Ad Widget .

ಮಂಗಳೂರು: ಹುಡುಗಿಯ ವಿಚಾರ- ಯುವಕನಿಗೆ ಹಿಗ್ಗಾ ಮುಗ್ಗಾ ಥಳಿತ

ಸಮಗ್ರ ನ್ಯೂಸ್‌: ನಗರದ ಪ್ರತಿಷ್ಠಿತ ಕಾಲೇಜು ಒಂದರಲ್ಲಿ ವಿದ್ಯಾರ್ಥಿಗಳಾಗಿರುವ ಯುವಕರು ಹುಡುಗಿ ವಿಚಾರದಲ್ಲಿ ಹೊಡೆದಾಡಿದ್ದು, ಒಬ್ಬ ಯುವಕನಿಗೆ ಮುಖದಲ್ಲಿ ರಕ್ತ ಹರಿಯುವಂತೆ ಹಿಗ್ಗಾಮುಗ್ಗಾ ಹೊಡೆದಿರುವ ಘಟನೆಯ ವಿಡಿಯೋ ವೈರಲ್ ಆಗಿದೆ.

Ad Widget . Ad Widget .

ನೀರುಮಾರ್ಗದಲ್ಲಿ ಈ ಘಟನೆ ನಡೆದಿದ್ದು ವಿಡಿಯೋದಲ್ಲಿ ಯುವಕರ ಹೊಡೆದಾಟದ ದೃಶ್ಯ ಇದೆ. ಬಟ್ಟೋಡಿ ನಿವಾಸಿ ಯುವಕ ತಾನು ಪ್ರೀತಿಸುತ್ತಿದ್ದ ಹುಡುಗಿಯಲ್ಲಿ ಪದೇ ಪದೇ ಹಣ ಕೇಳಿ ಹಿಂಸೆ ನೀಡುತ್ತಿದ್ದ. ಈ ಬಗ್ಗೆ ಯುವತಿ ತನ್ನ ನೀರುಮಾರ್ಗದ ಗೆಳೆಯನಿಗೆ ವಿಷಯ ತಿಳಿಸಿದ್ದಳು. ವಿಷಯ ತಿಳಿದ ಲವರ್ ಯುವಕ ಬಜೋಡಿಯಿಂದ ಐದಾರು ಮಂದಿ ಯುವಕರ ಜೊತೆಗೆ ಕಾರಿನಲ್ಲಿ ನೀರುಮಾರ್ಗಕ್ಕೆ ತೆರಳಿದ್ದು ಅಲ್ಲಿನ ಯುವಕನನ್ನು ಪ್ರಶ್ನೆ ಮಾಡಿದ್ದಾರೆ.

Ad Widget . Ad Widget .

ತಡರಾತ್ರಿಯಲ್ಲಿ ಪಾಲ್ದಾನೆ ಎಂಬಲ್ಲಿ ಆ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಲದೆ, ಹೊಡೆದಾಟದ ವಿಡಿಯೋವನ್ನು ಮಾಡಿ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಹುಡುಗರು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಒಬ್ಬ ಯುವಕ ಕಳೆದ ವರ್ಷ ಡಿಗ್ರಿ ಪೂರೈಸಿದ್ದರೆ, ಹಲ್ಲೆ ನಡೆಸಿದ ಯುವಕ ಈ ಸಲ ಅಂತಿಮ ಪದವಿಯಲ್ಲಿದ್ದಾನೆ. ಇನ್ನು ಎರಡೂ ಕಡೆಯ ಕುಟುಂಬಸ್ಥರು ಕಂಕನಾಡಿ ಗ್ರಾಮಾಂತರ ಠಾಣೆಗೆ ಬಂದು ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥ ಮಾಡಿದ್ದಾರೆ.

Leave a Comment

Your email address will not be published. Required fields are marked *