Ad Widget .

ಮೈಸೂರು: ಸಭೆ, ಸಮಾರಂಭಗಳಲ್ಲಿ ಉಡುಗೊರೆಯಾಗಿ ಬಂದಿದ್ದ 700 ಕೆಜಿ ಬೆಳ್ಳಿಯನ್ನು ಮಲೆ ಮಹದೇಶ್ವರನಿಗೆ ಕಾಣಿಕೆಯಾಗಿ ಕೊಟ್ಟ ಸಿಎಂ ಸಿದ್ದರಾಮಯ್ಯ

ಸಮಗ್ರ ನ್ಯೂಸ್: ಬಿಜೆಪಿಯವರು ಧರ್ಮ ವಿರೋಧಿ, ಹಿಂದೂ ವಿರೋಧಿ ಎಂದೆಲ್ಲ ಆಪಾದಿಸುತ್ತಾರಲ್ಲ ಯಾವತ್ತಾದರೂ ಸಿದ್ದರಾಮಯ್ಯ ತರಹ 700 ಕೆಜಿ ಯಷ್ಟು ದೊಡ್ಡ ಪ್ರಮಾಣದ ಬೆಳ್ಳಿಯನ್ನು ದೇವಸ್ಥಾನಕ್ಕೆ ಕೊಟ್ಟಿದ್ದಾರಾ? ಎಂದು ಹೇಳಿದವರು ಮತ್ಯಾರೂ ಅಲ್ಲ ಹುಣಸೂರು ಮಾಜಿ ಶಾಸಕ ಹೆಚ್.ಪಿ. ಮಂಜುನಾಥ್.

Ad Widget . Ad Widget .

ರಾಜ್ಯದಲ್ಲಿ 77 ಬೆಟ್ಟಗಳ ಒಡೆಯ ಉಘೇ ಉಘೇ ಅಂತಾನೆ ಭಕ್ತರು ಮಲೆಮಹದೇಶ್ವರನ ದರ್ಶನ ಪಡೆಯುತ್ತಾರೆ. ರಾಜ್ಯದಲ್ಲಿ ಅತಿ ಹೆಚ್ಚು ಆದಾಯ ಇರುವ ದೇವಸ್ಥಾನಗಳಲ್ಲಿ ಈ ಬೆಟ್ಟನ್ನೂ ಒಂದು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಭೆ, ಸಮಾರಂಭಗಳಲ್ಲಿ ಬೆಳ್ಳಿ ಗದೆ, ಬೆಳ್ಳಿ ಕತ್ತಿ ಹೀಗೆ ಅನೇಕ ಉಡುಗೊರೆ ಬಂದಿದ್ದ ಎಲ್ಲ ಉಡುಗೊರೆಗಳನ್ನು ಸೇರಿಸಿ ಸುಮಾರು 700 ಕೆ.ಜಿ. ಬೆಳ್ಳಿಯನ್ನು ಮಲೆ ಮಹದೇಶ್ವರ ಬೆಟ್ಟಕ್ಕೆ ಕೊಟ್ಟಿದ್ದಾರೆಂದು ಇದಕ್ಕೆ ಪ್ರಚಾರವನ್ನೂ ಪಡೆಯಲಿಲ್ಲ ಎಂದು ಮಾಜಿ ಶಾಸಕ ಹೇಳಿದ್ದಾರೆ .

Ad Widget . Ad Widget .

ಮೈಸೂರಿನಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ನಡೆದ ಕಾಂಗ್ರೆಸ್‌ ಸಂವಾದದಲ್ಲಿ ಮಾತನಾಡಿದ ಅವರು, ಸಭೆ, ಸಮಾರಂಭಗಳಲ್ಲಿ ಉಡುಗೊರೆ ಬಂದಿತ್ತು. ಬೆಳ್ಳಿ ಗದೆ, ಬೆಳ್ಳಿ ಕತ್ತಿ ಹೀಗೆ ಅನೇಕ ಉಡುಗೊರೆ ಬಂದವು. ಅದೆಲ್ಲವನ್ನೂ ಸಿಎಂ ಸಿದ್ದರಾಮಯ್ಯನವರು ಮಲೆ ಮಹದೇಶ್ವರ ಬೆಟ್ಟಕ್ಕೆ ಕೊಟ್ಟುಬಿಟ್ಟರು. ಅದನ್ನು ಪ್ರಚಾರ ಮಾಡಿಕೊಳ್ಳಲಿಲ್ಲ.ಕಾಂಗ್ರೆಸ್‌ನವರು ಹಿಂದೂ ದೇವರ ವಿರೋಧಿಗಳು ಎಂಬಂತೆ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ನಿಜಕ್ಕೂ ನಾವೇ ನಿಜವಾದ ದೈವ ಭಕ್ತರು ಮತ್ತು ಹಿಂದುಗಳು ಎಂದು ನಾವು ಸೀತಾರಾಮ ಅಂತ ನಮಸ್ಕಾರ ಮಾಡುತ್ತೇವೆ. ಬಿಜೆಪಿಯವರು ಜೈ ಶ್ರೀರಾಮ್ ಅಂತ ಕೂಗುತ್ತಾರೆ ಎಂದರು.

Leave a Comment

Your email address will not be published. Required fields are marked *