Ad Widget .

ಕಡಬ:ಶಾಂತಿಮೊಗೇರು ಕಿಂಡಿ ಆಣೆಕಟ್ಟು ಬರಿದು ಆರೋಪ| ಊರವರ ಆಕ್ರೋಶಕ್ಕೆ ಜಾಗ ಖಾಲಿ ಮಾಡಿದ ಮರಳು ದಂಧೆಕೋರರು

ಸಮಗ್ರ ನ್ಯೂಸ್‌: ಕುಮಾರಧಾರ ನದಿಗೆ ಕಡಬ ತಾಲೂಕಿನ ಶಾಂತಿಮೊಗೇರು ಎಂಬಲ್ಲಿ ನಿರ್ಮಿಸಿರುವ ಬೃಹತ್ ಕಿಂಡಿ ಅಣೆಕಟ್ಟಿನಲ್ಲಿ ನೀರು ಸೋರಿಕೆಯಾಗಿ ಅಣೆಕಟ್ಟು ಬರಿದಾಗಿದೆ. ಇದಕ್ಕೆ ಮರಳು ದಂಧೆಯವರೇ ಪ್ರಮುಖ ಕಾರಣ. ತಕ್ಷಣ ಇದಕ್ಕೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ ಬೆನ್ನಿಗೆ ಮರಳು ತೆಗೆಯುತ್ತಿದ್ದವರು ತಮ್ಮ ಎಲ್ಲಾ ವಸ್ತುಗಳೊಂದಿಗೆ ಜಾಗ ಖಾಲಿ ಮಾಡಿದ ಘಟನೆ ನಡೆದಿದೆ.

Ad Widget . Ad Widget .

ಅಣೆಕಟ್ಟಿಗೆ ಅಳವಡಿಸಿದ್ದ ಹಲಗೆಯನ್ನು ರಾತೋರಾತ್ರಿ ತೆಗೆದಿರುವುದಲ್ಲದೆ, ಹಲಗೆಯೊಂದರ ಅಡಿಯಲ್ಲಿ ಕಲ್ಲು ಇಡಲಾಗಿದೆ. ಅಲ್ಲದೆ ಕೆಲವು ಹಲಗೆಯ ಅಡಿಯಲ್ಲಿದ್ದ ರಬ್ಬರ್ ವಾಷರನ್ನು ತೆಗೆಯಲಾಗಿದೆ. ಇದು ಅಕ್ರಮ ಮರಳು ದಂಧೆಕೋರರ ಕೃತ್ಯ ವಾಗಿದೆ ಎಂದು ಊರವರು ಆರೋಪಿಸಿದ್ದರು.

Ad Widget . Ad Widget .

ಮಾಧ್ಯಮ ವರದಿ ಬೆನ್ನಲ್ಲೇ ಹಲಗೆ ಜೋಡಣೆಯಂತೂ ಮಾಡಲಾಗಿತ್ತು. ಬರಪೂರ ನೀರು ಶೇಖರಣೆಯಾಗಿತ್ತು. ಸಂಬಂಧಪಟ್ಟ ಇಲಾಖೆಯವರು ಹೇಳುವ ಪ್ರಕಾರ ಅಣೆಕಟ್ಟೆಯಿಂದ ಮೇಲೆ ಸುಮಾರು 12 ಕಿಲೋ ಮೀಟ‌ರ್ ದೂರದವರೆಗೆ ನದಿಯಲ್ಲಿ ನೀರು ಶೇಖರಣೆಯಾಗಿದೆ. ಏನಿಲ್ಲವೆಂದರೂ ನದಿಯ ಮೇಲಿನ ಭಾಗದ ಏಳೆಂಟು ಕಿಲೋ ಮೀಟರ್ ದೂರದವರೆಗೆ ಸಮೃದ್ದವಾದ ಕಾಣುತ್ತಿತ್ತು. ನೀರು ಶೇಖರಣೆ ಆದರೆ ನಾಲೈದು ದಿನಗಳಲ್ಲಿ ನೀರಿನ ಪ್ರಮಾಣ ಕಡಿಮೆ ಯಾಗಿ ಹಲವು ಅನುಮಾನಗಳಿಗೆ ಕಾರಣವಾಗಿತ್ತು.

ಕೃಷಿಕರ ಕೊಳವೆ ಬಾವಿ, ಕುಡಿಯುವ ನೀರಿನ ಬಾವಿ ಹಾಗೂ ಕೆರೆಗಳಲ್ಲಿ ಬಿರು ಬೇಸಿಗೆಯಲ್ಲೂ ಸಾಕಷ್ಟು ನೀರು ತುಂಬಿ ಕೃಷಿ ಭೂಮಿಗೆ ನೀರುಣಿಸಲು ಕೃಷಿಕರಿಗೆ ಜಲನಿಧಿ ಒಲಿದಿತ್ತು. ಇದರಿಂದ ಕೃಷಿಕರು ತೋಟಗಳಿಗೆ ಬರಪೂರ ನೀರುಣಿಸುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ನೀರು ಖಾಲಿಯಾಗಿದೆ. ಅಣೆಕಟ್ಟಿಗೆ ಜೋಡಣೆ ಮಾಡಿರುವ ಅಣೆಕಟ್ಟಿನ ನೀರು ಸೋರಿಕೆ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.ಹಲಗೆಯ ವಾಷರ್‌ಗಳನ್ನು ತೆಗೆಯಲಾಗುತ್ತಿದೆ. ಕೆಲವೆಡೆ ಹಲಗೆಯ ಕೆಳಗೆ ಕಲ್ಲುಗಳನ್ನು ಇಟ್ಟು ನೀರು ಹರಿದುಹೋಗುವಂತೆ ಮಾಡಲಾಗಿದೆ. ನೀರು ಖಾಲಿಯಾಗಿರುವುದರಿಂದ ಕೃಷಿ ಪಂಪುಗಳಿಗೆ ನೀರು ಸಾಕಾಗದೆ ಪಂಪುಗಳು ಸುಟ್ಟು ಹೋಗಿವೆ.

ಒಂದಿಬ್ಬರ ಸ್ವಾರ್ಥದ ಪರಿಣಾಮ ಈ ಅವ್ಯಸ್ಥೆಯಾಗಿದೆ. ಮರಳು ದಂಧೆಕೋರರು ಇದರ ಹಿಂದೆ ಇದ್ದಾರೆ ಎಂದು ಊರವರು ಆರೋಪಿಸಿದ್ದರು.ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಈ ಎಲ್ಲಾ ಬೆಳವಣಿಗೆಯ ನಡುವೆ ಆ ಸ್ಥಳದಲ್ಲಿ ಮರಳು ತೆಗೆಯುತ್ತಿದ್ದವರು ತಮ್ಮ ಎಲ್ಲಾ ಮೆಷಿನ್ ಗಳನ್ನು ಲಾರಿಯಲ್ಲಿ ತುಂಬಿಸಿಕೊಂಡು ಸ್ಥಳದಿಂದ ತೆರಳಿದ್ದಾರೆ ಎಂದು ಊರವರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *