Ad Widget .

ಬಿಜೆಪಿ ಸೇರಿದ ಬಿಜೆಡಿ ಸ್ಥಾಪಕ ಸದಸ್ಯ

ಸಮಗ್ರ ನ್ಯೂಸ್: ಬಿಜು ಜನತಾದಳದ (ಬಿಜೆಡಿ) ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ, ಕಟಕ್‍ನಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿರುವ 67 ವರ್ಷದ ಭರ್ತೃಹರಿ ಮಹತಾಬ್ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಭರ್ತೃಹರಿಯವರ ಜತೆಗೆ, ಬಿಜೆಡಿಯ ಮಾಜಿ ಸಂಸದ ಸಿದ್ದಾಂತ ಮಹಪಾತ್ರ ಹಾಗೂ ಪದ್ಮಶ್ರಿ ಪುರಸ್ಕೃತ ಸಂತಾಲಿ ಭಾಷೆಯಲ್ಲಿ ಸಾಹಿತಿ ದಮಯಂತು ಬೇಷರ ಅವರೂ ಬಿಜೆಪಿಗೆ ಸೇರಿದರು.

Ad Widget . Ad Widget .

ಬಿಜೆಪಿಗೆ ಸೇರಿದ ಬಳಿಕ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಭರ್ತೃಹರಿ ಮಹತಾಬ್, ‘ಒಡಿಶಾದ ಅಭಿವೃದ್ಧಿ ಹಾಗೂ ಪ್ರಗತಿಗಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿಯವರ ಶಕ್ತಿ, ಗೃಹ ಸಚಿವ ಅಮಿತ್ ಶಾ ಅವರ ನಂಬಿಕೆ, ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಪ್ರೇರಣೆಯಿಂದಾಗಿ ನಮಗೆ ಮುಂದುವರಿಯಲು ಸಾಧ್ಯವಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಒಡಿಶಾ ಬದಲಾವಣೆ ಕಾಣಲಿದೆ’ ಎಂದು ಹೇಳಿದರು.

Ad Widget . Ad Widget .

ಧಮೇರ್ಂದ್ರ ಪ್ರಧಾನ್ ಸಹಿತ ಬಿಜೆಪಿಯ ಹಿರಿಯ ನಾಯಕರು ಈ ವೇಳೆ ಹಾಜರಿದ್ದರು.

Leave a Comment

Your email address will not be published. Required fields are marked *