ಸಮಗ್ರ ನ್ಯೂಸ್: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಾರ್ಚ್ 24, 29, ಏ.2ರಂದು ಐಪಿಎಲ್ ಪಂದ್ಯಾವಳಿ ಮತ್ತು ಮಾ. 24 ರಂದು ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಹಾಫ್ ಮ್ಯಾರಥಾನ್ ಆಯೋಜನೆ ಮಾಡಿರುವ ಹಿನ್ನಲೆಯಲ್ಲಿ ಮಾರ್ಚ್ 24 ರಂದು ತನ್ನ ಎಲ್ಲಾ ನಾಲ್ಕು ಟರ್ಮಿನಲ್‍ಗಳಿಂದ ಮತ್ತು ಇಂಟರ್‍ಚೇಂಜ್ ಸ್ಟೇಷನ್ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ- ಮೆಜೆಸ್ಟಿಕ್‍ನಿಂದ ಬೆಳಗ್ಗೆ 7ರ ಬದಲು ಮುಂಜಾನೆ 4ರಿಂದ ಮತ್ತು ಐಪಿಎಲ್ ವೀಕ್ಷಕರಿಗಾಗಿ ಮಾರ್ಚ್ 24, 29, ಏ.2ರಂದು ನಮ್ಮ ಮೆಟ್ರೋ ಕೊನೆಯ ಸೇವೆಯನ್ನು ರಾತ್ರಿ 11.30ರವರೆಗೆ ವಿಸ್ತರಿಸಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಪಂದ್ಯ ನಡೆಯುವ ದಿನ ಮಧ್ಯಾಹ್ನ 2 ಗಂಟೆಯಿಂದ ರಿಟರ್ನ್ ಜರ್ನಿ ಸೇರಿ 50 ರೂ.ಗೆ ಪೇಪರ್ ಟಿಕೆಟ್ ಖರೀದಿಸಿ ಕಬ್ಬನ್‍ಪಾರ್ಕ್, ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದಿಂದ ಪ್ರಯಾಣಿಸಬಹುದು. ರಾತ್ರಿ 8 ಗಂಟೆಯಿಂದ ದಿನದ ಸೇವೆ ಕೊನೆಗೊಳ್ಳುವವರೆಗೆ ಮಾನ್ಯವಾಗಿರುತ್ತದೆ. ಕಬ್ಬನ್‍ಪಾರ್ಕ್, ಎಂ.ಜಿ.ರಸ್ತೆ ನಿಲ್ದಾಣದಲ್ಲಿ ಟೋಕನ್ ಲಭ್ಯವಿರುವುದಿಲ್ಲ. ಕ್ಯೂಆರ್ ಕೋಡ್ ಟಿಕೆಟ್, ಸ್ಮಾರ್ಟ್ ಕಾರ್ಡ್, ಎನ್‍ಸಿಎಂಸಿ ಕಾರ್ಡ್ ಬಳಸಬಹುದಾಗಿದೆ. ಆ ಮೂಲಕ ಟಿಕೆಟ್ ಕೌಂಟರ್‍ನಲ್ಲಿ ಜನಸಂದಣಿ ತಪ್ಪಿಸಲು ಬಿಎಂಆರ್‍ಸಿಎಲ್‍ನಿಂದ ಕ್ರಮಕೈಗೊಳ್ಳಲಾಗಿದೆ. ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಲು ನಮ್ಮ ಮೆಟ್ರೋ ಸೂಚಿಸಿದೆ.