Ad Widget .

ವಿದೇಶದಲ್ಲೂ ಅವರಿಸಿದೆ ಲೋಕಸಭಾ ಚುನಾವಣೆಯ ಗಾಳಿ/ ಸಾಗರದಾಚೆಗೂ ವಿಸ್ತರಿಸಿದೆ ಮೋದಿ ಹವಾ

ಸಮಗ್ರ ನ್ಯೂಸ್: ಭಾರತದ ಲೋಕಸಭಾ ಚುನಾವಣೆಯ ಗಾಳಿ ವಿದೇಶದಲ್ಲೂ ಪಸರಿಸಿದ್ದು. ಅಲ್ಲಿ ಕೂಡ ವಿವಿಧ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ಮೋದಿಗೆ ವಿದೇಶಗಳಲ್ಲಿರುವ ಭಾರತೀಯ ಸಮುದಾಯಗಳ ಜನರು ಸತತವಾಗಿ ಬೆಂಬಲ ಕೊಡುತ್ತಾ ಬಂದಿದ್ದು, ಈ ಬಾರಿ ವಿದೇಶಗಳಲ್ಲೂ ಮೋದಿ ಪರ ಕಲರವ ಕೇಳಿಬರತೊಡಗಿದೆ.

Ad Widget . Ad Widget .

ಆಸ್ಟ್ರೇಲಿಯಾದ ‘ಓವರ್‍ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ’ ಎನ್ನುವ ಸಂಘಟನೆಯು ಮೋದಿ ಫಾರ್ 2024 ಎನ್ನುವ ಅಭಿಯಾನ ನಡೆಸುತ್ತಿದೆ. ಏಳು ಪ್ರಮುಖ ನಗರಗಳಲ್ಲಿ ಈ ಆಂದೋಲನ ನಡೆಯಲಿದ್ದು, ಪಿಎಂ ಮೋದಿ ನೇತೃತ್ವದ ಬಿಜೆಪಿ ಮತ್ತು ಎನ್‍ಡಿಎ ಮೈತ್ರಿಕೂಟಕ್ಕೆ ವಿದೇಶಗಳಲ್ಲಿ ಬೆಂಬಲ ತೋರಿಸಲು ಈ ಪ್ರಚಾರ ನಡೆಯುತ್ತಿದೆ. ಸಿಡ್ನಿ ಹಾರ್ಬರ್ ಬ್ರಿಡ್ಜ್, ಮೆಲ್ಲೋರ್ನ್ ಕ್ರಿಕೆಟ್ ಮೈದಾನ, ಪರ್ತ್ ಆಪ್ಲಸ್ ಸ್ಟೇಡಿಯಂ, ಬ್ರಿಸ್ಟೇನ್ ಗಾಬ್ಬಾ ಸ್ಟೇಡಿಯಂ, ಗೋಲ್ಡ್ ಕೋಸ್ಟ್‍ನ ಸರ್ಫರ್ಸ್ ಪ್ಯಾರಡೈಸ್, ಕ್ಯಾನ್‍ಬೆರಾದ ಮೌಂಟ್ ಏನ್‍ಸ್ಟೀ, ಅಡಿಲೇಡ್‍ನ ನೇವಲ್ ಮೆಮೋರಿಯಲ್ ಗಾರ್ಡನ್‍ನಲ್ಲಿ ದೊಡ್ಡ ಪ್ರಚಾರ ಕಾರ್ಯಕ್ರಮ ಆರಂಭಿಸಲಾಗಿದೆ.

Ad Widget . Ad Widget .

ಇತ್ತೀಚೆಗೆ ಬ್ರಿಟನ್ ದೇಶದಲ್ಲಿರುವ ಓವರ್‍ಸ್ ಫ್ರೆಂಡ್ಸ್ ಆಫ್ ಬಿಜೆಪಿ ಸಂಘಟನೆ ನರೇಂದ್ರ ಮೋದಿಗೆ ಚುನಾವಣೆಯಲ್ಲಿ ಬೆಂಬಲವಾಗಿ ಲಂಡನ್‍ನಲ್ಲಿ ಕಾರ್ ರ್ಯಾಲಿ ನಡೆಸಿತ್ತು. 250 ಕಾರುಗಳು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಇಲ್ಲಿ ಜನರು ಭಾರತದ ರಾಷ್ಟ್ರಧ್ವಜ ಮತ್ತು ಬಿಜೆಪಿಯ ಧ್ವಜಗಳನ್ನು ಹಿಡಿದುಕೊಂಡಿದ್ದರು.

Leave a Comment

Your email address will not be published. Required fields are marked *