Ad Widget .

ಬ್ಯಾಂಕ್ ಕೆಲಸ ಬಿಟ್ಟು ಲ್ಯಾಪ್‌ಟಾಪ್‌ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಲೇಡಿ ಅರೆಸ್ಟ್

ಸಮಗ್ರ ನ್ಯೂಸ್: ಹೋಟೆಲ್, ಪಿಜಿಗಳನ್ನೇ ಟಾರ್ಗೆಟ್ ಮಾಡಿ ಲ್ಯಾಪ್‌ಟಾಪ್‌ಗಳನ್ನು ಕದಿಯುತ್ತಿದ್ದ ಜೆಸ್ಸಿ ಅಗರ್ ವಾಲ್ ಎಂಬಾಕೆಯನ್ನು ಎಚ್‌ಎಎಲ್ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

Ad Widget . Ad Widget .

ಈಕೆ ಹೋಟೆಲ್, ಪಿಜಿಗಳಲ್ಲಿ ರೂಂ ಪಡೆದು ಕಳ್ಳತನಕ್ಕೆ ಸಂಚು ರೂಪಿಸುತ್ತಿದ್ದಳು. ಹೋಟೆಲ್‌ ಹಾಗೂ ಪಿಜಿಯಲ್ಲಿರವವರು ಟಿಫಿನ್, ಊಟಕ್ಕೆ ತೆರಳಿದ ಸಂದರ್ಭದಲ್ಲಿ ಕ್ಷಣಾರ್ಧದಲ್ಲಿ ಲ್ಯಾಪ್‌ಟಾಪ್ ಕದ್ದು ಎಸ್ಕೇಪ್ ಆಗುತ್ತಿದ್ದಳು.

Ad Widget . Ad Widget .

ಇನ್ನೂ ಈಕೆ ಐಸಿಐಸಿಐ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಕೆಲಸ ಬಿಟ್ಟು ಕೋರಮಂಗಲ, ಇಂದಿರಾನಗರ, ಎಚ್‌ಎಎಲ್ ಸುತ್ತಮುತ್ತ ಲ್ಯಾಪ್‌ಟಾಪ್‌ಗಳನ್ನು ಕಳ್ಳತನ ಮಾಡಿದ್ದಳು. ಸದ್ಯ ಲ್ಯಾಪ್‌ಟಾಪ್ ಕಳ್ಳಿಯನ್ನು ಪೊಲೀಸರು ಬಂಧಿಸಿ 10 ಲಕ್ಷ ಮೌಲ್ಯದ 24 ಲ್ಯಾಪ್‌ಟಾಪ್‌ಗಳನ್ನು ಸೀಜ್ ಮಾಡಲಾಗಿದೆ.

Leave a Comment

Your email address will not be published. Required fields are marked *