ಸಮಗ್ರ ನ್ಯೂಸ್: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಕ್ಸಲ್ ಚಟುವಟಿಕೆ ಬಗ್ಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ನಕ್ಸಲ್ ಚಟುವಟಿಕೆ ಬಗ್ಗೆ ಜಿಲ್ಲಾಧಿಕಾರಿ ಮತ್ತು ಹಿರಿಯ ಅಧಿಕಾರಿಗಳ ಬಳಿ ಚರ್ಚೆ ನಡೆಸುತ್ತೇನೆ ಎಂದರು. ಇನ್ನು ಚುನಾವಣಾ ಸಂದರ್ಭದಲ್ಲಿ ಕೃಷಿಕರ ಕೋವಿ ಠೇವಣಿ ಇಡುವ ವಿಚಾರ ವ್ಯಕ್ತವಾಗುತ್ತಿರುವ ವಿರೋಧಕ್ಕೆ ಪ್ರತಿಕ್ರಿಯಿಸಿದ ಅವರು ಇದು ಹಿಂದಿನಿಂದಲೇ ಬಂದ ಸಂಪ್ರದಾಯ, ಚುನಾವಣಾ ಇಲಾಖೆಯ ಆದೇಶದ ಮೇರೆಗೆ ಈ ಕ್ರಮ ಜರುಗಿಸಲಾಗುತ್ತಿದೆ. ಕಾಡುಪ್ರಾಣಿಗಳ ಸಮಸ್ಯೆಯಿರುವ ಕೃಷಿಕರಿಗೆ ಕೋವಿ ಠೇವಣಿ ಇಡುವ ಪ್ರಕ್ರಿಯಿಯಿಂದ ವಿನಾಯತಿ ನೀಡಲು ಪ್ರಯತ್ನಿಸಲಾಗುವುದು, ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಈ ವೇಳೆ ಮಾತನಾಡಿದ ಅವರು ಯಾವುದೇ ಶುಭ ಕೆಲಸ, ಹೋರಾಟ ಮಾಡುವ ಮೊದಲು ಭಗವಂತನ ದರ್ಶನ ಮಾಡುತ್ತೇನೆ. ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಮಾಡಿದ್ದೇನೆ. ಆಗ ಹೆಚ್ಚಿನ ಸಂಖ್ಯೆಯ ಸೀಟುಗಳನ್ನು ಗೆಲ್ಲುವ ಮೂಲಕ ಗೆಲುವು ಸಾಧಿಸಿದ್ದೇನೆ ಎಂದರು. ಈಗಾಗಲೇ ಧರ್ಮಸ್ಥಳ ಭೇಟಿ ಮುಗಿಸಿದ್ದು, ಶೃಂಗೇರಿ, ಕೊಲ್ಲೂರು, ಗೌರಿಗದ್ದೆ ಭೇಟಿ ಮಾಡಿ ಪ್ರಾರ್ಥನೆ ನಡೆಸುವೆ ಎಂದರು.