ಕಾಸರಗೋಡು: ವಿದ್ಯುತ್ ಶಾಕ್ ತಗುಲಿ ಯುವಕ ಸಾವು

ಸಮಗ್ರ ನ್ಯೂಸ್‌ : ವಿದ್ಯುತ್ ಶಾಕ್ ತಗುಲಿ ಯುವಕನೊಬ್ಬ ಮೃತ ಪಟ್ಟ ಘಟನೆ ಶುಕ್ರವಾರ ಮಂಜೇಶ್ವರ ಹೊಸಂಗಡಿ ಸಮೀಪದ ಅಂಗಡಿಪದವು ಎಂಬಲ್ಲಿ ನಡೆದಿದೆ.

Ad Widget ... ..

ಅಂಗಡಿ ಪದವಿನ ಪ್ರಜ್ವಲ್ (19) ಮೃತ ಪಟ್ಟ ಯುವಕ. ಬೈಕ್ ವರ್ಕ್ಸ್ ಶೋಪ್ ನಲ್ಲಿ ದುಡಿಯುತ್ತಿದ್ದ ಪ್ರಜ್ವಲ್ ಗೆ ಶಾಕ್ ತಗಲಿದ್ದು , ಬೊಬ್ಬೆ ಕೇಳಿ ಧಾವಿಸಿ ಬಂದ ಸ್ಥಳೀಯರು ವಿದ್ಯುತ್ ಕಂಬದಿಂದ ವಿದ್ಯುತ್ ವಯರನ್ನು ವಿಚ್ಚೇಧಿಸಿ ಯುವಕನನ್ನು ಉಪ್ಪಳದ ಆಸ್ಪತ್ರೆಗೆ ಕೊಂಡೊಯ್ದರೂ ದಾರಿ ಮಧ್ಯೆ ಮೃತ ಪಟ್ಟರು. ಮೃತ ದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿರಿಸಲಾಗಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

Ad Widget

Leave a Comment

Your email address will not be published. Required fields are marked *