ಸಮಗ್ರ ನ್ಯೂಸ್: ವಿರಾಜಪೇಟೆ ಗೋಣಿಕೊಪ್ಪ ಮುಖ್ಯ ರಸ್ತೆಯ ಕೊಳತ್ತೋಡು ಗ್ರಾಮದಲ್ಲಿ ಲಾರಿ ಹಾಗೂ ಆ್ಯಂಬುಲೆನ್ಸ್ ನಡುವೆ ಭೀಕರ ರಸ್ತೆ ಅಪಘಾತ ಸಂಬವಿಸಿದ್ದು ಲಾರಿ ಚಾಲಕನ ಸಮಯ ಪ್ರಜ್ಞೆಯಿಂದ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿರಾಜಪೇಟೆ ಸರಕಾರಿ ಆಸ್ಪತ್ರೆಗೆ ಸಂಬಂಧಿಸಿದ ಆ್ಯಂಬುಲೆನ್ಸ್, ವಿರಾಜಪೇಟೆ DHS ಕಂಪೆನಿಗೆ ಸೇರಿದ ಲಾರಿ ನಡುವೆ ಬಿಟ್ಟಂಗಾಲದಲ್ಲಿ ಅಪಘಾತ ಸಂಭವಿಸಿದೆ. ಸವಾರನನ್ನು ಆಸ್ಪತ್ತೆಗೆ ಸಾಗಿಸುವಾಗ ಅತೀ ವೇಗದಿಂದ ಬಂದ ಆಂಬ್ಯುಲೆನ್ಸ್ ಲಾರಿಗೆ ಗುದ್ದಿದ್ದು, ಇದನ್ನು ರಕ್ಷಿಸಲು ಹೋಗಿ ಮರಕ್ಕೆ ಗುದ್ದಿ ಲಾರಿ ನಿಲ್ಲಿಸಿ ಲಾರಿ ಚಾಲಕನ ಸಮಯ ಪ್ರಜ್ಞೆಯಿಂದ ಆ್ಯಂಬುಲೆನ್ಸ್ ನಲ್ಲಿ ಇದ್ದವರು ಪ್ರಾಣಾಪಾಯದಿಂದ ಪಾರಾಗಿರುತ್ತಾರೆ.
ಆ್ಯಂಬುಲೆನ್ಸ್ ಚಾಲಕನನ್ನು ಸುಳ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಪ್ರಕರಣ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ