ಸಮಗ್ರ ನ್ಯೂಸ್: ಬೆಳಗಾವಿಯ ಡಾ. ಸರಜೂ ಕಾಟ್ಕರ್ ರವರ ರಚನೆಯ ಅಂಬೆ ಎಂಬ ಕನ್ನಡ ನಾಟಕ ಮುಂಬೈನಲ್ಲಿ ಪ್ರದರ್ಶನ ಕಾಣಲಿದೆ. ‘ನಮ ತುಳುವೆರ್’ ಕಲಾ ಸಂಘಟನೆ (ರಿ.) ನಾಟ್ಕದೂರು, ಮುದ್ರಾಡಿಯ ತಂಡ ಪ್ರಸ್ತುತ ಪಡಿಸಿದ್ದು ಈ ನಾಟಕವನ್ನು ನಿನಾಸಂ ಪದವೀದರ ಮತ್ತು ಕರ್ನಾಟಕದ ಅನೇಕ ರಂಗ ತಂಡಗಳಿಗೆ ನಾಟಕ ನಿರ್ದೇಶಿಸಿದ ನಾಡಿನ ಪ್ರಮುಖ ಯುವ ನಿರ್ದೇಶಕರಲ್ಲಿ ಒಬ್ಬರಾದ ಸಾಲಿಯಾನ್ ಉಮೇಶ್ ನಾರಾಯಣರವರು ನಿರ್ದೇಶಿಸಿದ್ದಾರೆ. ತಂಡದ ಸಂಚಾಲಕರಾಗಿ ಮತ್ತು ನಾಟ್ಕ ಮುದ್ರಾಡಿಯ ಅಧ್ಯಕ್ಷರೂ ಆಗಿರುವ ಸುಕುಮಾರ್ ಮೋಹನ್ ರವರು ಈ ತಂಡ ರಚಿಸಿ ನಟಿಸಿದ್ದಾರೆ.
ಎಂಟು ಜನ ಕಲಾವಿದರನ್ನು ಒಳಗೊಂಡ ತಂಡವೂ ಸಂಗೀತ ಮತ್ತು ಬೆಳಕಿನ ನಿರ್ವಹಣೆ ವಸ್ತ್ರಾಲಂಕಾರ ತಂಡದ ಕಲಾವಿದರೇ ನಿರ್ವಹಿಸುತ್ತಾರೆ. ಮುಂಬೈಯ ಮೀರಾರೋಡಿನಲ್ಲಿರುವ ಸೈಂಟ್ ಥೋಮಸ್ ಚರ್ಚ್ ಹಾಲ್ ನಲ್ಲಿ ಮಾರ್ಚ್ 26 ರ ಸಂಜೆ 6 ಕ್ಕೆ ಮತ್ತು ಕರ್ನಾಟಕ ಸಂಘ ಪನ್ವೆಲ್ ನಲ್ಲಿ ಮಾರ್ಚ್ 29 ರಂದು ಸಂಜೆ 7 ಕ್ಕೆ ಹಾಗೂ ಮಹಾರಾಷ್ಟ್ರದ ಥಾಣೆಯಲ್ಲಿರುವ ರಾಮ್ ಗಣೇಶ್ ಗಡ್ಕರಿ ಥಿಯೇಟರ್ ನಲ್ಲಿ ಮಾರ್ಚ್ 27 ರ ಸಂಜೆ 4 ಗಂಟೆಗೆ ಪ್ರದರ್ಶನ ಕಾಣಲಿದೆ.
ಕಲಾವಿದರಾಗಿ ವಾಣಿ ಸುಕುಮಾರ್ , ಸುಕುಮಾರ್ ಮೋಹನ್ ,ಉಮೇಶ್ ಕಲ್ಮಾಡಿ, ಸುಗಂಧಿ ಉಮೇಶ್ ಕಲ್ಮಾಡಿ, ಸಂದೇಶ್ ಕೋಟ್ಯಾನ್ ಕಾರ್ಕಳ, ಮಿಥುನ್ ಕುಮಾರ್ ಸೋನ ಕೊಲ್ಲಮೊಗ್ರು , ಪುಷ್ಪರಾಜ್ ಏನೇಕಲ್ , ಪ್ರತೀಕ ಎಸ್ ಎಸ್ ಶಿವಮೊಗ್ಗ ನಟಿಸಿದ್ದಾರೆ.