ಒಡಿಶಾದಲ್ಲಿ ಮೈತ್ರಿ ಇಲ್ಲ/ ಬಿಜೆಪಿ ಸೃಷ್ಟನೆ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆ ಮತ್ತು ಒಡಿಶಾದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಆಡಳಿತಾರೂಢ ಬಿಜೆಡಿ ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸಲಿವೆ. ರಾಜ್ಯದಲ್ಲಿ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂಬುದಾಗಿ ಬಿಜೆಪಿ ಸ್ಪಷ್ಟಪಡಿಸಿದೆ.

Ad Widget ... ..

ಒಡಿಶಾದಲ್ಲಿ ನಾಮಪತ್ರ ಸಲ್ಲಿಕೆ ಏ.18ರಿಂದ ಪ್ರಾರಂಭವಾಗಲಿದ್ದು, ಈ ಬಾರಿ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಎನ್‍ಡಿಎ ಸೇರಬಹುದು ಎಂದು ನಿರೀಕ್ಷಿಸಲಾಗಿತ್ತು.

Ad Widget

ಇದರ ಕುರಿತಾಗಿ ಹಲವು ಬಾರಿ ಮಾತುಕತೆಯೂ ನಡೆದಿತ್ತು. ಆದರೆ ಮಾತುಕತೆಗಳು ಫಲಪ್ರದವಾಗದ ಹಿನ್ನೆಲೆಯಲ್ಲಿ ಎಲ್ಲ 21 ಲೋಕಸಭಾ ಕ್ಷೇತ್ರ ಮತ್ತು 147 ವಿಧಾನಸಭಾ ಕ್ಷೇತ್ರಗಳಲ್ಲಿ ಏಕಾಂಗಿ ಸ್ಪರ್ಧೆ ಮಾಡುವುದಾಗಿ ಬಿಜೆಪಿ ಪ್ರಕಟಿಸಿದೆ.

Leave a Comment

Your email address will not be published. Required fields are marked *