Ad Widget .

ಬಿಜೆಪಿಯ 5ನೇ ಪಟ್ಟಿ‌ ಬಿಡುಗಡೆ| ಅನಂತ್ ಕುಮಾರ್ ಹೆಗ್ಡೆಗೆ ಕೋಕ್| ಶೆಟ್ಟರ್ ಗೆ ಬೆಳಗಾವಿ ಟಿಕೆಟ್

ಸಮಗ್ರ ನ್ಯೂಸ್: ಬಿಜೆಪಿಯು ಲೋಕ ಸಭಾ ಚುನಾವಣೆಗೆ 5 ನೇ ಪಟ್ಟಿ ಬಿಡುಗಡೆ ಮಾಡಿದ್ದು, 111 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಲಾಗಿದೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.

Ad Widget . Ad Widget .

ಪ್ರಖರ ಹಿಂದುತ್ವವಾದಿ ಕರ್ನಾಟಕದ ಉತ್ತರ ಕನ್ನಡದ ಅನಂತ್ ಕುಮಾರ್ ಹೆಗಡೆಗೆ ಈ ಬಾರಿ ಲೋಕಸಭಾ ಟಿಕೆಟ್ ನಿರಾಕರಿಸಲಾಗಿದೆ. ಅವರ ಬದಲಿಗೆ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಟಿಕೆಟ್ ಘೋಷಿಸಲಾಗಿದೆ.

Ad Widget . Ad Widget .

ಹಿಮಾಚಲ ಪ್ರದೇಶದ ಮಂಡಿಯಿಂದ ಚಿತ್ರನಟಿ ಕಂಗನಾ ರನೌತ್ ಲೋಕಸಭೆಗೆ ಸ್ಫರ್ಧಿಸಲಿದ್ದಾರೆ. ದುಮ್ಕಾದಿಂದ ಸೀತಾ ಸೊರೆನ್, ಬೆಳಗಾವಿಯಿಂದ ಜಗದೀಶ ಶೆಟ್ಟರ್ ಹಾಗೂ ರಾಯಚೂರು ಎಸ್ ಟಿ ಮೀಸಲು ಕ್ಷೇತ್ರದಲ್ಲಿ ರಾಜ ಅಮರೇಶ್ವರ ನಾಯಕ್ ಗೆ ಟಕೆಟ್ ನೀಡಲಾಗಿದೆ.

ಕುರುಕ್ಷೇತ್ರದಿಂದ ನವೀನ್ ಜಿಂದಾಲ್ ಸ್ಪರ್ಧಿಸಲಿದ್ದಾರೆ. ಚಿಕ್ಕಬಳ್ಳಾಪುರದಿಂದ ಕೆ ಸುಧಾಕರ್, ಸಂಬಲ್ಪುರದಿಂದ ಧರ್ಮೇಂದ್ರ ಪ್ರಧಾನ್, ಬಾಲಸೋರ್‌ನಿಂದ ಪ್ರತಾಪ್ ಸಾರಂಗಿ, ಪುರಿಯಿಂದ ಸಂಬಿತ್ ಪಾತ್ರ, ಭುವನೇಶ್ವರದಿಂದ ಅಪರಿಜಿತಾ ಸಾರಂಗಿ, ಮೀರತ್‌ನಿಂದ ಅರುಣ್ ಗೋವಿಲ್ ಸ್ಪರ್ಧಿಸಲಿರುವ ಪ್ರಮುಖರು.

Leave a Comment

Your email address will not be published. Required fields are marked *