Ad Widget .

ಮಾಸ್ಕೋದಲ್ಲಿ ಗುಂಡಿನ ದಾಳಿ/ 40ಕ್ಕೂ ಅಧಿಕ ಜನರ ಸಾವು

ಸಮಗ್ರ ನ್ಯೂಸ್: ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಮೂರು ಜನ ಬಂದೂಕುಧಾರಿಗಳು ಸಭೆ-ಸಮಾರಂಭಗಳು ನಡೆಯುವ ಸಿಟಿ ಕ್ರಾಕಸ್ ಹಾಲ್‍ಗೆ ನುಗ್ಗಿ ಅಂಧಾದುಂಧಿ ದಾಳಿ ನಡೆಸಿ ಬೆಂಕಿ ಹಚ್ಚಿದ್ದು, ಸುಮಾರು 40ಕ್ಕೂ ಅಧಿಕ ಜನರು ಸಾವನ್ನಪ್ಪಿರುವ ಭೀಕರ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

Ad Widget . Ad Widget .

ಹಾಲ್‍ನಲ್ಲಿ ಸಮಾರಂಭವೊಂದು ನಡೆಯುತ್ತಿದ್ದಾಗ ಸುಮಾರು 3 ಬಂದೂಕುಧಾರಿಗಳು ನುಗ್ಗಿ ಯದ್ವಾತದ್ವಾ ಗುಂಡು ಹಾರಿಸಿದ್ದು ಅಲ್ಲದೇ ಹಾಲ್‍ಗೆ ಬೆಂಕಿ ಹಚ್ಚಿದ್ದಾರೆ. ಆಗ ಭಯಗ್ರಸ್ತ ಜನರು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಈ ವೇಳೆ ಅನೇಕರು ಅಸುನೀಗಿ ಹಲವರು ಗಾಯಗೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

Ad Widget . Ad Widget .

ದಾಳಿಕೋರರ ವಿರುದ್ಧ ಕಾರ್ಯಾಚರಣೆಗೆ ರಷ್ಯಾ ಭದ್ರತಾ ಪಡೆಗಳು ಸ್ಥಳಕ್ಕೆ ಆಗಮಿಸಿವೆ ಹಾಗೂ ದಾಳಿಕೋರರಿಗೆ ಶೋಧ ಆರಂಭಿಸಿವೆ. ರಷ್ಯಾ-ಉಕ್ರೇನ್ ಯುದ್ಧ ನಡೆದಿರುವಾಗಲೇ ಈ ಘಟನೆ ನಡೆದಿದೆ. ದಾಳಿಕೋರರು ಯಾರೆಂಬ ಮಾಹಿತಿ ಲಭ್ಯವಾಗಿಲ್ಲ.

Leave a Comment

Your email address will not be published. Required fields are marked *