ಕಾಸರಗೋಡು: ಮನೆಗೆ ನುಗ್ಗಿ ಚಿನ್ನಾಭರಣ, ನಗದು ಕಳವು

ಸಮಗ್ರ ನ್ಯೂಸ್‌ : ಮನೆಯ ಬಾಗಿಲು ಮುರಿದು ಕಳ್ಳರು ಚಿನ್ನಾಭರಣ ಹಾಗೂ ನಗದನ್ನು ಕಳವು ಮಾಡಿದ ಘಟನೆ ಕುಂಬಳೆ ಶಾಂತಿಪಳ್ಳಯ ಬದ್ರಿಯಾ ನಗರದ ಝುಬೈರ್ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ.

Ad Widget ... ..

ಮನೆಯವರು ಹೊರಗಡೆ ತೆರಳಿದ್ದ ಸಂದರ್ಭದಲ್ಲಿ ಮನೆಯ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಕಪಾಟಿನಲ್ಲಿರಿಸಲಾಗಿದ್ದ ಪವನ್ ಚಿನ್ನಾಭರಣ ಹಾಗೂ ನಗದನ್ನು ಕಳವು ಮಾಡಲಾಗಿದೆ. ಮನೆಯವರು ಮರಳಿ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.

Ad Widget

ಮನೆಯ ಚಲನವಲನ ಅರಿತವರು ಈ ಕೃತ್ಯ ನಡೆಸಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದು, ಪ್ರಕರಣ ಕುಂಬಳೆ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

Leave a Comment

Your email address will not be published. Required fields are marked *