ಬಿಸಿಲ‌ ಬೇಗೆಗೆ ತಂಪೆರೆದ‌ ವರುಣ| ಸುಳ್ಯ, ಕಡಬ ತಾಲೂಕಿನ ಹಲವೆಡೆ ಉತ್ತಮ ಮಳೆ

ಸಮಗ್ರ ನ್ಯೂಸ್: ಹಲವು ದಿನಗಳಿಂದ‌ ಸೆಕೆಯಿಂದ ತತ್ತರಿಸಿದ್ದ‌ ಕರಾವಳಿಗೆ ಕಳೆದೆರಡು ದಿನಗಳಿಂದ‌ ಮಳೆಯ‌ ಸಿಂಚನವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹಲವೆಡೆ ಮತ್ತು‌ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಸಹಿತ ವಿವಿಧ ಕಡೆಗಳಲ್ಲಿ ಶನಿವಾರ ಸಂಜೆ ಉತ್ತಮ ಮಳೆಯಾಗಿದೆ.

Ad Widget ... ..

ಎರಡು ದಿನಗಳಿಂದ ಮೋಡದ ವಾತಾವರಣ ಕಂಡುಬಂದಿತ್ತು ಶುಕ್ರವಾರ ಸಂಜೆ ಸಾಮಾನ್ಯ ಮಳೆಯಾಗಿತ್ತು. ಸುಳ್ಯ, ಕಡಬ ತಾಲೂಕಿನ ಕೊಲ್ಲಮೊಗ್ರ, ಕಲ್ಲಾಜೆ, ಬಳ್ಪ, ಗುತ್ತಿಗಾರು, ಸುಬ್ರಹ್ಮಣ್ಯ, ಮರ್ಕಂಜ, ಎಲಿಮಲೆ, ಸಂಪಾಜೆ, ಅರಂತೋಡು, ಹರಿಹರ ಪಲ್ಲತ್ತಡ್ಕ, ಪಂಬೆತ್ತಾಡಿ ಸೇರಿದಂತೆ ವಿವಿಧ ಪ್ರದೇಶದಲ್ಲಿ ಮಳೆಯಾಗಿದೆ.

Ad Widget

ಮುನ್ಸೂಚನೆಯಂತೆ ಭಾನುವಾರವೂ ಮಳೆಯ ಸಾಧ್ಯತೆ ಇದ್ದು, ಕರಾವಳಿ ಹಾಗೂ ಮಲೆನಾಡಿನ ಹಲವೆಡೆ ಸಾಧಾರಣದಿಂದ ಉತ್ತಮ ಮಳೆಯಾಗಲಿದೆ.

Leave a Comment

Your email address will not be published. Required fields are marked *