Ad Widget .

ನಾಳೆ ಹಗರಣದ ಹಣ ಎಲ್ಲಿದೆ ಎಂಬ ಮಾಹಿತಿಯನ್ನು ಕೇಜ್ರಿವಾಲ್ ನೀಡಲಿದ್ದಾರೆ;ಸುನೀತಾ ಕೇಜ್ರಿವಾಲ್

ಸಮಗ್ರ ನ್ಯೂಸ್: ಹೊಸ ಅಬಕಾರಿ ನೀತಿ ಹಗರಣದ ಹಣ ಎಲ್ಲಿದೆ ಎಂಬ ಮಾಹಿತಿಯನ್ನು ಮಾರ್ಚ್ 28ರಂದು ಕೋರ್ಟ್‌‌ಗೆ ಹಾಜರಾಗಲಿರುವ ಅರವಿಂದ್ ಕೇಜ್ರಿವಾಲ್ ರವರು ಮಾಹಿತಿಯನ್ನು ನೀಡಲಿದ್ದಾರೆ. ಮದ್ಯ ಹಗರಣದ ಹಣ ಎಲ್ಲಿದೆ ಎಂಬುದನ್ನು ಸಾಕ್ಷ್ಯ ಸಮೇತ ದೇಶದ ಜನರ ಮುಂದೆ ತಿಳಿಸುತ್ತೇನೆ ಎಂಬ ಮಾಹಿತಿಯನ್ನು ನನಗೆ ಹೇಳಿದ್ದಾರೆ ಎಂದು ಅವರ ಪತ್ನಿ ಸುನೀತಾ ಕೇಜ್ರಿವಾಲ್ ಮಾಹಿತಿಯನ್ನು ನೀಡಿದ್ದಾರೆ.

Ad Widget . Ad Widget .

ತಮ್ಮ ನಿವಾಸದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಅವರನ್ನು ಭೇಟಿಯಾದ ವೇಳೆ ಎಲ್ಲ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ಹೇಳಿದ್ದಾರೆ. ನಮ್ಮ‌ ನಿವಾಸದ ಮೇಲೆ ದಾಳಿ ನಡೆಸಿದಾಗ ಇಡಿ ಅಧಿಕಾರಿಗಳಿಗೆ ಕೇವಲ 75,000 ರೂ. ಲಭಿಸಿದೆ. ಇಡಿ ಈವರೆಗೆ 250ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿದೆ ಹಣಕ್ಕಾಗಿ ಹುಡುಕುತ್ತಿದ್ದಾರೆ ಅವರಿಗೆ ಈವರೆಗೂ ಏನೂ ಸಿಕ್ಕಿಲ್ಲ ಎಂದರು.

Ad Widget . Ad Widget .

ಎರಡು ದಿನಗಳ ಹಿಂದೆ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ನೀರು ಮತ್ತು ಒಳಚರಂಡಿ ಸಮಸ್ಯೆಗಳ ಬಗ್ಗೆ ಜಲಸಚಿವ ಅತಿಶಿ ಅವರಿಗೆ ಪತ್ರ ಕಳುಹಿಸಿದ್ದಾರೆ. ಈಗ ಕೇಂದ್ರ ಸರ್ಕಾರ ಅವರ ವಿರುದ್ಧ ಕೇಸ್ ದಾಖಲಿಸಿದೆ. ಒಟ್ಟಿನಲ್ಲಿ ಅವರು ದೆಹಲಿಯನ್ನ ನಾಶಮಾಡಲು ಬಯಸುತ್ತಾರೆ? ಜನರು ನರಳುತ್ತಲೇ ಇರಬೇಕೆಂದು ಅವರು ಬಯಸುತ್ತಾರೆಯೇ? ಅರವಿಂದ್ ಕೇಜ್ರಿವಾಲ್‌ಗೆ ಈ ಘಟನೆಯಿಂದ ತುಂಬಾ ನೋವಾಗಿದೆ ಎಂದು ಭಾವುಕರಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

Leave a Comment

Your email address will not be published. Required fields are marked *