ಕಲಬುರಗಿಯಲ್ಲಿ ಬಡ್ಡಿ ಹಣ ನೀಡದಕ್ಕೆ ವ್ಯಕ್ತಿಯ ಮೇಲೆ ಆ್ಯಸಿಡ್ ಅಟ್ಯಾಕ್

ಸಮಗ್ರ ನ್ಯೂಸ್: ಬಡ್ಡಿ ಹಣಕ್ಕಾಗಿ ವ್ಯಕ್ತಿ ಮೇಲೆ ಆ್ಯಸಿಡ್ ಎರಚಿರುವ ಅಮಾನವೀಯ ಘಟನೆ ಕಲಬುರಗಿಯಲ್ಲಿ ನಡೆದಿದೆ. ಜುಬೇರ್ ಅಹ್ಮದ್ ಎಂಬುವರ ಮೇಲೆ ಇಮ್ರಾನ್‌ ಖಾನ್ ಎಂಬ ವ್ಯಕ್ತಿ ಆ್ಯಸಿಡ್ ನಿಂದ ದಾಳಿ ನಡೆಸಿದ್ದಾನೆ. ಜುಬೇರ್ ಬಲಗೈ ಹಾಗೂ ಕಾಲಿನ ಮೇಲೆ ಆ್ಯಸಿಡ್ ಬಿದ್ದಿದ್ದು ಸುಟ್ಟ ಗಾಯಗಳಾಗಿವೆ. ಸದ್ಯ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಗಾಯಾಳುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Ad Widget ... ..

ಅರ್ಷದ್ ಮೀನು ವ್ಯಾಪಾರಕ್ಕಾಗಿ ಪರ್ವೇಜ್ ಬಳಿ ಜುಬೇರ್ 35 ಲಕ್ಷ ಹಣ ಪಡೆದುಕೊಂಡಿದ್ದ. ಅದಕ್ಕೆ ಬಡ್ಡಿ, ಚಕ್ರಬಡ್ಡಿ ಹಚ್ಚಿ 90 ಲಕ್ಷ ಹಣ ಕೊಡುವಂತೆ ಅರ್ಷದ್ ಗ್ಯಾಂಗ್ ಪೀಡಿಸುತ್ತಿತ್ತು. ಇತ್ತೀಚೆಗೆ ಜುಬೇರ್​ನನ್ನು ಕರೆಸಿ ರೂಂ ನಲ್ಲಿ ಕೂಡಿ ಹಾಕಿ ಹಣ ನೀಡುವಂತೆ ಈ ಗ್ಯಾಂಗ್ ಪೀಡಿಸಿತ್ತು. ಬಳಿಕ ಇಮ್ರಾನ್ ಖಾನ್ ಎಂಬ ವ್ಯಕ್ತಿಯಿಂದ ಆ್ಯಸಿಡ್ ದಾಳಿ ನಡೆದಿದೆ. ಕಲಬುರಗಿ ಖರ್ಗೆ ಪೆಟ್ರೋಲ್ ಬಂಕ್ ಬಳಿ ಆ್ಯಸಿಡ್ ದಾಳಿ ನಡೆದಿದೆ. ಈಗಾಗಲೇ ಇಮ್ರಾನ್‌ ಖಾನ್ ಮೇಲೆ ವಿವಿಧ ಠಾಣೆಗಳಲ್ಲಿ ಕೇಸ್​ಗಳು ದಾಖಲಾಗಿವೆ. ಬಡ್ಡಿ ಹಣ ನೀಡಲು ಒಪ್ಪದೇ ಇದ್ದಾಗ ಆ್ಯಸಿಡ್ ದಾಳಿ ನಡೆದಿದೆ ಎನ್ನಲಾಗುತ್ತಿದೆ.

Ad Widget

ಘಟನೆ ಸಂಬಂಧ ಕಲಬುರಗಿಯ ಎಂ.ಬಿ.ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಗಾಯಾಳು ಕುಟುಂಬಸ್ಥರು ಆಸ್ಪತ್ರೆಯಲ್ಲಿ ನ್ಯಾಯಕ್ಕಾಗಿ ಕಣ್ಣೀರು ಹಾಕುತ್ತಿದ್ದಾರೆ.

Leave a Comment

Your email address will not be published. Required fields are marked *