ಹೆಚ್ಚುತ್ತಿರುವ ಪ್ರಯಾಣಿಕರು/ ತಾತ್ಕಾಲಿಕ ಹೆಚ್ಚುವರಿ ಬೋಗಿ ಸೇರ್ಪಡೆಗೊಳಿಸಿದ ರೈಲ್ವೆ ಇಲಾಖೆ

ಸಮಗ್ರ ನ್ಯೂಸ್: ರೈಲ್ವೆ ಇಲಾಖೆ ಕೆಲವು ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಿರುವ ಕುರಿತು ಗಮನಹರಿಸಿದ್ದು, ಹೀಗಾಗಿ ತಾತ್ಕಾಲಿಕ ಹೆಚ್ಚುವರಿ ಬೋಗಿ ಸೇರ್ಪಡೆಗೊಳಿಸಿದೆ.

Ad Widget ... ..

ಮಂಗಳೂರು ಸೆಂಟ್ರಲ್ – ತಿರುವನಂತಪುರ ಸೆಂಟ್ರಲ್ ಮಾವೇಲಿ ಎಕ್ಸ್‍ಪ್ರೆಸ್‍ಗೆ (ರೈಲು ಸಂಖ್ಯೆ 16603, 16604) ಮಾ. 27 ರಿಂದ 31 ರವರೆಗೆ ಮಂಗಳೂರಿನಿಂದ ತಿರುವನಂತಪುರಂಗೆ ಹಾಗೂ ಮಾ. 28ರಿಂದ ಏ. 1ರವರೆಗೆ ತಿರುವನಂತಪುರಂನಿಂದ ಮಂಗಳೂರಿಗೆ ಒಂದು ಎಸಿ 3-ಟೈರ್ ಬೋಗಿ ಹೆಚ್ಚಿಸಲಾಗಿದೆ.

Ad Widget

ಮಾ. 27, 29 ಮತ್ತು 31ರಂದು ರೈಲು ಸಂಖ್ಯೆ 16348 ಮಂಗಳೂರು ಸೆಂಟ್ರಲ್ ತಿರುವನಂತಪುರಂ ಸೆಂಟ್ರಲ್ ಎಕ್ಸ್‍ಪ್ರೆಸ್ ಮತ್ತು ಮಾ. 28, 30 ಮತ್ತು 01ರಂದು ತಿರುವನಂತಪುರದಿಂದ ಹೊರಡುವ ಅದೇ ರೈಲಿಗೆ ತಾತ್ಕಾಲಿಕವಾಗಿ ಒಂದು ಹೆಚ್ಚುವರಿ ಸ್ಲಿಪರ್ ಕ್ಲಾಸ್ ಬೋಗಿ ಹೆಚ್ಚಿಸಲಾಗಿದೆ.

Leave a Comment

Your email address will not be published. Required fields are marked *