗೆ ಲಾಟರಿ ಬಹುಮಾನ ಸಿಕ್ಕಿದೆ ಎಂಬ ಸುದ್ದಿ ತಿಳಿದು ಶಾಕ್‌ ಆಯಿತು. ಈಗಲೂ ನಾನು ಈ ಸುದ್ದಿಯ ಗುಂಗಿನಿಂದ ಹೊರಬಂದಿಲ್ಲ” ಎಂದು ತಿಳಿಸಿದರು.

Ad Widget . Ad Widget .

ಕೇರಳದಲ್ಲಿ ರಾಜ್ಯ ಸರ್ಕಾರವೇ ಪ್ರಮುಖ ಹಬ್ಬಗಳು ಸೇರಿ ಹಲವು ಸಂದರ್ಭಗಳಲ್ಲಿ ಲಾಟರಿ ಆಯೋಜನೆ ಮಾಡುತ್ತದೆ. ಬೇಸಿಗೆ ಬಂಪರ್‌ ಲಾಟರಿಗೆ ಈ ಬಾರಿ ಸುಮಾರು 36 ಲಕ್ಷ ಲಾಟರಿ ಟಿಕೆಟ್‌ಗಳನ್ನು ಪ್ರಿಂಟ್‌ ಮಾಡಲಾಗಿತ್ತು. ಅವುಗಳಲ್ಲಿ 33.5 ಲಕ್ಷ ಟಿಕೆಟ್‌ಗಳಲ್ಲಿ ಮಾರಾಟ ಮಾಡಲಾಗಿದೆ. ಇದರಲ್ಲಿ ಮೊದಲ ಬಹುಮಾನವಾಗಿ 10 ಕೋಟಿ ರೂ. ಗೆದ್ದ ನಜರ್‌ ಅವರ ಕುಟುಂಬಸ್ಥರು ಕೂಡ ಸಂತಸ ವ್ಯಕ್ತಪಡಿಸಿದ್ದು, ಟ್ಯಾಕ್ಸ್‌ ಕಡಿತಗೊಂಡು ಉಳಿದ ಮೊತ್ತ ಗೆದ್ದವರ ಕೈ ಸೇರಲಿದೆ.

Leave a Comment

Your email address will not be published. Required fields are marked *