ಸಮಗ್ರ ನ್ಯೂಸ್: ಅತಿಯಾದ ಕೆಲಸ ಮತ್ತು ವಿಶ್ರಾಂತಿ ಕೊರತೆಯ ಕಾರಣದಿಂದಾಗಿ ಕೆ ಎಸ್ ಆರ್ ಟಿ ಸಿ ಬಸ್ ಚಾಲಕರು ಹೆಚ್ಚುವರಿ ಡ್ಯೂಟಿ ಮಾಡುತ್ತಿದ್ದ ಹಿನ್ನೆಲೆ ಅಪಘಾತ ಪ್ರಕರಣಗಳು ಕಂಡುಬಂದಿದ್ದು, ಹೀಗಾಗಿ ಚಾಲಕರಿಗೆ ಡಬಲ್ ಡ್ಯೂಟಿಯಿಂದ ವಿನಾಯಿತಿ ನೀಡುವ ಮಹತ್ವದ ನಿರ್ಧಾರ ಕೆ ಎಸ್ ಆರ್ ಟಿ ಸಿ ಕೈಗೊಂಡಿದೆ.
ಇಂದಿನಿಂದ, ಚಾಲಕರು ರಾತ್ರಿ ಅಥವಾ ದೀರ್ಘ ಪ್ರಯಾಣದ ನಂತರ ವಿಶ್ರಾಂತಿ ಪಡೆಯಬೇಕು. 8 ಗಂಟೆಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಲು ನಿಮಗೆ ಅನುಮತಿ ಇಲ್ಲ. ಹೆಚ್ಚುವರಿ ಶಿಫ್ಟ್ 8 ಗಂಟೆಗಿಂತ ಅಧಿಕ ಮತ್ತು ರಾತ್ರಿ ವೇಳೆ ಹೆಚ್ಚುವರಿ ಡ್ಯೂಟಿ ಮಾಡಿದರೆ, ನೀವು 4-5 ಗಂಟೆಗಳ ವಿಶ್ರಾಂತಿಯನ್ನು ಪಡೆಯಬೇಕು. ಕೆಲಸದ ಸಮಯವು ವಾರಕ್ಕೆ 48 ಗಂಟೆಗಳನ್ನು ಮೀರಬಾರದು ಎಂದು ಶಿಫಾರಸು ಮಾಡಲಾಗಿದೆ.
ಕೆಎಸ್‍ಆರ್‍ಟಿಸಿ ಬಸ್‍ಗಳಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಕಾರಣವನ್ನು ಪತ್ತೆಹಚ್ಚಲು ಸಮಿತಿಯನ್ನು ರಚಿಸಲಾಗಿತ್ತು. ಇದರಿಂದ ರಾತ್ರಿ ವೇಳೆ ಎರಡು ಪಾಳಿಯಲ್ಲಿ ಕೆಲಸ ಮಾಡುವುದರಿಂದ ನಿದ್ರೆಯ ಕೊರತೆ ಹಾಗೂ ಬಸ್ ಓಡಿಸಲು ಸಾಧ್ಯವಾಗದೆ ಅಪಘಾತಗಳು ಸಂಭವಿಸುತ್ತಿರುವುದು ಕಂಡು ಬಂದಿದೆ.