ಕೇರಳ: ರಥದ ಚಕ್ರಕ್ಕೆ ಸಿಲುಕಿ ಐದು ವರ್ಷದ ಮಗು ಸಾವು

ಸಮಗ್ರ ನ್ಯೂಸ್: ವಾರ್ಷಿಕ ಉತ್ಸವದ ವೇಳೆ ಕೊಲ್ಲಂ ಸಮೀಪದ ಕೊಟ್ಟನ್‌ಕುಳಂಗರ ದೇವಸ್ಥಾನದಲ್ಲಿ ಐದು ವರ್ಷದ ಮಗುವೊಂದು ರಥದ ಚಕ್ರದಡಿ ಸಿಲುಕಿ ಮೃತಪಟ್ಟ ಘಟನೆ ನಡೆದಿದೆ.

Ad Widget ... ..

ಭಕ್ತರು ಎಳೆಯುವ ರಥದ ದೊಡ್ಡ ಚಕ್ರಗಳ ಅಡಿಯಲ್ಲಿ ಆಕಸ್ಮಿಕವಾಗಿ ಮಗು ಬಿದ್ದು ಸಾವನ್ನಪ್ಪಿದೆ. ಚವರ ನಿವಾಸಿ ದಂಪತಿಯ ಪುತ್ರಿ ಕ್ಷೇತ್ರ ಸಾವನ್ನಪ್ಪಿದ ಮಗು.

Ad Widget

ಮಗುವನ್ನು ಪೋಷಕರು ಪೊಲೀಸರ ಸಹಾಯದೊಂದಿಗೆ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದದರೂ, ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *