Ad Widget .

ಲೋಕಸಭಾ ಚುನಾವಣೆ/ ಮಾರ್ಚ್ 30 ರಂದು ಬಿಜೆಪಿ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ ಮೋದಿ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆ ದಿನಗಣನೆ ಆರಂಭವಾಗಿದ್ದು, ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಉತ್ತರ ಪ್ರದೇಶದಲ್ಲಿ ಮಾರ್ಚ್ 30 ರಂದು ಮೀರತ್‍ನಲ್ಲಿ ಬಿಜೆಪಿ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ.

Ad Widget . Ad Widget .

80ರ ದಶಕದಲ್ಲಿ ರಮಾನಂದ್ ಸಾಗರ್ ಅವರ ರಾಮಾಯಣದಲ್ಲಿ ರಾಮನ ಪಾತ್ರವನ್ನು ನಿರ್ವಹಿಸಿದ ನಟ ಅರುಣ್ ಗೋವಿಲ್ ಅವರು ಸ್ಪರ್ಧಿಸುವ ಮೀರತ್ ನಿಂದ ಮೋದಿ ಪ್ರಚಾರ ಶುರು ಮಾಡಲಿದ್ದಾರೆ.

Ad Widget . Ad Widget .

ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ ಏಕೈಕ ರಾಜ್ಯವಾದ ಉತ್ತರ ಪ್ರದೇಶವು 370 ಸ್ಥಾನಗಳನ್ನು ಗೆಲ್ಲುವ ಬಿಜೆಪಿಯ ಯೋಜನೆಗಳಿಗೆ ನಿರ್ಣಾಯಕವಾಗಿದೆ.
ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮ ಮಂದಿರ ನಿರ್ಮಾಣ ಮತ್ತು ಉದ್ಘಾಟನೆ ಮಾಡುವ ಭರವಸೆಯನ್ನು ಈಡೇರಿಸಿದ ನಂತರ ಬಿಜೆಪಿ ಈ ಬಾರಿ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕೆಂದು ಯೋಜನೆ ಹಾಕಿಕೊಂಡಿದೆ. ಎಸ್‍ಪಿ-ಬಿಎಸ್‍ಪಿ ಮೈತ್ರಿಯ ಪ್ರಭಾವ ಕುಗ್ಗಿರುವುದು ಬಿಜೆಪಿ ನೈತಿಕ ಸ್ಥೆರ್ಯವನ್ನು ಹೆಚ್ಚಿಸಿದೆ. ಅಖಿಲೇಶ್ ಯಾದವ್ ಆಪ್ ಬಣ ಇಂಡಿಯಾ ಮೈತ್ರಿಕೂಟದಲ್ಲಿದ್ದರೆ, ಈ ಚುನಾವಣೆಯಲ್ಲಿ ಮಾಯಾವತಿ ಏಕಾಂಗಿಯಾಗಿ ಸ್ಪರ್ಧಿಸುತ್ತಿದ್ದಾರೆ.

Leave a Comment

Your email address will not be published. Required fields are marked *