ಮಲ್ಪೆ: ಸಮುದ್ರದ ಅಲೆಗೆ ಸಿಲುಕಿ ಅಸ್ವಸ್ಥಗೊಂಡಿದ್ದ ಮಗುವಿನ ರಕ್ಷಣೆ

ಸಮಗ್ರ ನ್ಯೂಸ್‌: ಬೀಚ್‌ನಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರದಲ್ಲಿ ಮುಳುಗಿ ಅಸ್ವಸ್ಥಗೊಂಡ ಮಗುವನ್ನು ಮುಳುಗು ತಜ್ಞ ಈಶ್ವ‌ರ್ ಮಲ್ಪೆ ತಂಡ ರಕ್ಷಿಸಿರುವ ಘಟನೆ ಸಂಭವಿಸಿದೆ.
ಬೀಚ್‌ಗೆ ಪ್ರವಾಸಕ್ಕೆ ಬಂದಿದ್ದ ಮೈಸೂರು ಮೂಲದ ದಂಪತಿ ತಮ್ಮ ಒಂದೂವರೆ ವರ್ಷ ಪ್ರಾಯದ ಪೂರ್ವಿ ಎಂಬ ಮಗುವಿನೊಂದಿಗೆ ಸಮುದ್ರದಲ್ಲಿ ಸ್ನಾನಕ್ಕಿಳಿದಿದ್ದರು. ಈ ವೇಳೆ ಮಗು ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ, ನೀರು ಕುಡಿದು, ಪ್ರಜ್ಞಾಹೀನವಾಗಿತ್ತು.

Ad Widget ... ..

ಇದನ್ನು ಕಂಡ ಮಲ್ಪೆಬೀಚ್ ಆಟೋರಿಕ್ಷಾ ನಿಲ್ದಾಣದ ಆಟೋ ಚಾಲಕರು ಆ ಮಗುವನ್ನು ತನ್ನ ಆಟೋರಿಕ್ಷಾ ಮೂಲಕ ಈಶ್ವ‌ರ್ ಮಲ್ಪೆ ಅವರ ಆಂಬುಲೆನ್ಸ್ ಬಳಿ ತಲುಪಿಸಿದರು.
ತಕ್ಷಣ ಕಾರ್ಯ ಪ್ರವೃತ್ತರಾದ ಈಶ್ವರ್ ಮಲ್ಪೆ ಮತ್ತು ತಂಡ ಆ ಮಗುವಿಗೆ ಪ್ರಥಮ ಚಿಕಿತ್ಸೆ ನೀಡಿ, ಆಂಬುಲೆನ್ಸ್ ಮೂಲಕ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿತು. ಸದ್ಯ ಮಗು ಚೇತರಿಸಿಕೊಳ್ಳುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಿಳಿದು ಬಂದಿದೆ.

Ad Widget

Leave a Comment

Your email address will not be published. Required fields are marked *