Ad Widget .

ಸೈನಿಕರೊಂದಿಗೆ ಹೋಳಿ ಹಬ್ಬ ಆಚರಿಸಿದ ರಾಜನಾಥ್ ಸಿಂಗ್

ಸಮಗ್ರ ನ್ಯೂಸ್: ರಕ್ಷಣಾ ಸಚಿವಾ ರಾಜ್‍ನಾಥ್ ಸಿಂಗ್ ಲೇಹ್‍ಗೆ ತೆರಳಿ ಸೈನಿಕರೊಂದಿಗೆ ಸಂಭ್ರಮದಿಂದ ಬಣ್ಣದ ಹಬ್ಬ ಹೋಳಿಯನ್ನು ಆಚರಿಸಿದರು. ಹೋಳಿ ಹಬ್ಬ ಆಚರಣೆ ವೇಳೆ ರಾಜನಾಥ್ ಸಿಂಗ್ ಜೊತೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಮತ್ತು ಲೆಫ್ಟಿನೆಂಟ್ ಜನರಲ್ ರಶೀಮ್ ಬಾಲಿ ಉಪಸ್ಥಿತರಿದ್ದರು.

Ad Widget . Ad Widget .

ಈ ಸಂದರ್ಭ ಯೋಧರನ್ನುದ್ದೇಶಿಸಿ ಮಾತನಾಡಿದ ಅವರು, ದೆಹಲಿ ನಮ್ಮ ರಾಜಧಾನಿಯಾದರೇ, ಲಡಾಖ್ ಶೌರ್ಯವನ್ನು ತೋರಿಸುವ ಮತ್ತೊಂದು ರಾಜಧಾನಿಯಾಗಿದೆ. ನಿಮ್ಮೆಲ್ಲರನ್ನು ಭೇಟಿ ಮಾಡಿ ಹೋಳಿ ಆಚರಿಸಿರುವುದು ನನಗೆ ಅತ್ಯಂತ ಸಂತೋಷದಾಯಕ ಕ್ಷಣ. ಸಿಯಾಚಿನ್ ಸಾಮಾನ್ಯ ಪ್ರದೇಶವಲ್ಲ. ಇದು ಭಾರತದ ಸಾರ್ವಭೌಮತ್ವ ಮತ್ತು ನಿರ್ಣಯದ ಸಂಕೇತ. ಇದು ನಮ್ಮ ರಾಷ್ಟ್ರೀಯ ನಿರ್ಣಯವನ್ನು ಪ್ರತಿನಿಧಿಸುತ್ತದೆ ಎಂದರು.

Ad Widget . Ad Widget .

ನಿಮ್ಮನ್ನು, ನಿಮ್ಮ ಮಕ್ಕಳನ್ನು, ನಿಮ್ಮ ಹೆತ್ತವರನ್ನು ಕುಟುಂಬವನ್ನು ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಅದಕ್ಕೆ ನಾವು ಯಾವಾಗಲೂ ಸಿದ್ಧರಿದ್ದೇವೆ. ನಾನು ನಿಮಗೆ ಏನನ್ನೂ ಹೇಳಬೇಕಿಲ್ಲ. ನೀವು ನಿಮ್ಮ ದೇಹ ಮತ್ತು ಮನಸ್ಸನ್ನು ಅರ್ಪಿಸಿ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೀರಿ. ನಮ್ಮ ಸರ್ಕಾರವೂ ಸಶಸ್ತ್ರಪಡೆಗಳ ಸುಧಾರಣೆಗಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

Leave a Comment

Your email address will not be published. Required fields are marked *