ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆ ಪ್ರಚಾರಕ್ಕೆ ವೇದಿಕೆ ಸಿದ್ಧಗೊಂಡಿದ್ದು, ಈ ಹಿನ್ನಲೆಯಲ್ಲಿ ಬಿಹಾರ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ರಸ್ತೆ ಸಾರಿಗೆ ಮತ್ತು ರಾಜ್ಯ ಸಚಿವ ನಿತಿನ್ ಗಡ್ಕರಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಮೂರು ರಾಜ್ಯಗಳ ಪಟ್ಟಿಯಲ್ಲಿ ಇದ್ದಾರೆ.
ಪ್ರಮುಖವಾಗಿ ಸುಶೀಲ್ ಕುಮಾರ್ ಮೋದಿ. ಮಂಗಲ್ ಪಾಂಡೆ, ಸಂಜಯ್ ಜೈಸ್ವಾಲ್, ರೇಣು ದೇವಿ, ಸಾಮ್ರಾಟ್ ಚೌಧರಿ, ವಿಜಯ್ ಕುಮಾರ್ ಸಿನ್ಹಾ, ಅನಿಲ್ ಶರ್ಮಾ, ನಿವೇದಿತಾ ಸಿಂಗ್, ನಿಕ್ಕಿ ಹೆಂಬ್ರೆನ್, ಅಶ್ವನಿ ಚೌಬೆ, ಸೈಯದ್ ಶಾನವಾಜ್ ಹುಸೇನ್, ಕಳೆದ 10 ವರ್ಷಗಳಿಂದ ದೆಹಲಿ ಸಂಸದರಾಗಿರುವ ಭೋಜ್‍ಪುರಿ ನಟ ಮನೋಜ್ ತಿವಾರಿ, ಮಧ್ಯಪ್ರದೇಶ ಮುಖ್ಯಮಂತ್ರಿ ಡಾ.ಮೋಹನ್ ಯಾದವ್ ಬಿಹಾರದಲ್ಲಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದರೆ,
ಮಧ್ಯಪ್ರದೇಶದ ಪಟ್ಟಿಯಲ್ಲಿ ರಾಜ್ಯ ಮಾಜಿ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರ ಹೆಸರು ಇದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಛತ್ತೀಸ್‍ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ, ಅಸ್ಸಾಂ ಮುಖ್ಯಮಂತ್ರಿ ಹೇಮಂತ್ ವಿಶ್ವ ಶರ್ಮಾ, ರಾಜಸ್ಥಾನ ಮುಖ್ಯಮಂತ್ರಿ ಭಜನ್‍ಲಾಲ್ ಶರ್ಮಾ, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಕೆಲ ದಿನಗಳ ಹಿಂದೆ ಕಾಂಗ್ರೆಸ್ ನಿಂದ ಬಿಜೆಪಿ ಸೇರಿದ್ದ ಸುರೇಶ್ ಪಚೌರಿ ಸಹಿತ ರಾಜ್ಯಗಳ ಹಲವು ಮುಖ್ಯಮಂತ್ರಿಗಳು ಕೂಡಾ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದಾರೆ.
ಇನ್ನು ಪಶ್ಚಿಮ ಬಂಗಾಳದ 40 ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಚಲನಚಿತ್ರ ನಟ ಮಿಥುನ್ ಚಕ್ರವರ್ತಿ, ಪಕ್ಷದ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರ ಹೆಸರೂ ಸೇರಿದೆ. ಶುವೇಂದು ಅಧಿಕಾರಿ, ದಿಲೀಪ್ ಘೋಷ್, ಸ್ವಪನ್ ದಾಸ್ ಗುಪ್ತಾ, ಮುಪುಜಾ ಖಾತೂನ್, ರುದ್ರನೀಲ್ ಘೋಷ್, ಅಮಿತಾಬ್ ಚಕ್ರವರ್ತಿ, ಸುಕುಮಾರ್ ರೈ, ಸಿದ್ದಾರ್ಥ್ ಟಿರ್ಕಿ, ದೇವಶ್ರೀ ಚೌಧುರಿ ಸೇರಿದಂತೆ ವಿವಿಧ ನಾಯಕರುಗಳು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದಾರೆ