ಮೈಕ್ರೋಸಾಫ್ಟ್ ವಿಂಡೋಸ್ ಮತ್ತು ಸರ್ಫೇಸ್ ಸಂಸ್ಥೆಗಳ ಮುಖ್ಯಸ್ಥರಾಗಿ ಭಾರತೀಯ ಮೂಲದ ಪವನ್ ದವುಲೂರಿ ನೇಮಕ

ಸಮಗ್ರ ನ್ಯೂಸ್: ಜಗತ್ತಿನ ದೈತ್ಯ ಟೆಕ್ ಕಂಪನಿಗಳಲ್ಲಿ ಒಂದಾಗಿರುವ ಮೈಕ್ರೋಸಾಫ್ಟ್ ವಿಂಡೋಸ್ ಮತ್ತು ಸರ್ಫೇಸ್ ಸಂಸ್ಥೆಗಳ ಮುಖ್ಯಸ್ಥರಾಗಿ ಭಾರತೀಯ ಮೂಲದ ಪವನ್ ದವುಲೂರಿ ನೇಮಕಗೊಂಡಿದ್ದಾರೆ.

Ad Widget ... ..

ಪವನ್ ಮದ್ರಾಸ್ ಐಐಟಿಯಲ್ಲಿ ವ್ಯಾಸಂಗ ಮಾಡಿದ್ದು, ಇದಕ್ಕೂ ಮೊದಲು ಮೈಕ್ರೋಸಾಫ್ಟ್ ಸರ್ಫೇಸ್ ಸಿಲಿಕಾನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ವಿಂಡೋಸ್ ಮುಖ್ಯಸ್ಥ ಪನೋಸ್ ಪಣಯ್ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಅಮೆಜಾನ್ ಸಂಸ್ಥೆಗೆ ತೆರಳಿದ ಹಿನ್ನೆಲೆಯಲ್ಲಿ ಭಾರತೀಯನನ್ನು ಆ ಸ್ಥಾನಕ್ಕೆ ನೇಮಿಸಲಾಗಿದೆ.

Ad Widget

ಇದರೊಂದಿಗೆ ಮೈಕ್ರೋಸಾಫ್ಟ್‍ನಲ್ಲಿ ಸಿಇಒ ಆಗಿರುವ ಭಾರತೀಯ ಸತ್ಯ ನಾದೆಲ್ಲಾ ಜೊತೆಗೆ ಮತ್ತೊಬ್ಬರು ಅಗ್ರ ಸ್ಥಾನಕ್ಕೇರಿದಂತಾಗಿದೆ.

Leave a Comment

Your email address will not be published. Required fields are marked *