Ad Widget .

“ಆರ್ಟಿಕಲ್ 370” ಸಿನಿಮಾ/ ಏಪ್ರಿಲ್ 19ರಂದು ಒಟಿಟಿಯಲ್ಲಿ ರಿಲೀಸ್

ಸಮಗ್ರ ನ್ಯೂಸ್”: ಕೇಂದ್ರ ಸರ್ಕಾರವು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿದ್ದ ಘಟನೆಗಳನ್ನು ಆಧರಿಸಿ ಮೂಡಿ ಬಂದ ‘ಆರ್ಟಿಕಲ್ 370’ ಸಿನಿಮಾ ಇದೀಗ ಒಟಿಟಿಯಲ್ಲಿ ಅಬ್ಬರಿಸಲು ‘ಆರ್ಟಿಕಲ್ 370’ ಸಿದ್ಧವಾಗಿದೆ. ನಟಿ ಯಾಮಿ ಗೌತಮ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಚಿತ್ರಮಂದಿರದಲ್ಲಿ ಈ ಸಿನಿಮಾಗೆ ಒಳ್ಳೆಯ ಕಲೆಕ್ಷನ್ ಆಗಿದೆ.

Ad Widget . Ad Widget .

ಆರಂಭದಲ್ಲೇ ‘ಆರ್ಟಿಕಲ್ 370’ ಸಿನಿಮಾಗೆ ಸಾಧಾರಣ ಕಲೆಕ್ಷನ್ ಆಯಿತು. ನಂತರದ ದಿನಗಳಲ್ಲಿ ಅದೇ ಸ್ಥಿತಿ ಮುಂದುವರಿಯಿತು. ಅಚ್ಚರಿ ಏನೆಂದರೆ, ಸತತ ಒಂದು ತಿಂಗಳ ಪ್ರದರ್ಶನದ ಬಳಿಕ ಭಾರತದ ಬಾಕ್ಸ್ ಆಫೀಸ್‍ನಲ್ಲಿ ಈ ಸಿನಿಮಾದ ಒಟ್ಟು ಕಲೆಕ್ಷನ್ 78.33 ಕೋಟಿ ರೂಪಾಯಿ ಆಗಿದೆ.

Ad Widget . Ad Widget .

ಇನ್ನು ವರದಿಗಳ ಪ್ರಕಾರ, ಏಪ್ರಿಲ್ 19ರಂದು ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ‘ಜಿಯೋ ಸಿನಿಮಾ’ ಮೂಲಕ ವೀಕ್ಷಣೆಗೆ ಲಭ್ಯವಾಗಲಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಈ ಸಿನಿಮಾದಲ್ಲಿ ಯಾಮಿ ಗೌತಮ್ ಅವರ ಜೊತೆ ಪ್ರಿಯಾಮಣಿ ಕೂಡ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ನರೇಂದ್ರ ಮೋದಿ ಪಾತ್ರವನ್ನು ಹಿರಿಯ ನಟ ಅರುಣ್ ಗೋವಿಲ್ ಅವರು ನಿಭಾಯಿಸಿದ್ದಾರೆ.

Leave a Comment

Your email address will not be published. Required fields are marked *