Ad Widget .

ಅಕ್ರಮ ಗೋಮಾಂಸ ಮಾರಾಟ|60ಕ್ಕೂ ಹೆಚ್ಚು ಜಾನುವಾರುಗಳನ್ನು ಹತ್ಯೆ ಮಾಡಿದ ರಾಕ್ಷಸರು

ಸಮಗ್ರ ನ್ಯೂಸ್: ಅಕ್ರಮ ಗೋಮಾಂಸ ಮಾರಾಟಕ್ಕಾಗಿ
ಜಾನುವಾರುಗಳನ್ನು ಮಾರಣಹೋಮ ನಡೆಸಿದ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಬಾಗೂರು ರಸ್ತೆ ಬಳಿ ನಡೆದಿದೆ. ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ 60 ಕ್ಕೂ ಹೆಚ್ಚು ಗೋವುಗಳನ್ನು ಹತ್ಯೆ ಮಾಡಿರುವುದು ಪತ್ತೆಯಾಗಿದೆ.

Ad Widget . Ad Widget .

ವಿಚಾರ ತಿಳಿಯುತ್ತಿದ್ದಂತೆ ಮಧ್ಯರಾತ್ರಿ ಸುಮಾರು 12.30ರ ವೇಳೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಅಷ್ಟರಲ್ಲೇ ಕರುಗಳು ಸೇರಿದಂತೆ 60ಕ್ಕೂ ಹೆಚ್ಚು ಜಾನುವಾರಗಳನ್ನು ಹತ್ಯೆ ಮಾಡಿ ರುಂಡಗಳನ್ನು ಬೇರ್ಪಡಿಸಿ, ಕೈಕಾಲುಗಳನ್ನು ಕತ್ತರಿಸಿ, ಚರ್ಮ ಸುಲಿದು ನೇತು ಹಾಕಲಾಗಿತ್ತು. ಸದ್ಯ, ಐದು ಗೋವುಗಳನ್ನು ಪೊಲೀಸರು ರಕ್ಷಣೆ ಮಾಡಿದ್ದು, ಸಾವಿರ ಕೆಜಿಗೂ ಅಧಿಕ ಗೋಮಾಂಸವನ್ನು ವಶಕ್ಕೆ ಪಡೆದಿದ್ದಾರೆ.

Ad Widget . Ad Widget .

ಮೊಹಮ್ಮದ್‌ ಅಬ್ದುಲ್‌ ಹಕ್‌ ಎಂಬುವವರು ಗೋವುಗಳ ಮಾಂಸವನ್ನು ಅಕ್ರಮ ಮಾರಾಟದಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ. ಗೋವುಗಳನ್ನು ವಧೆ ಮಾಡುವಾಗಲೇ ಪೊಲೀಸರು ದಾಳಿ ನಡೆಸಿದ್ದು, ದುಷ್ಕರ್ಮಿಗಳು ಕೂಡಲೇ ಪರಾರಿಯಾಗಿದ್ದಾರೆ. ಗೋವುಗಳನ್ನು ಸಂಹರಿಸಿ, ಅವುಗಳ ರಕ್ತವನ್ನು ಕೆರೆ ಬಿಡುತ್ತಿದ್ದರು ಎಂಬ ಕುರಿತು ಕೂಡ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವಿಚಾರವಾಗಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *