Ad Widget .

ಶ್ರೀ ಲಕ್ಷ್ಮೀನರಸಿಂಹ ರಥೋತ್ಸವದ ವೇಳೆ ನೂಕುನುಗ್ಗಲು| ತಪ್ಪಿದ ಭಾರೀ ಅನಾಹುತ

ಸಮಗ್ರ ನ್ಯೂಸ್: ಹೊಳೆನರಸೀಪುರದ ಶ್ರೀ ಲಕ್ಷ್ಮೀನರಸಿಂಹ ರಥೋತ್ಸವದ ವೇಳೆ ನೂಕುನುಗ್ಗಲು ಉಂಟಾಗಿದ್ದು ಹತ್ತಾರು ಮಂದಿ ಕೆಳಗೆ ಬಿದ್ದ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದಿದೆ.

Ad Widget . Ad Widget .

ರಥದ ಹಗ್ಗ ಎಳೆಯುವಾಗ ಹತ್ತಾರು ಮಂದಿ ಆಯತಪ್ಪಿ ಬಿದ್ದಿದ್ದು ಕಾಲ್ತುಳಿತಕ್ಕೊಳಗಾಗಿದ್ದಾರೆ. ಗಾಬರಿಯಿಂದ ಜನರು ಒಬ್ಬರ ಮೇಲೆ ಒಬ್ಬರು ತುಳಿದುಕೊಂಡು ಓಡಿದ್ದಾರೆ. ಕೂಡಲೇ ಕೆಳಗೆ ಬಿದ್ದವರನ್ನು ಮೇಲೆತ್ತಲಾಗಿದ್ದು ಇದರಿಂದ ರಥೋತ್ಸವದ ವೇಳೆ ಭಾರಿ ಅನಾಹುತ ತಪ್ಪಿದೆ. ಇನ್ನು ಇದೇ ರಥೋತ್ಸವದಲ್ಲಿ ಭಾಗಿಯಾಗಿದ್ದ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಸೊಸೆ ಭವಾನಿರೇವಣ್ಣ ಅವರಿಗೆ ರಥಕ್ಕೆ ಎಸೆಯಲಾದ ಬಾಳೆಹಣ್ಣು ರಭಸವಾಗಿ ಬಂದು ತಗುಲಿದೆ.

Ad Widget . Ad Widget .

Leave a Comment

Your email address will not be published. Required fields are marked *