ಕಡಬ: ನದಿಗೆ ಹಾರಿದ ಯುವತಿ| ಪ್ರಾಣ ರಕ್ಷಿಸಿದ ಆಟೋ ಚಾಲಕ!

ಸಮಗ್ರ ನ್ಯೂಸ್: ನದಿಗೆ ಹಾರಿದ ಯುವತಿಯೋರ್ವಳನ್ನು ಆಟೋ ಚಾಲಕ ರಕ್ಷಿಸಿದ ಘಟನೆ ಕಡಬ ಆಲಂಕಾರು ಸಮೀಪದ ಶಾಂತಿಮೊಗರಿನಲ್ಲಿ ನಡೆದಿದೆ.

Ad Widget ... ..

ಶಾಂತಿಮೊಗರು ಸೇತುವೆಯ ಕೆಳಭಾಗದಲ್ಲಿ ಹರಿಯುವ ಕುಮಾರಧಾರ ನದಿಗೆ ಯುವತಿಯು ತನ್ನ ಸ್ಕೂಟಿ ನಿಲ್ಲಿಸಿ ಹಾರಿದ್ದಾಳೆ. ಈ ವೇಳೆ ಆಟೋ ಚಾಲಕನ ಸಮಯ ಪ್ರಜ್ಞೆಯಿಂದ ಆಕೆ ಬದುಕುಳಿದಿರುವುದಾಗಿ ವರದಿಯಾಗಿದೆ. ಇನ್ನು ಯುವತಿ ಕಡಬ ಸಮುದಾಯ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ತಿಳಿದುಬಂದಿದೆ.

Ad Widget

ಯುವತಿಯನ್ನು ಪೊಲೀಸರು ಕಡಬ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ. ಯಾವ ಕಾರಣಕ್ಕಾಗಿ ಯುವತಿ ನದಿಗೆ ಹಾರಿರಬಹುದೆಂಬುದು ಪೊಲೀಸರ ತನಿಖೆ ಮೂಲಕ ತಿಳಿದು ಬರಬೇಕಿದೆ.

Leave a Comment

Your email address will not be published. Required fields are marked *