Ad Widget .

ಭ್ರಷ್ಟಾಚಾರಿಗಳನ್ನು ಶುದ್ಧಹಸ್ತ ಮಾಡುವ ಮಾಂತ್ರಿಕ ಪೆಟ್ಟಿಗೆ ಮೋದಿಯಲ್ಲಿದೆ: ದಿನೇಶ್ ಗುಂಡೂರಾವ್

ಸಮಗ್ರ ನ್ಯೂಸ್ : ಭ್ರಷ್ಟಾಚಾರಿಗಳನೆಲ್ಲಾ ಶುದ್ಧಹಸ್ತ ಮಾಡುವ ಯಾವ ಮಾಂತ್ರಿಕ ಪೆಟ್ಟಿಗೆ ಮೋದಿ ಬಳಿ ಇದೆ. ಇದಕ್ಕೆ ಉತ್ತರ ಕೊಡುತ್ತೀರಾ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

Ad Widget . Ad Widget .

ಎಕ್ಸ್ ನಲ್ಲಿ ಸರಣಿ ಪೋಸ್ಟ್ ಹಾಕಿರುವ ಅವರು, ಮೋದಿಯವರೆ, ಅಜಿತ್ ಪವಾರ್, ಮುಕುಲ್ ರಾಯ್, ನವೀನ್ ಜಿಂದಾಲ್, ತಪಸ್ ರಾಯ್, ಪೆಮಾ ಖಂಡ್ ಇವರ ಮೇಲೆಲ್ಲಾ ಭ್ರಷ್ಟಾಚಾರದ ಆರೋಪವಿದೆ. ಇವರೆಲ್ಲಾ ಈಗ ನಿಮ್ಮ ಸಂಬಂಧ ಬೆಳೆಸಿದ್ದಾರೆ. ಇಲ್ಲಿ ಕೆಲವರಿಗೆ ಉನ್ನತ ಹುದ್ದೆ ಸಿಕ್ಕಿದೆ. ನಿಮ್ಮ ಪಕ್ಷದ ಸಖ್ಯ ಬೆಳೆಸುವ ಮೊದಲು ಇವರೆನ್ನೆಲ್ಲಾ ಬಂಧಿಸಿ ಜೈಲಿಗಟ್ಟಲು ಗೆಜ್ಜೆ ಕಟ್ಟಿ ಕುಣಿಯುತ್ತಿದ್ದ ಸಿಬಿಐ, ಐಟಿ ಮತ್ತು ಇಡಿ ಈಗ ಶೋಚನೀಯವಾಗಿ ಸೋತು ತಣ್ಣಗೆ ಮಲಗಿವೆ ಎಂದು ಹೇಳಿದ್ದಾರೆ.

Ad Widget . Ad Widget .

ಮೋದಿಯವರೆ, ಭ್ರಷ್ಟಾಚಾರದ ಆರೋಪ ಹೊತ್ತಿದ್ದ ಮಹಾರಾಷ್ಟ್ರದ ನಾರಾಯಣ ರಾಣೆಯವರನ್ನು ಇಡಿ ಬಂಧಿಸುವ ಹಂತಕ್ಕೂ ಹೋಗಿತ್ತು. ಆದರೆ ರಾಣೆ ನಿಮ್ಮ ಪಕ್ಷ ಸೇರಿದರು ಜೊತೆಗೆ ಕೇಂದ್ರ ಮಂತ್ರಿಯೂ ಆದರು. ವಿಸ್ಮಯವೆಂದರೆ ರಾಣೆ ನಿಮ್ಮ ಪಕ್ಷ ಸೇರಿದ ತಕ್ಷಣವೇ ಈಡಿ ಅವರ ವಿರುದ್ಧದ ಕೇಸ್ ಫೈಲ್ ಮುಚ್ಚಿಟ್ಟು ತೆಪ್ಪಗಾಯಿತು.ನಾರದಾ ಚಿಟ್ ಫಂಡ್ ಹಗರಣ ಸಹಿತ ಹಲವು ಹಗರಣಗಳ ಆರೋಪಿಯಾಗಿರುವ ಸುವೇಂದು ಅಧಿಕಾರಿ ಟಿಎಂಸಿ ಮುಖಂಡರಾಗಿದ್ದರು. ತನಿಖಾ ಸಂಸ್ಥೆಗಳು ಅವರ ಬೆನ್ನು ಬೀಳುತ್ತಿದ್ದಂತೆ ನಿಮ್ಮ ಪಕ್ಷ ಸೇರಿದರು ಜೊತೆಗೆ ಪಶ್ಚಿಮ ಬಂಗಾಳದ ವಿಪಕ್ಷ ನಾಯಕರಾದರು. ಏನಿದರ ರಹಸ್ಯ ಮೋದಿಯವರೆ?’ ಎಂದರು.

Leave a Comment

Your email address will not be published. Required fields are marked *