Ad Widget .

ಭಾರತದ ಜೊತೆ ಮತ್ತೆ ವ್ಯಾಪಾರ ಸಂಬಂಧ ಬೆಳೆಸಲು ಒಲವು ತೋರಿದ ಪಾಕಿಸ್ತಾನ

ಸಮಗ್ರ ನ್ಯೂಸ್: ಭಾರತದೊಂದಿಗೆ ಕಳೆದ ಐದು ವರ್ಷದಿಂದ ಸ್ಥಗಿತಗೊಂಡಿರುವ ವ್ಯಾಪಾರ ಸಂಬಂಧವನ್ನು ಮತ್ತೀಗ ಪುನಃಸ್ಥಾಪಿಸಲು ಪಾಕಿಸ್ತಾನ ಒಲವು ತೋರುತ್ತಿರುವಂತಿದೆ. ಪಾಕಿಸ್ತಾನದಲ್ಲಿ ಚುನಾವಣೆ ಬಳಿಕ ಅಸ್ತಿತ್ವಕ್ಕೆ ಬಂದಿರುವ ಹೊಸ ಸರ್ಕಾರ ಭಾರತದ ಜೊತೆಗಿನ ರಾಜತಾಂತ್ರಿಕ ನಿಲುವನ್ನು ಬದಲಿಸುವಂತಿದೆ ಎಂಬ ವಿಚಾರವನ್ನು ವಿದೇಶಾಂಗ ಸಚಿವ ಇಶಾಕ್ ದರ್ ತಿಳಿಸಿದ್ದಾರೆ.

Ad Widget . Ad Widget .

ಲಂಡನ್ನಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಪಾಕ್ ಸಚಿವರು ಭಾರತದೊಂದಿಗೆ ತಮ್ಮ ದೇಶ ವ್ಯಾಪಾರ ಸಂಬಂಧ ಪುನಾರಂಭಿಸುವ ನಿರ್ಧಾರವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.‘ಪಾಕಿಸ್ತಾನದ ಉದ್ಯಮಿಗಳು ಭಾರತದೊಂದಿಗೆ ವ್ಯಾಪಾರ ಸಂಬಂಧ ಪುನಾರಂಭವಾಗಬೇಕೆಂದು ಬಯಸುತ್ತಿದ್ದಾರೆ. ಇದನ್ನು ಪಾಕಿಸ್ತಾನವೂ ಪರಿಗಣಿಸಲು ಸಿದ್ಧ ಇದೆ. ಭಾರತದೊಂದಿಗೆ ವ್ಯಾಪಾರ ನಡೆಸುವ ವಿಚಾರವನ್ನು ನಾವು ಗಂಭೀರವಾಗಿ ಅವಲೋಕಿಸುತ್ತೇವೆ’ ಎಂದು ಇಶಾಕ್ ದರ್ ತಿಳಿಸಿದ್ದಾರೆ.

Ad Widget . Ad Widget .

ಬೆಲ್ಜಿಯಂ ರಾಜಧಾನಿನಗರಿ ಬ್ರುಸೆಲ್ಸ್ನಲ್ಲಿ ನಡೆದ ನ್ಯೂಕ್ಲಿಯಾರ್ ಎನರ್ಜಿ ಶೃಂಗಸಭೆಯಲ್ಲಿ ಭಾಗಿಯಾಗಿ ನಂತರ ಲಂಡನ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ಆರ್ಥಿಕ ಮತ್ತು ಹಣಕಾಸು ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನಕ್ಕೆ ಈಗ ಭಾರತದೊಂದಿಗೆ ವ್ಯಾಪಾರ ಸಂಬಂಧ ಮರಳುವ ಅವಶ್ಯಕತೆಯೂ ತುಂಬಾನೇ ಇದೆ. ಭಾರತ 370ನೇ ವಿಧಿ ರದ್ದು ಮಾಡಿ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಜಮ್ಮು ಕಾಶ್ಮೀರ ಮತ್ತು ಲಡಾಖ್ ಎಂದು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಸಿತ್ತು. ಭಾರತ ಕಾಶ್ಮೀರಿಗರ ಅಭಿಪ್ರಾಯಕ್ಕೆ ವಿರುದ್ಧವಾಗಿ ಒಮ್ಮುಖ ನಿರ್ಧಾರ ತೆಗೆದುಕೊಂಡಿದೆ ಎಂದು ಆರೋಪಿಸಿ ಪಾಕಿಸ್ತಾನವು ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿದೆ. ಈ ಕ್ರಮಗಳನ್ನು ಭಾರತ ರದ್ದುಗೊಳಿಸುವವರೆಗೂ ಸಂಬಂಧ ಮರಳಿ ಸ್ಥಾಪಿಸುವುದಿಲ್ಲ ಎಂದು ಹೇಳುತ್ತಲೇ ಬಂದಿರುವ ಪಾಕಿಸ್ತಾನ ಈಗ ತನ್ನ ನಿಲುವನ್ನು ಬದಲಿಸಿಕೊಂಡಂತಿದೆ.

ಜಮ್ಮು ಕಾಶ್ಮೀರದ 370ನೇ ವಿಧಿಯನ್ನು ರದ್ದುಗಳಿಸಿದ ತನ್ನ ಕ್ರಮವನ್ನು ಭಾರತ ಬಲವಾಗಿ ಸಮರ್ಥಿಸಿಕೊಂಡಿದೆ. ಇಡೀ ಜಮ್ಮು ಕಾಶ್ಮೀರ ಮತ್ತು ಲಡಾಖ್ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂಬುದು ಭಾರತದ ಸ್ಪಷ್ಟ ನಿಲುವು. ಹಾಗೆಯೇ, ಪಾಕಿಸ್ತಾನವು ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸುವವರೆಗೂ ತಾನೂ ಕೂಡ ಯಾವ ಸಂಬಂಧಕ್ಕೆ ಆಸ್ಪದ ಕೊಡುವುದಿಲ್ಲ ಎಂಬುದು ಭಾರತದ ನಿಲುವು ಕೂಡ ಎಂದರು ಎಂಬ ಮಾಹಿತಿ ಮೂಲಗಳಂದ ತಿಳಿದು ಬಂದಿದೆ

Leave a Comment

Your email address will not be published. Required fields are marked *