Ad Widget .

ಮದ್ಯ ನೀತಿ ಹಗರಣ/ ಇಂದು ಹೈಕೋರ್ಟ್‍ನಲ್ಲಿ ವಿಚಾರಣೆ

ಸಮಗ್ರ ನ್ಯೂಸ್: ದೆಹಲಿ ಅಬಕಾರಿ ಹಗರಣ ತನಿಖೆ ಚುರುಕುಗೊಂಡಿದ್ದು, ಇತ್ತ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜಿವಾಲ್ ಬಂಧನ ಪ್ರಶ್ನಿಸಿ ದೆಹಲಿ ಹೈಕೋರ್ಟ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇಂದು(ಮಾ.27) ಜಸ್ಟೀಸ್ ಸ್ವರ್ಣ ಕಾಂತ ಶರ್ಮ 10.30ಕ್ಕೆ ಅರ್ಜಿಯ ವಿಚಾರಣೆ ನಡೆಸಲಿದ್ದಾರೆ.

Ad Widget . Ad Widget . Ad Widget . Ad Widget .

ಮಾರ್ಚ್ 21ರಂದು ದೆಹಲಿ ಅಬಕಾರಿ ನೀತಿ ಅಕ್ರಮಗಳ ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು ಮುಖ್ಯಮಂತ್ರಿ ಕೇಜಿವಾಲ್ ನಿವಾಸದ ಮೇಲೆ ದಾಳಿ ನಡೆಸಿ, 9 ಸಮನ್ಸ್‍ಗೆ ಗೈರಾಗಿದ್ದ ಕೇಜ್ರಿವಾಲ್‍ರನ್ನು ಬಂಧಿಸಿದ್ದರು.

Ad Widget . Ad Widget .

ಬಳಿಕ ರೋಸ್ ಅವೆನ್ಯೂ ಕೋರ್ಟ್ ಕೇಬ್ರಿವಾಲ್ ಅವರನ್ನು ಮಾರ್ಚ್ 28ರ ವರೆಗೆ ಇಡಿ ಕಸ್ಟಡಿಗೆ ನೀಡಿದೆ. ಇದರ ಬೆನ್ನಲ್ಲೇ ಆಮ್ ಆದ್ಮಿ ಪಕ್ಷ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದೆ. ಅರವಿಂದ್ ಕೇಜಿವಾಲ್ ಬಂಧನ ಕಾನೂನು ಬಾಹಿರವಾಗಿದೆ. ಹೀಗಾಗಿ ತಕ್ಷಣವೇ ಕೇಜಿವಾಲ್ ಬಿಡುಗಡಗೆ ಕೋರ್ಟ್ ಆದೇಶ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಈ ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಾರ್ಚ್ 27ರಂದು ವಿಚಾರಣೆ ನಡೆಸಲಿದ್ದು ತೀವ್ರು ಕುತೂಹಲ ಕೆರಳಿಸಿದೆ.

Leave a Comment

Your email address will not be published. Required fields are marked *