Ad Widget .

17ನೇ ಆವೃತ್ತಿ ಐಪಿಎಲ್ ಆರಂಭ/ ಮೊದಲ ಪಂದ್ಯದಲ್ಲೇ ದಾಖಲೆ ನಿರ್ಮಿಸಿದ ಕೊಹ್ಲಿ

ಸಮಗ್ರ ನ್ಯೂಸ್: ಐಪಿಎಲ್‍ನ 17ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ತಂಡದ ವಿರಾಟ್ ಕೊಹ್ಲಿ ಕೆಲ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಟಿ20 ಕ್ರಿಕೆಟ್‍ನಲ್ಲಿ 12 ಸಾವಿರ ರನ್‍ಗಳ ಮೈಲುಗಲ್ಲು ಸಾಧಿಸುವ ಮೂಲಕ ಟಿ20 ಕ್ರಿಕೆಟ್‍ನಲ್ಲಿ 12000 ರನ್ ಪೂರ್ಣಗೊಳಿಸಿದ ಭಾರತದ ಮೊದಲ ಮತ್ತು ವಿಶ್ವದ 6ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Ad Widget . Ad Widget .

ವೆಸ್ಟ್‍ಇಂಡೀಸ್‍ನ ಕ್ರಿಸ್ ಗೇಲ್(14562), ಪಾಕಿಸ್ತಾನದ ಶೋಯೆಬ್ ಮಲಿಕ್(13360), ವಿಂಡೀಸ್‍ನ ಕೀರನ್ ಪೆÇಲ್ಲಾರ್ಡ್(12900), ಇಂಗ್ಲೆಂಡ್‍ನ ಅಲೆಕ್ಸ್ ಹೇಲ್ಸ್(12319) ಹಾಗೂ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್(12065) ಈ ಮೊದಲು ಈ ಸಾಧನೆ ಮಾಡಿದ್ದಾರೆ.

Ad Widget . Ad Widget .

ವೇಗವಾಗಿ 12000 ರನ್ ಪೂರ್ತಿಗೊಳಿಸಿದವರ ಪಟ್ಟಿಯಲ್ಲಿ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ಅವರು 360ನೇ ಇನ್ನಿಂಗ್ಸ್‍ನಲ್ಲಿ ಈ ಮೈಲಿಗಲ್ಲು ಸಾಧಿಸಿದರು. ಗೇಲ್ ಕೇವಲ 345 ಇನ್ನಿಂಗ್ಸ್ ತೆಗೆದುಕೊಂಡಿದ್ದರು.

ಇದೇ ಪಂದ್ಯದಲ್ಲಿ ಕೊಹ್ಲಿ ಚೆನ್ನೈ ವಿರುದ್ಧ 1000 ರನ್ ಪೂರ್ಣಗೊಳಿಸಿದರು. ಈ ಮೂಲಕ ಐಪಿಎಲ್‍ನ 2 ತಂಡಗಳ ವಿರುದ್ಧ 1000 ರನ್ ಕಲೆಹಾಕಿದ 2ನೇ ಆಟಗಾರ ಎನಿಸಿಕೊಂಡರು. ಡೇವಿಡ್ ವಾರ್ನರ್ ಅವರು ಪಂಜಾಬ್ ಹಾಗೂ ಕೋಲ್ಕತಾ ವಿರುದ್ಧ ತಲಾ 1000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಕೊಹ್ಲಿ ಈ ಮೊದಲು ಡೆಲ್ಲಿ ವಿರುದ್ಧವೂ ಈ ಸಾಧನೆ ಮಾಡಿದ್ದರು.

ಚೆನ್ನೈ ವಿರುದ್ಧ ಈ 1000 ರನ್ ಕಲೆಹಾಕಿದ 2ನೇ ಬ್ಯಾಟರ್ ಕೊಹ್ಲಿ. ಶಿಖರ್ ಧವನ್ ಕೂಡಾ ಚೆನ್ನೈ ವಿರುದ್ಧ ಈ ಸಾಧನೆ ಮಾಡಿದ್ದಾರೆ.

Leave a Comment

Your email address will not be published. Required fields are marked *