Ad Widget .

ಬಳ್ಳಾರಿ :ಶ್ರೀಗಂಧದ ಮರವನ್ನು ಸಾಗಿಸುತ್ತಿದ್ದ ಕಳ್ಳರು ಪೊಲೀಸರ ವಶ

ಸಮಗ್ರ ನ್ಯೂಸ್ : ಶ್ರೀಗಂಧದ ಮರವನ್ನು ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸುತ್ತಿರುವ ಮಾಹಿತಿ ತಿಳಿದ ಪೊಲೀಸರು ಕಳ್ಳರನ್ನ ಬಂಧಿಸುವಲ್ಲಿ ಯಶಸ್ವಿಯಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಎಚ್ಎಲ್ಸಿ ಕ್ಯಾನಲ್ ಬಳಿ ನಡೆದಿದೆ.

Ad Widget . Ad Widget .

ಆರೋಪಿ ಒನ್ ಗಂಗಾನಾಯ್ಕ (ಸಂಡೂರ), ಮಾಂತೇಶ (ಕೊಟ್ಟೂರು), ಚೆನ್ನಪ್ಪ (ಬಾಗಲಕೋಟಿ), ರಾಮಣ್ಣ (ಬಾಗಲಕೋಟಿ) ಈ ನಾಲ್ವರನ್ಬಂನು ಬಂಧಿಸುವಲ್ಲಿ ಹೊಸಪೇಟೆ ಶಹರ ಠಾಣೆ ಪೋಲಿಸರು ಯಶಸ್ವಿಯಾಗಿದ್ದಾರೆ.

Ad Widget . Ad Widget .

ಗೂಡ್ಸ್ವಾಹನ ಮತ್ತು ಫಿಕಪ್ ವಾಹನದಲ್ಲಿ ಸುಮಾರು 203 ಕೆಜಿ ತೂಕದ ಶ್ರೀಗಂಧದ ಮರದ ತುಂಡುಗಳನ್ನು ಯಾವುದೇ ದಾಖಲೆಗಳಿಲ್ಲದೆ ಸಾಗಾಟ ಮಾಡುತ್ತಿದ್ದರು. ವಾಹನ ಹಿಂಬದಿಯಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿ, ಸುಮಾರು 11 ಪ್ಲಾಸ್ಟಿಕ್ ಚೀಲದಲ್ಲಿ ಮರದ ತುಂಡುಗಳನ್ನ ತುಂಬಿದ್ದರು. ಜೊತೆಗೆ ರಾತ್ರಿ ವೇಳೆ ಹೊಸಪೇಟೆಯಿಂದ ಸಂಡೂರು ಎಚ್ಎಲ್ಸಿ ಕ್ಯಾನಲ್ ಮಾರ್ಗವಾಗಿ ಬಳ್ಳಾರಿಗೆ ಸಾಗಾಟ ಮಾಡುತ್ತಿದ್ದರು.

ಆದರೆ, ಹೊಸಪೇಟೆ ಪಟ್ಟಣ ಠಾಣೆ ಪೋಲಿಸರು ಖಚಿತ ಮಾಹಿತಿ ಮೇರೆಗೆ ಎಸ್ಪಿ ಶ್ರೀಹರಿಬಾಬು ಮಾರ್ಗದರ್ಶನದಲ್ಲಿ ಪಿಐ ಮತ್ತು ಪಿಎಸ್ಐ ನೇತೃತ್ವದಲ್ಲಿ ದಾಳಿ ಮಾಡಿ ಅಂದಾಜು 203 ಕೆಜಿ ತೂಕದ 30 ಲಕ್ಷ 45 ಸಾವಿರ ರೂ ಬೆಲೆ ಬಾಳು ಶ್ರೀಗಂಧದ ಮರದ ತುಂಡುಗಳು ಹಾಗೂ ಎರಡು ವಾಹನಗಳನ್ನ ಜಪ್ತಿ ಮಾಡಿದ್ದಾರೆ.

Leave a Comment

Your email address will not be published. Required fields are marked *