ರಾಮಲಲ್ಲಾನ ಮತ್ತೊಂದು ವಿಗ್ರಹ ಕೆತ್ತಿದ ಅರುಣ್‌ ಯೋಗಿರಾಜ್‌

ಸಮಗ್ರ ನ್ಯೂಸ್‌ : ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನವಾಗಿರುವ ಸುಂದರ ರಾಮಲಲ್ಲಾ ವಿಗ್ರಹವನ್ನು ಕೆತ್ತನೆ ಮಾಡಿ ವಿಶ್ವವಿಖ್ಯಾತಿ ಗಳಿಸಿದ್ದ ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ರವರು ಗರ್ಭಗುಡಿಯಲ್ಲಿರುವ ರಾಮಲಲ್ಲಾ ವಿಗ್ರಹದಂತೆಯೇ ಮತ್ತೊಂದು ಪುಟ್ಟ ವಿಗ್ರಹಕ್ಕೆ ಶಿಲ್ಪಿ ರೂಪ ನೀಡಿದ್ದಾರೆ.

Ad Widget ... ..

ರಾಮಲಲ್ಲಾನ ರೂಪವನ್ನು ಕೆತ್ತನೆ ಮಾಡಿ ಭಕ್ತರ ಮನಗೆದ್ದಿದ್ದು, ರಾಮಲಲ್ಲಾನ ಮತ್ತೊಂದು ಪುಟ್ಟ ವಿಗ್ರಹ ಹಿಡಿದುಕೊಂಡಿರುವ ಫೋಟೊ ಈಗ ಎಲ್ಲೆಡೆ ವೈರಲ್‌ ಆಗಿದೆ.

Ad Widget

ಇದಕ್ಕೂ ಮೊದಲು ಶಿಲ್ಪಿ ಯೋಗಿರಾಜ್‌, ‘ಪ್ರತಿಮೆಯ ಕಣ್ಣುಗಳನ್ನು ಕೆತ್ತಲು ಬಳಸಿದ ವಿಶೇಷ ಸಾಧನಗಳ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ. ನಾನು ಅಯೋಧ್ಯೆಯ ರಾಮಲಲ್ಲಾನ ದಿವ್ಯ ಕಣ್ಣುಗಳನ್ನು ಕೆತ್ತಲು ಬಳಸಿದ ಚಿನ್ನದ ಉಳಿ ಮತ್ತು ಬೆಳ್ಳಿಯ ಸುತ್ತಿಗೆ ಇದು’ ಎಂದು ಫೋಟೊ ಹಂಚಿಕೊಂಡಿದ್ದರು. .

Leave a Comment

Your email address will not be published. Required fields are marked *